ಕಿನ್ನಿಗೋಳಿ ಯೋಗಾಂಜಲಿ-2013

ಕಿನ್ನಿಗೋಳಿ: ಉತ್ತಮ ಆರೋಗ್ಯ ಮಾನಸಿಕ ಸ್ಥೆರ್ಯ ಬಲಗೊಳ್ಳಬೇಕಾದರೆ ಯೋಗ ಅತೀ ಅಗತ್ಯ ದೀರ್ಘಾಯುಶ್ಯದ ಮೂಲ ಮಂತ್ರವೇ ಯೋಗ ಎಂದು ಕಟೀಲು ದೇವಳ ಅರ್ಚಕ ಹರಿನಾರಾಯಣದಾಸ ಆಸ್ರಣ್ಣ ಹೇಳಿದರು.
ಭಾನುವಾರ ಕಿನ್ನಿಗೋಳಿ ಯುಗಪುರುಷ ಸಭಾಭವನದಲ್ಲಿ ಶ್ರೀ ಪತಂಜಲಿ ಯೋಗ ಅಧ್ಯಯನ ಮಂದಿರ ಕುಜಿಂಗಿರಿ ಹಾಗೂ ಗಮ್ಮತ್ ಕಲಾವಿದೆರ್ ಸಹಯೋಗದೊಂದಿಗೆ 8 ನೇ ವರ್ಷದ ಯೋಗಾಂಜಲಿ- 2013 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಈ ಸಂದರ್ಭ ನಾಗಸ್ವರ ವಾದಕ ನಾಗೇಶ್ ಬಪ್ಪನಾಡು ಹಾಗೂ ಅಂತರಾಷ್ಟ್ರೀಯ ಯೋಗಪಟು ರಮೇಶ್ ಪಿ. ಸುಳ್ಯ ಅವರನ್ನು ಸನ್ಮಾನಿಸಲಾಯಿತು.
ಯುಗಪುರುಷದ ಭುವನಾಭಿರಾಮ ಉಡುಪ ಅಧ್ಯಕ್ಷತೆ ವಹಿಸಿದ್ದರು. ವೇದ ವಿದ್ವಾಂಸ ವಾದಿರಾಜ ಉಪಾಧ್ಯಾಯ ಕೊಲಕಾಡಿ ಶುಭಾಶಂಸನೆಗೈದರು. ದುರ್ಗಾ ವಿದ್ಯಾ ಸಮೂಹ ಸಂಸ್ಥೆ ಅಧ್ಯಕ್ಷ ಭಾಸ್ಕರ ದೇವಸ್ಯ, ಧರ್ಮದರ್ಶಿ ಹರಿಕೃಷ್ಣ ಪುನರೂರು, ಸಾಗರಿಕಾ ಸಂಸ್ಥೆಯ ಧನಂಜಯ ಶೆಟ್ಟಿಗಾರ್, ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ದೇವಪ್ರಸಾದ್ ಪುನರೂರು, ಮಾಜಿ ಉಪಾಧ್ಯಕ್ಷೆ ಹೇಮಲತಾ ಬಿ. ಅಮೀನ್ ಉಪಸ್ಥಿತರಿದ್ದರು.
ಸಂಘಟಕ ಹರಿರಾಜ ಶೆಟ್ಟಿಗಾರ್ ಕುಜಿಂಗಿರಿ ಸ್ವಾಗತಿಸಿದರು. ಮೇಘವಾಣಿ ಕಾರ್ಯಕ್ರಮ ನಿರೂಪಿಸಿದರು.

Kinnigoli06111302

Comments

comments

Comments are closed.

Read previous post:
Kinnigoli06111301
ಕಿನ್ನಿಗೋಳಿ – ಗೂಡುದೀಪ ಸ್ಪರ್ಧೆ

ಕಿನ್ನಿಗೋಳಿ: ಕಿನ್ನಿಗೋಳಿ ರೋಟರಿ ಕ್ಲಬ್, ರೋಟರಾಕ್ಟ್, ಇನ್ನರ್ ವೀಲ್, ಸಾರ್ವಜನಿಕ ಗಣೇಶೋತ್ಸವ ಸಮಿತಿ , ಸೌತ್ ಕೆನರಾ ಪೊಟೋಗ್ರಾಫರ‍್ಸ್ ಆಸೋಸಿಯೇಶನ್ ಮೂಲ್ಕಿ ವಲಯ ಮತ್ತು ನಮ್ಮಕಿನ್ನಿಗೋಳಿ ಡಾಟ್ ಕಾಂ. ಇದರ...

Close