ಕಿನ್ನಿಗೋಳಿ ಪಟ್ಟಣ ಪಂಚಾಯತ್ ಪ್ರಸ್ತಾವನೆ

ಕಿನ್ನಿಗೋಳಿ: ಕಿನ್ನಿಗೋಳಿ ಮತ್ತು ಮೆನ್ನಬೆಟ್ಟು ಗ್ರಾಮ ಪಂಚಾಯಿತಿಗಳನ್ನು ಒಟ್ಟುಗೂಡಿಸಿ ಪಟ್ಟಣ ಪಂಚಾಯಿತಿ ಮಾಡುವ ಪ್ರಸ್ತಾವನೆಯನ್ನು ರಾಜ್ಯ ಸರ್ಕಾರಕ್ಕೆ ಕಳುಹಿಸಲಾಗಿದೆ. ಅದಕ್ಕಾಗಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಯುವ ಜನ ಸೇವಾ ಹಾಗೂ ಮೀನುಗಾರಿಕಾ ಸಚಿವ ಅಭಯಚಂದ್ರ ಜೈನ್ ಹೇಳಿದರು.
ಸೋಮವಾರ ಮೆನ್ನಬೆಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯ ಆಜಾರಿನಲ್ಲಿ ಸುವರ್ಣಗ್ರಾಮ ಯೋಜನೆಯಡಿ 51. 50 ಲಕ್ಷ ರೂ.ಗಳ ವಿವಿಧ ಕಾಮಗಾರಿಗಳಿಗೆ ಶಿಲಾನ್ಯಾಸ ನಡೆಸಿ ಮಾತನಾಡಿದರು.
ಗ್ರಾಮ ಪಂಚಾಯಿತಿಗಳಿಗೆ ಅನುದಾನ ಕಡಿಮೆ. ಪಟ್ಟಣ ಪಂಚಾಯಿತಿ ಸುಮಾರು 5.5ಕೋಟಿ ರೂ. ಹೆಚ್ಚುವರಿ ಅನುದಾನ ಬರುತ್ತದೆ. ಕಿನ್ನಿಗೋಳಿ ಹಾಗೂ ಮೆನ್ನಬೆಟ್ಟು ಗ್ರಾಮ ಪಂಚಾಯಿತಿಗಳನ್ನು ಸೇರಿಸಿ ಪಟ್ಟಣ ಪಂಚಾಯಿತಿ ಮಾಡಲು ಸರಕಾರಕ್ಕೆ ಮನವರಿಕೆ ಮಾಡಿ ಪಂಚಾಯಿತಿ ಮೇಲ್ದರ್ಜೆಗೆ ಏರಲು ಸರಕಾರಿ ಮಟ್ಟದಲ್ಲಿ ಪ್ರಯತ್ನ ಮಾಡಲಾಗುವುದು ಎಂದು ಹೇಳಿದರು.
ಕಟೀಲು ದೇವಳದ ಅರ್ಚಕ ಹರಿ ನಾರಾಯಣದಾಸ ಆಸ್ರಣ್ಣ ಅಜಾರು ರಸ್ತೆಯ ಗುದ್ದಲಿ ಪೂಜೆ ನೇರವೇರಿಸಿದರು.
ಜಿಲ್ಲಾ ಪಂಚಾಯಿತಿ ಸದಸ್ಯ ಈಶ್ವರ್ ಕಟೀಲ್, ತಾಲೂಕು ಪಂಚಾಯಿತಿ ಸದಸ್ಯೆ ಬೇಬಿ ಸುಂದರ ಕೋಟ್ಯಾನ್, ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ಅಧ್ಯಕ್ಷ ಜನಾರ್ದನ ಕಿಲೆಂಜೂರು, ಉಪಾಧ್ಯಕ್ಷೆ ಸರೋಜಿನಿ, ಮಾಜಿ ಜಿ. ಪಂ. ಸದಸ್ಯೆ ಶೈಲಾ ಸಿಕ್ವೇರಾ, ಜಿಲ್ಲಾ ಪಂಚಾಯಿತಿ ಇಂಜೀನಿಯರ್‌ಗಳಾದ ರೋಹಿದಾಸ, ಪ್ರಶಾಂತ್ ಆಳ್ವ, ಪಂಚಾಯಿತಿ ಕಾರ್ಯದರ್ಶಿ ಪ್ರಕಾಶ್, ರೋಸಿ ಪಿಂಟೊ, ಗಂಗಾಧರ್, ಸುನಿಲ್ ಸಿಕ್ವೇರಾ, ಅರುಣ್, ತಿಮ್ಮಪ್ಪ ಕೋಟ್ಯಾನ್, ಅನಿತಾ ಅರಾಹ್ನ, ಸಂಜೀವ ಮಡಿವಾಳ ಮತ್ತಿತರರು ಉಪಸ್ಥಿತರಿದ್ದರು.

Kinnigoli06111303

Comments

comments

Comments are closed.

Read previous post:
Kinnigoli06111302
ಕಿನ್ನಿಗೋಳಿ ಯೋಗಾಂಜಲಿ-2013

ಕಿನ್ನಿಗೋಳಿ: ಉತ್ತಮ ಆರೋಗ್ಯ ಮಾನಸಿಕ ಸ್ಥೆರ್ಯ ಬಲಗೊಳ್ಳಬೇಕಾದರೆ ಯೋಗ ಅತೀ ಅಗತ್ಯ ದೀರ್ಘಾಯುಶ್ಯದ ಮೂಲ ಮಂತ್ರವೇ ಯೋಗ ಎಂದು ಕಟೀಲು ದೇವಳ ಅರ್ಚಕ ಹರಿನಾರಾಯಣದಾಸ ಆಸ್ರಣ್ಣ ಹೇಳಿದರು. ಭಾನುವಾರ...

Close