ಸಂಪ್ರದಾಯಕ್ಕೆ ಧಕ್ಕೆ ಆಗಬಾರದು : ವೀರಪ್ಪ ಮೊಯಿಲಿ

ಕಟೀಲು : ಕಲಾ ಶ್ರೀಮಂತಿಕೆಯ ನವರಸದ ಅಭಿನಯ, ನೃತ್ಯ, ಹಾಡುಗಾರಿಕೆಯ ವೈವಿಧ್ಯತೆಯಿಂದ ಪ್ರತಿಬಿಂಬಿಸುವ ಮೂಲಕ ವಿಶ್ವಮಾನ್ಯತೆಯನ್ನು ಹೊಂದಿರುವ ಯಕ್ಷಗಾನಕ್ಕೆ ಕಟೀಲು ಮೇಳದ ಕೊಡುಗೆ ಸಾಕಷ್ಟಿದೆ. ಮೇಳದ ಸಂಖ್ಯೆಯು ಹೆಚ್ಚಾದರು ಗುಣಮಟ್ಟ, ಪರಂಪರೆ, ಸಂಸ್ಕೃತಿಗೆ ಧಕ್ಕೆ ಆಗದ ರೀತಿಯಲ್ಲಿ ಕಾರ್ಯನಿರ್ವಹಿಸುವ ಬಹುದೊಡ್ಡ ಜವಬ್ದಾರಿಯೂ ಜೊತೆಗಿದೆ, ತನ್ನ ಸಾಹಿತ್ಯ ಜೀವನದಲ್ಲಿ ಯಕ್ಷಗಾನದಿಂದ ಸಾಕಷ್ಟು ಅನುಭವವನ್ನು ಪಡೆದುಕೊಂಡಿದ್ದೇನೆ ಎಂದು ಕೇಂದ್ರ ಇಂಧನ ಸಚಿವ ವೀರಪ್ಪ ಮೊಯಿಲಿ ಹೇಳಿದರು.
ಕಟೀಲಿನಲ್ಲಿ ಶುಕ್ರವಾರ ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯ ಆರನೇ ಮೇಳಕ್ಕೆ ಚಾಲನೆ ನೀಡಿ ಮಾತನಾಡಿದರು.
ಉಡುಪಿ ಪೇಜಾವರ ಮಠದ ವಿಶ್ವೇಶ್ವರ ತೀರ್ಥ ಸ್ವಾಮೀಜಿ ಮಾತನಾಡಿ ಕಾಲಮಿತಿ ಯಕ್ಷಗಾನವೂ ಬೇಕು, ಪರಂಪರೆಗೂ ಧಕ್ಕೆ ಆಗಬಾರದು, ಭಕ್ತಿಯ ಸಂಸ್ಕೃತಿ ಭಕ್ತಿಯ ಪ್ರಚೋದನೆಯೇ ಯಕ್ಷಗಾನ ಎಂದರು.
ಧರ್ಮಸ್ಥಳದ ಡಾ.ವೀರೇಂದ್ರ ಹೆಗ್ಗಡೆ ಅಧ್ಯಕ್ಷತೆಯನ್ನು ವಹಿಸಿದ್ದರು. ಸಂಸದ ನಳಿನ್‌ಕುಮಾರ್ ಕಟೀಲು, ಸಚಿವ ವಿನಯಕುಮಾರ್ ಸೊರಕೆ, ಮಾಣಿಲ ಮೋಹನದಾಸ ಸ್ವಾಮೀಜಿ, ಮೈಸೂರಿನ ಶಾಸಕ ವಾಸು, ಕಟೀಲು ದೇವಳದ ಅನುವಂಶಿಕ ಮೊಕ್ತೇಸರ ವಾಸುದೇವ ಆಸ್ರಣ್ಣ, ಪ್ರಧಾನ ಅರ್ಚಕರಾದ ಲಕ್ಷ್ಮೀ ನಾರಾಯಣ ಆಸ್ರಣ್ಣ, ಅನಂತ ಪದ್ಮನಾಭ ಆಸ್ರಣ್ಣ, ಹರಿನಾರಾಯಣದಾಸ ಆಸ್ರಣ್ಣ, ಕಮಲಾದೇವಿ ಆಸ್ರಣ್ಣ, ಮಾಲತಿ ಮೊಯಿಲಿ, ವೇದವ್ಯಾಸ ತಂತ್ರಿ, ದೇವಳದ ಆಡಳಿತಾಧಿಕಾರಿ ಅಜಿತ್‌ಕುಮಾರ್ ಹೆಗ್ಡೆ ಶಾನಾಡಿ, ಕಟೀಲು ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ. ಬಾಲಕೃಷ್ಣ ಶೆಟ್ಟಿಉಪಸ್ಥಿತರಿದ್ದರು.

Kateel 09111301

Kateel 09111302

Comments

comments

Comments are closed.

Read previous post:
Kinnigoli8111303
ಕಟೀಲು- ಆರನೇ ಮೇಳದ ಆರಂಭೋತ್ಸವ

ಕಟೀಲು:  ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯ ನೂತನ ಆರನೇ ಮೇಳದ ಆರಂಭೋತ್ಸವವು ಶುಕ್ರವಾರ ಕಟೀಲು ರಥ ಬೀದಿಯಲ್ಲಿ ನಡೆಯಿತು. ಆರನೆಯ ಮೇಳದ ಸಮರ್ಪಣೆಯ ಅಂಗವಾಗಿ...

Close