ಬಜಪೆಯಲ್ಲಿ ಮುಖ್ಯಮಂತ್ರಿಗಳ ಊಟ ರಾಜಕೀಯ

Narendra Kerekadu

ಬಜಪೆ :  ಮುಖ್ಯಮಂತ್ರಿ ಹೆಚ್.ಸಿದ್ಧರಾಮಯ್ಯ ಅವರ ಹಸ್ತದಿಂದ ಬಜಪೆಯಲ್ಲಿ ಸೋಮವಾರ ಬ್ರಹ್ಮಶ್ರೀ ನಾರಾಯಣಗುರುಗಳ ನೂತನ ಮಂದಿರದಲ್ಲಿ ಶ್ರೀ ನಾರಾಯಣಗುರು ಸಮುದಾಯ ಭವನದ ಉದ್ಘಾಟನಾ ಕಾರ್ಯಕ್ರಮವು ನೇರವೇರಿದ್ದು, ಬಜಪೆಗೆ ಆಗಮಿಸುವ ಮುಖ್ಯಮಂತ್ರಿಗೆ ಸೇವಾ ಸಂಘದ ಗೌರವಾಧ್ಯಕ್ಷ ಮತ್ತು ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇದರ ಅಧ್ಯಕ್ಷರೂ ಆದ ಎಲ್.ವಿ.ಅಮೀನ್ ಅವರ ಬಜ್ಪೆ ನಿವಾಸದಲ್ಲಿ ಕಾಂಗೈ ಶಾಸಕರೋರ್ವರ ಹೇಳಿಕೆಯಂತೆ ಊಟೋಪಚಾರದ (ವೆರಿವೆರಿ ಟೇಸ್ಟೀ ಫಿಶ್‌ಕರಿ ಲಂಚ್) ಏರ್ಪಡಿಸಲಾಗಿತ್ತು.
ಅಂತೆಯೇ ಸುವ್ಯವಸ್ಥೆಯ ವಿವಿಧ ವಿಭಾಗೀಯ ತಂಡಗಳು ಎಲ್.ವಿ.ಅಮೀನ್ ಅವರ ನಿವಾಸಕ್ಕೆ ಕೆಲವು ಬಾರಿ ತಪಸಣಾ ಪತ್ತೆದಳ ಮತ್ತಿತರ ತಂಡಗಳು ಭೇಟಿಯನ್ನಿತ್ತು ತಪಾಸಣೆ, ಮಾಹಿತಿ ಸಂಗ್ರಹಿಸಿದ್ದರೂ. ಆದರೆ ಎಲ್.ವಿ.ಅಮೀನ್ ಬಿಜೆಪಿ ಪಕ್ಷಕ್ಕೆ ಸೇರಿದವರು ಎಂದು ನೆಪವೊಡ್ಡಿ ಈ ಊಟೋಪಚಾರ ಕೂಟಕ್ಕೆ ರಾಜಕಾರಣವು ಅಡ್ಡಿಯಾಗಿರುವುದು ಕಾರ್ಯಕ್ರಮಕ್ಕಿಂತಲೂ ಪ್ರಮುಖ ವಿಷಯವಾಗಿ ಗುಸುಗುಟ್ಟುತ್ತಿತ್ತಲ್ಲದೆ ಮುಖ್ಯಮಂತ್ರಿಗಳು ತಮ್ಮ ಸಹೋದ್ಯೋಗಿ ಮಾತನ್ನೇ ಕೇಳಿ ಊಟ ಮಾಡಿ ಹಿಂದಿರುಗಿದರು.
ಎಲ್.ವಿ. ಅಮೀನ್ ನಿವಾಸಕ್ಕೆ ಮುಖ್ಯಮಂತ್ರಿಗಳು ತೆರಳಿದರೆ ನಾವು ಕಪ್ಪು ಪತಾಕೆ ಹಿಡಿದು ಪ್ರತಿಭಟಿಸುವುದಾಗಿ ಬೆದರಿಕೆ ಒಡ್ಡಿದ ಕಾಂಗ್ರೆಸ್ ನಾಯಕರು ಕಾಂಗ್ರೆಸ್ ಪಕ್ಷದ ವರಿಷ್ಠರೊಂದಿಗೆ ಸೇವಾ ಸಂಘದ ಅಧ್ಯಕ್ಷ ವಸಂತ ಕುಮಾರ್ ಬಂಗೇರ ಅವರ ಭಾವಚಿತ್ರವುಳ್ಳ ಕಟೌಟ್‌ಗಳನ್ನು ಹಾಕಿ ಕಾಂಗ್ರೆಸ್ ಪರ ಅಲೆ ಎಬ್ಬಿಸಿರುವುದು ಎದ್ದು ಕಾಣುತ್ತಿದ್ದಂತೆಯೇ, ಇದನ್ನರಿತ ಸ್ಥಳಿಯ ಬಿಜೆಪಿ ನಾಯಕರು ಎಲ್.ವಿ.ಅಮೀನ್ ಅವರನ್ನೊಳಗೊಂಡು ಸಮಾರಂಭಕ್ಕೆ ಆಗಮಿಸುವ ಬಿಜೆಪಿ ನಾಯಕರನ್ನೊಳಗೊಂಡು ಸ್ವಾಗತ ಕಟೌಟ್ ಸಹ ಹಾಕಿರುವುದಲ್ಲದೆ ಸ್ಥಳೀಯವಾಗಿ ಬಜ್ಪೆ ಬಸ್‌ಸ್ಟ್ಯಾಂಡ್ ಸನಿಹದಲ್ಲಿ ಕಳೆದ ಅನೇಕ ದಿನಗಳಿಂದ ಸಾರ್ವಜನಿಕವಾಗಿ ಪ್ರದರ್ಶಿಸಲ್ಪಟ್ಟ ನಮೋ (ನರೇಂದ್ರ ಮೋದಿ) ಕಟೌಟ್ ಕೂಡಾ ಸಮಾರಂಭದ ವೇದಿಕೆಯ ಮುಂಭಾಗವೇ ಕಟ್ಟಿ ರಾಜಕೀಯ ಪಕ್ಷಗಳ ವರ್ಚಸ್ಸನ್ನು ತೋರ್ಪಡಿಸಿದರು.
ಇದನ್ನು ಕಂಡ ಸಚಿವರೋರ್ವರು ಬಿಜೆಪಿಯ ಬ್ಯಾನರ್-ಕಟೌಟ್‌ಗಳನ್ನು ತೆರವುಗೊಳಿಸಲು ಪ್ರಯತ್ನಿಸಿದರೂ ಇವರ ಮಾತಿಗೆ ಮಣೆ ಹಾಕದ ಬಿಜೆಪಿ ಕಾರ್ಯಕರ್ತರು ತಮ್ಮ ನಾಯಕರನ್ನು ವೇದಿಕೆಗೆ ಬರಮಾಡಿಯೇಕೊಂಡರು. ಇಲ್ಲಿ ನಾಯಕರುಗಳಿಗೆ ಸಮಾಜಕ್ಕಿಂತಲೂ ತಮ್ಮ ತಮ್ಮ ಪಕ್ಷಗಳೇ ಪ್ರಮುಖವಾಗಿ ಸಾಥ್ ನೀಡಿದಂತಿತ್ತು.
ಎಲ್.ವಿ.ಅಮೀನ್ ಅವರು ಇದೇ ಕಾಂಗ್ರೇಸ್ ಪಕ್ಷದ ಸಚಿವರು, ನೇತಾರರುಗಳನ್ನು ಇತ್ತೀಚೆಗಷ್ಟೇ ಮುಂಬಯಿಗೆ ಆಹ್ವಾನಿಸಿ ಬಿಲ್ಲವರ ಭವನದಲ್ಲಿ ಅದ್ದೂರಿಯಾಗಿ ಸನ್ಮಾನಿಸಿ ಗೌರವಿಸಿದಾಗ ಇದೇ ಕಾಂಗ್ರೇಸ್ ಪಕ್ಷದ ನಿಷ್ಠರು, ಸಮಾಜ ಪ್ರಿಯರು ಹೊಗಳಿ ಮೆಚ್ಚುಗೆ ವ್ಯಕ್ತಪಡಿಸಿದ್ದರು ಎನ್ನಲಾಗಿದ್ದು ಆದರೆ ಈಗ ಸಮಾಜದ ಏಕತೆಯನ್ನು ಬಿಟ್ಟು ಕಾಂಗ್ರೇಸ್-ಬಿಜೆಪಿ ಎಂದು ಉದ್ಗಾರ ಎತ್ತಿ ಸಿಎಂ ಊಟಕ್ಕೆ ಮೂಗು ತೂರಿಸಿ ಆಟವಾಡುತ್ತಿರುವುದು ಮಾತ್ರವಲ್ಲದೆ ತಮ್ಮದೇ ಸಮಾಜದ ಕಾರ್ಯಕ್ರಮಕ್ಕೆ ಆಗಮಿಸುವ ಮುಖ್ಯಮಂತ್ರಿಗೆನೇ ಕಪ್ಪು ಪತಾಕೆ ಪ್ರದರ್ಶಿಸಿ ಪ್ರತಿಭಟಿಸಲೆತ್ನಿಸುವ ಯತ್ನಕ್ಕೆ ಎಲ್.ವಿ.ಅಮೀನ್ ಖೇದ ವ್ಯಕ್ತಪಡಿಸಿದರು.
ಅಂತೂ ಇಂತೂ ಕೇವಲ ಒಂದೂವರೆ ತಾಸಿನ ಕಾರ್ಯಕ್ರಮಕ್ಕಾಗಿ ಒಂದೂವರೆ ತಾಸು ತಡವಾಗಿ ಆಗಮಿಸಿದ್ದ ಮುಖ್ಯಮಂತ್ರಿಗಳು ಬಜ್ಪೆಯಲ್ಲೇ ಊಟ ಮಾಡುತ್ತಾರೋ ಅಥವಾ ಉಪವಾಸವಿದ್ದು ಬೆಂಗಳೂರು ಸೇರುತ್ತಾರೋ ಎನ್ನುವುದು ಕಾಡಿದ ಪ್ರಶ್ನೆಯಾಗಿತ್ತು. ಅಲ್ಲದೇ ಊಟದ ಆಟದ ಈ ಪ್ರಸಂಗವು ಮುಖ್ಯಮಂತ್ರಿಗಳು ಸಮಾರಂಭಕ್ಕೆ ಆಗಮಿಸುವುದಕ್ಕಿಂತಲೂ ಹೆಚ್ಚು ಆಸಕ್ತಿವುಳ್ಳ ವಿಷಯವಾಗಿ ಪರಿಣಮಿಸಿ ಕೊನೆಗೂ ಮಂತ್ರಿಗಳೆಲ್ಲರೂ ಪೆರ್ಮುದೆಯಲ್ಲಿನ ಉದ್ಯಮಿಯೋರ್ವರ ನಿವಾಸದಲ್ಲಿ ಉಂಡು ತಿಂದು ಸದ್ದಿಲ್ಲದೆ ಬಜ್ಪೆಯಿಂದ ನಿರ್ಗಮಿಸಿದರು. ಈಗ ಬಜಪೆಯಲ್ಲಿ ಊಟದ ಬಗ್ಗೆಯೇ ಬಿಸಿ ಬಿಸಿ ಚರ್ಚೆ ಮುಂದುವರಿದಿದೆ.

Kinnigoli 12111303 Kinnigoli 12111304 Kinnigoli 12111305

Comments

comments

Comments are closed.

Read previous post:
Narayana
ನಿದನ: ನಾರಾಯಣ ಬಂಗೇರಾ

ಮೂಲ್ಕಿ: ಕೊಯ್ಯಾರು ನಿವಾಸಿ ನಾರಾಯಣ (ಕುಟ್ಟಿ) ಬಂಗೇರಾ (65) ಹೃದಯಾಘಾತದಿಂದ ಭಾನುವಾರ ನಿಧನರಾದರು .ಇವರು ಮುಲ್ಕಿ ಅಂಚೆ ಕಚೇರಿಯಲ್ಲಿ ಉದ್ಯೋಗಿಯಾಗಿ ಸೇವೆ ಸಲ್ಲಿಸಿದ್ದರು.ಅವರು ಒರ್ವ ಪುತ್ರನನ್ನು ಅಗಲಿದ್ದಾರೆ

Close