ಮೂಲ್ಕಿ ತಾಲ್ಲೂಕು ರಚನೆಗೆ ವಿಳಂಬ ; ಆಕ್ಷೇಪ

Narendra Kerekadu
ಮೂಲ್ಕಿ; ಇಲ್ಲಿನ ಬಹುಕಾಲದ ಬೇಡಿಕೆಯಾದ ಮೂಲ್ಕಿ ತಾಲ್ಲೂಕು ರಚನೆಯ ಬಗ್ಗೆ ನಾಗರಿಕರು ವಿವಿಧ ರೀತಿಯಲ್ಲಿ ಹೋರಾಟ ನಡೆಸಿದಾಗ ಚುನಾವಣೆಯ ನಂತರ ಸರ್ಕಾರ ರಚನೆಯ ನಂತರ ವಿಶೇಷ ತಹಶೀಲ್ದಾರರನ್ನು ನೇಮಕ ಮಾಡಲಾಗುವುದು ಎಂದು ಕ್ಷೇತ್ರದ ಶಾಸಕ ಹಾಗೂ ಸಚಿವರಾಗಿರುವ ಕೆ.ಅಭಯಚಂದ್ರ ಜೈನ್‌ರವರು ನೀಡಿರುವ ಹೇಳಿಕೆಗೆ ತಿಂಗಳು ಮೂರಾದರು ಜಾರಿಗೆ ಬಂದಿಲ್ಲ ಎಂದು ಮೂಲ್ಕಿ ತಾಲ್ಲೂಕು ಹೋರಾಟ ಸಮಿತಿಯ ಹಾಗೂ ನಾಗರಿಕ ವೇದಿಕೆಯ ಪ್ರಮುಖ ಹರೀಶ್ ಪುತ್ರನ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಅವರು ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ ಕಳೆದ ನಾಲ್ಕು ದಶಕದಿಂದ ಮೂಲ್ಕಿಯನ್ನು ತಾಲ್ಲೂಕು ಮಾಡಬೇಕೆಂದು ಹೋರಾಟವನ್ನು ನಡೆಸಿದ್ದು ಕಳೆದ ಒಂದು ವರ್ಷದ ಹಿಂದೆ ತೀವ್ರ ತರನಾದ ಪ್ರತಿಭಟನೆ ವ್ಯಕ್ತವಾದುದರಿಂದ ಮೂಲ್ಕಿಯನ್ನು ತಾಲ್ಲೂಕು ಮಾಡುತ್ತೇವೆ ಎಂದು ಕಳೆದ ಬಿಜೆಪಿ ಸರ್ಕಾರದಲ್ಲಿಯೇ ಭರವಸೆ ಸಿಕ್ಕಿತ್ತಲ್ಲದೇ ಸಂಸದ ನಳಿನ್‌ಕುಮಾರ್ ಕಟೀಲು ಹಾಗೂ ಅಭಯಚಂದ್ರರವರ ನೇತೃತ್ವದಲ್ಲಿ ಅಂದಿನ ಮುಖ್ಯಮಂತ್ರಿ ಜಗದೀಶ ಶೆಟ್ಟರ್‌ರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದೆವು ಆದರೆ ಕೊನೆಗೆ ಚುನಾವಣೆ ಘೋಷಣೆಯಾಗಿ ಅದು ನೆನೆಗುದಿಗೆ ಬಿದ್ದಿತು ಎಂದು ಹೋರಾಟದ ಬಗ್ಗೆ ಹರೀಶ್ ಪುತ್ರನ್ ನೆನಪಿಸಿಕೊಂಡರು.
ಚುನಾವಣೆಯ ನಂತರ ಸರ್ಕಾರ ರಚನೆಯಾಗಿ ಶೀಘ್ರವೇ ವಿಶೇಷ ತಹಶೀಲ್ದಾರರನ್ನು ನೇಮಕ ಮಾಡಲಾಗುವುದು ಎಂದು ಸರ್ಕಾರದ ಪರವಾಗಿ ಸಚಿವರು ಹೇಳಿಕೆ ನೀಡಿದ್ದರೂ ಈ ಬಗ್ಗೆ ಯಾವುದೇ ಕ್ರಮ ಕೈಗೊಂಡ ಮಾಹಿತಿ ಇಲ್ಲವಾಗಿದೆ. ಪಕ್ಷಭೇಧ ಮರೆತು ನಾಗರಿಕರು ಮೂಲ್ಕಿಯಲ್ಲಿ ಅಹರ್ನಿಷಿ ಹೋರಾಟ ನಡೆಸಿದ್ದನ್ನು ಕಡೆಗಣಿಸಿದ್ದು ಈ ಬಗ್ಗೆ ಮತ್ತೆ ಹೋರಾಟವನ್ನು ನಡೆಸುವ ಜೊತೆಗೆ ಮುಂದಿನ ಪಟ್ಟಣ ಪಂಚಾಯಿತಿ ಹಾಗೂ ಲೋಕಸಭಾ ಚುನಾವಣೆಯನ್ನು ಸಹ ಬಹಿಷ್ಕರಿಸುವ ಚಿಂತನೆ ನಡೆಸಲಾಗಿದೆ ಎಂದರು.
ಮೂಲ್ಕಿಯಲ್ಲಿ ತಾಲ್ಲೂಕು ರಚನೆ, ಅಗ್ನಿಶಾಮಕ ದಳ ಘಟಕ, ಕಾರ್ನಾಡು ಸರ್ಕಾರಿ ಆಸ್ಪತ್ರೆ ಸುವ್ಯವಸ್ಥೆ, ರಸ್ತೆ ಅಭಿವೃದ್ದಿ ನಡೆಸಲಾಗುವುದು ಎಂದು ಹೇಳಿಕೆ ನೀಡಿರುವವರು ಮೂಲ್ಕಿಯನ್ನು ಮೂಲೆಗುಂಪುಗೊಳಿಸಿ ಮೂಡಬಿದಿರೆಯನ್ನು ಮಾತ್ರ ಅಭಿವೃದ್ಧಿ ಮಾಡಲು ಶ್ರಮಿಸುತ್ತಿದ್ದಾರೆ. ಮೂಲ್ಕಿ ಮೂಡಬಿದಿರೆ ತನಗೆ ಎರಡು ಕಣ್ಣುಗಳು ಎಂದು ಹೇಳಿದವರು ಸಹ ಒಂದು ಕಣ್ಣಿಗೆ ಬಣ್ಣ ಮತ್ತೋಂದು ಕಣ್ಣಿಗೆ ಸುಣ್ಣವನ್ನು ಬಳಿದಂತಾಗಿಲ್ಲವೇ ಎಂದು ಹರೀಶ್ ಪುತ್ರನ್ ಪ್ರತಿಕ್ರಿಯಿಸಿದ್ದಾರೆ.

OLYMPUS DIGITAL CAMERA

Comments

comments

Comments are closed.

Read previous post:
Kinnigoli 12111305
ಬಜಪೆಯಲ್ಲಿ ಮುಖ್ಯಮಂತ್ರಿಗಳ ಊಟ ರಾಜಕೀಯ

Narendra Kerekadu ಬಜಪೆ :  ಮುಖ್ಯಮಂತ್ರಿ ಹೆಚ್.ಸಿದ್ಧರಾಮಯ್ಯ ಅವರ ಹಸ್ತದಿಂದ ಬಜಪೆಯಲ್ಲಿ ಸೋಮವಾರ ಬ್ರಹ್ಮಶ್ರೀ ನಾರಾಯಣಗುರುಗಳ ನೂತನ ಮಂದಿರದಲ್ಲಿ ಶ್ರೀ ನಾರಾಯಣಗುರು ಸಮುದಾಯ ಭವನದ ಉದ್ಘಾಟನಾ ಕಾರ್ಯಕ್ರಮವು ನೇರವೇರಿದ್ದು,...

Close