ಕಿನ್ನಿಗೋಳಿ – ಗೂಡುದೀಪ ಸ್ಪರ್ಧೆ

ಕಿನ್ನಿಗೋಳಿ: ಕಿನ್ನಿಗೋಳಿ ರೋಟರಿ ಕ್ಲಬ್, ರೋಟರಾಕ್ಟ್, ಇನ್ನರ್ ವೀಲ್, ಸಾರ್ವಜನಿಕ ಗಣೇಶೋತ್ಸವ ಸಮಿತಿ , ಸೌತ್ ಕೆನರಾ ಪೊಟೋಗ್ರಾಫರ‍್ಸ್ ಆಸೋಸಿಯೇಶನ್ ಮೂಲ್ಕಿ ವಲಯ ಮತ್ತು ನಮ್ಮಕಿನ್ನಿಗೋಳಿ ಡಾಟ್ ಕಾಂ. ಇದರ ಆಶ್ರಯದಲ್ಲಿ ಕಿನ್ನಿಗೋಳಿ ಯುಗಪುರುಷ ಸಹಯೋಗದಲ್ಲಿ ದೀಪಾವಳಿ ಪ್ರಯುಕ್ತ ಗೂಡುದೀಪ ಸ್ಪರ್ಧೆ ಶನಿವಾರದಂದು ಯುಗಪುರುಷ ಸಭಾಭವನದಲ್ಲಿ ನಡೆಯಿತು. ಯುಗಪುರುಷದ ಸಂಪಾದಕ ಭುವನಾಭಿರಾಮ ಉಡುಪ, ಎಸ್.ಕೆ.ಪಿ.ಎ. ಮೂಲ್ಕಿ ವಲಯದ ಅಧ್ಯಕ್ಷ ನವೀನ್ ಕುಮಾರ್, ಇನ್ನರ್ ವೀಲ್ ಅಧ್ಯಕ್ಷೆ ಸಿಂತಿಯಾ ಕುಟಿನ್ನೋ , ರೋಟರ‍್ಯಾಕ್ಟ್ ಮಾಜಿ ಅಧ್ಯಕ್ಷ ರಾಜೇಶ್ ಕೆಂಚನಕೆರೆ, ಸುಮಿತ್ ಕುಮಾರ್, ಶರತ್ ಶೆಟ್ಟಿ , ಉದ್ಯಮಿ ಪ್ರಥ್ವಿರಾಜ ಆಚಾರ್ಯ, ಉದಯಕುಮಾರ್, ದೇವಿದಾಸ್ ಶೆಟ್ಟಿ , ರಮೇಶ್ ಉಳೆಪಾಡಿ, ರಾಮಣ್ಣ ಕುಲಾಲ್ ಮತ್ತಿತರರು ಉಪಸ್ಥಿತರಿದ್ದರು.
ವಿಜೇತರ ವಿವರ – ಪ್ರಥಮ – ಜಗದೀಶ ಕೆ. ಅಮೀನ್ ಸುಂಕದ ಕಟ್ಟೆ , ದ್ವಿತೀಯ – ಉಮೇಶ್ ಕಾವೂರು, ತೃತೀಯ – ನಿತ್ಯಾನಂದ ಯುವಕ ಮಂಡಲ ತೊಕ್ಕೋಟ್ಟು ಉಳ್ಳಾಲ, ಚತುರ್ಥ – ಹೃಷಿಕೇಶ್ ಪ್ರಭು ಇರುವೈಲು.

Kinnigoli06111301

Comments

comments

Comments are closed.

Read previous post:
Kinnigoli05111308
ಮೂಲ್ಕಿ- ದಾಖಲೆಯ 500 ಶ್ರಮಿಕರಿಗೆ ವಿಶೇಷ ಗೌರವ

Prakash Suvarna and Narendra Kerekadu ಮೂಲ್ಕಿ; ಬಿಸಿಲು ಮಳೆ ಗಾಳಿ ಎನ್ನದೇ ಸಾಮಾನ್ಯ ಜನರಿಂದ ಹಿಡಿದು ಸಿರಿವಂತ ಜನರ ಸೇವೆಗೆ ಸದಾ ಮುಡಿಪಾಗಿರುವ ರಿಕ್ಷಾ ಮತ್ತು ಕಾರು ಚಾಲಕರು...

Close