ಕಿನ್ನಿಗೋಳಿ : ಸಂಪೂರ್ಣ ಸ್ವಚ್ಚತಾ ಅಂದೋಲನ

ಕಿನ್ನಿಗೋಳಿ : ಇಂತಹ ಕೆಲಸವನ್ನು ಬೇರೆಯವರು ಮಾಡುತ್ತಾರೆ, ನಾವೇಕೆ ಮಾಡಬೇಕು ಎನ್ನುವ ಮನೋಭಾವವನ್ನು ನಾವು ಬಿಟ್ಟರೆ ಮಾತ್ರ ನಮ್ಮ ಸುತ್ತ ಮುತ್ತಲಿನ ಪರಿಸರವು ಸ್ವಚ್ಛತೆಯಿಂದ ಇರುತ್ತದೆ ಎಂದು ಹಿರಿಯ ಸಾಹಿತಿ ನಿವೃತ್ತ ಶಿಕ್ಷಕ ಉಮೇಶ್ ರಾವ್ ಎಕ್ಕಾರು ಹೇಳಿದರು.
ಸಂಪೂರ್ಣ ಸ್ವಚ್ಚತಾ ಅಂದೋಲನ ದ.ಕ ಜಿಲ್ಲಾ ನೆರವು ಘಟಕ, ದ.ಕ ಜಿಲ್ಲಾ ಪಂಚಾಯಿತಿ ಕಿನ್ನಿಗೋಳಿ ಗ್ರಾಮ ಪಂಚಾಯಿತಿ, ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಮಂಗಳೂರು ಬಲ್ಮಠ ಸರಕಾರಿ ಮಹಿಳಾ ಶಿಕ್ಷಣ ತರಬೇತಿ ಸಂಸ್ಥೆ ಎನ್.ಎಸ್.ಎಸ್. ಘಟಕ ಇವರ ಸಂಯುಕ್ತ ಆಶ್ರಯದಲ್ಲಿ ಸೋಮವಾರ ಪುನರೂರುವಿನಲ್ಲಿ ನಡೆದ ಕಿನ್ನಿಗೋಳಿ ಗ್ರಾಮ ಪಂಚಾಯಿತಿ ವಾರ್ಡ್‌ಗಳಲ್ಲಿ ನೈರ್ಮಲ್ಯ ಸುಸ್ಥಿರತೆ ಕಾಯ್ದುಕೊಳ್ಳುವಲ್ಲಿ ಜನಜಾಗೃತಿ ಮೂಡಿಸುವ ಕಾರ್ಯಕ್ರಮದಲ್ಲಿ ಕರಪತ್ರ ಬಿಡುಗಡೆಗೊಳಿಸಿ ಮಾತನಾಡಿದರು.
ದುಶ್ಚಟಗಳಿಂದ ದೂರವಿದ್ದು ಪರಿಸರ ಜಾಗೃತಿ ಮೂಡಿಸಿದಾಗ ಶತಮಾನದವರೆಗೆ ಬದುಕಬಹುದು, ಪರಿಸರ ಮಾಲಿನ್ಯಕ್ಕೆ ಕಾರಣವಾಗುವ ಪ್ಲಾಸ್ಟಿಕನ್ನು ಸಂಪೂರ್ಣ ನಿಷೇಧ, ಅಲ್ಲದೆ ನದಿಗಳ ನೀರು ಸಂರಕ್ಷಣೆ, ಸ್ವಚ್ಛತೆಯ ಬಗ್ಗೆ ಸಂಪನ್ಮೂಲ ವ್ಯಕ್ತಿಯಾಗಿ ಅವರು ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶ್ಯಾಮಲ ಪಿ. ಹೆಗ್ಡೆ ವಹಿಸಿದ್ದರು.
ಜಿಲ್ಲಾ ಪಂಚಾಯಿತಿ ಸದಸ್ಯೆ ಆಶಾ ರತ್ನಾಕರ ಸುವರ್ಣ, ತಾಲೂಕು ಪಂಚಾಯಿತಿ ಸದಸ್ಯ ರಾಜು ಕುಂದರ್, ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ದೇವಪ್ರಸಾದ್ ಪುನರೂರು, ಗ್ರಾ.ಪಂ.ಸದಸ್ಯರಾದ ಮಾಧವ ಬಂಗೇರ, ಆನಂದ ಗೌಡ, ಹೇಮಲತಾ, ರಘುರಾಮ, ಬಲ್ಮಠ ಕಾಲೇಜಿನ ಉಪನ್ಯಾಸಕಿ ವಿಜಯಲಕ್ಷ್ಮಿ, ಕಿನ್ನಿಗೋಳಿ ಪಂಚಾಯಿತಿ ಕಾರ್ಯದರ್ಶಿ ಒಲಿವರ್ ಪಿಂಟೋ, ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಪ್ರದೀಪ್ ಡಿ’ಸೋಜ ಮತ್ತಿತರರು ಉಪಸ್ಥಿತರಿದ್ದರು.
ಬಳಿಕ ಮಂಗಳೂರು ಬಲ್ಮಠ ಸರಕಾರಿ ಮಹಿಳಾ ಶಿಕ್ಷಣ ತರಬೇತಿ ಸಂಸ್ಥೆ ಎನ್.ಎಸ್.ಎಸ್. ಘಟಕದ ವಿದ್ಯಾರ್ಥಿನಿಯರಿಂದ ಕಿನ್ನಿಗೋಳಿ ಗ್ರಾಮ ವ್ಯಾಪ್ತಿಯ ಮನೆಮನೆಗಳಿಗೆ ತೆರಳಿ ಪ್ಲಾಸ್ಟಿಕ್ ನಿಷೇದ ಹಾಗೂ ಸ್ವಚ್ಛತೆಯ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮ ನಡೆಯಿತು.

Kinnigoli 12111301 Kinnigoli 12111302

Comments

comments

Comments are closed.

Read previous post:
Kateel 09111305
ಕಟೀಲು ಮೇಳಗಳ ತಿರುಗಾಟ ಪ್ರಾರಂಭ

ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಳದ 6ಯಕ್ಷಗಾನ ಮೇಳಗಳ ಈ ವರ್ಷದ ತಿರುಗಾಟಕ್ಕೆ ಶುಕ್ರಾವಾರ ಚಾಲನೆ ನೀಡಲಾಯಿತು. ಕಟೀಲು ಶ್ರೀದೇವಿಯ ಗರ್ಭಗುಡಿಯ ಮುಂದೆ ಕಲಾವಿದರಿಗೆ ಗೆಜ್ಜೆಗಳನ್ನು ನೀಡುವ ಮೂಲಕ...

Close