ಭಾವಾಡ್ತಾಚೆ ವರಸ್ 2012-13 ಸಮಾರೋಪ

ಕಿನ್ನಿಗೋಳಿ : ದೇವರ ಮೇಲೆ ಭಕ್ತಿ ವಿಶ್ವಾಸವಿರಬೇಕು. ಜನರು ಸಹಾಯ ಮನೋಧರ್ಮ ಬೆಳೆಸಿಕೊಂಡರೆ ಸಮಾಜದಲ್ಲಿ ಶಾಂತಿ ನೆಮ್ಮದಿ ಬೆಳಗುವುದು ಎಂದು ಮಂಗಳೂರು ಕಾರ್ಮೆಲ್ ಕೇಂದ್ರದ ಮುಖ್ಯಸ್ಥ ಫಾ| ಪಿಯುಸ್ ಡಿಸೋಜ ಹೇಳಿದರು.
ಭಾನುವಾರ ಕಿನ್ನಿಗೋಳಿ ಚರ್ಚ್ ಮೈದಾನದಲ್ಲಿ ನಡೆದ ಭಾವಾಡ್ತಾಚೆ ವರಸ್ ೨೦೧೨-೧೩ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಕಿನ್ನಿಗೋಳಿ ಚರ್ಚ್ ಧರ್ಮಗುರು ಆಲ್ಫ್ರೆಡ್ ಜೆ.ಪಿಂಟೊ ಅಧ್ಯಕ್ಷತೆ ವಹಿಸಿದ್ದರು. ಕಿನ್ನಿಗೋಳಿ ಚರ್ಚ್‌ನ ವಿವಿಧ ವಾರಾಡೊಗಳ ಕ್ರೈಸ್ತ ಭಾಂದವರಿಗೆ ನಡೆದ ವಿವಿಧ ಸ್ಪರ್ಧೆಗಳಲ್ಲಿ, ವಿಜೇತರಾದವರಿಗೆ ಬಹುಮಾನ ನೀಡಲಾಯಿತು.
ಕಿನ್ನಿಗೋಳಿ ಚರ್ಚ್ ಸಹಾಯಕ ಧರ್ಮಗುರು ಫಾ| ವಿನೋದ್ ಲೋಬೊ, ಭಗಿನಿ ವಿತಾಲೀಸ್ ಬಿ.ಎಸ್., ವಲೇರಿಯನ್ ಸಿಕ್ವೇರಾ, ಸಣ್ಣ ಕ್ರಿಸ್ತ ಸಮುದಾಯದ ಸಂಚಾಲಕ ಮೈಖಲ್ ಪಿಂಟೊ, ಕಾರ್ಯದರ್ಶಿ ಹೆರಿಕ್ ಪಾಯಸ್, ಜೊತೆ ಕಾರ್ಯದರ್ಶಿ ಸಂಗೀತಾ ಸೆರಾವೊ ಉಪಸ್ಥಿತರಿದ್ದರು.
ಚರ್ಚ್ ಉಪಾಧ್ಯಕ್ಷ ಲೈನಲ್ ಪಿಂಟೊ ಸ್ವಾಗತಿಸಿದರು. ಶರ್ಮಿಳಾ ಪತ್ರಾವೊ ಕಾರ್ಯಕ್ರಮ ನಿರೂಪಿಸಿದರು.
ಬಳಿಕ ಸಿಸಿಲಿಯಾ ಉಡುಪಿ, ಎಡ್ನಾ ಡಿಸೋಜ ಹಾಗೂ ಅನಿತಾ ಡಿಸೋಜ ನಿರ್ದೇಶಿತ ಭಾವಾರ್ಥಾಚಿ ಝರ್ ಮತ್ತು ಭಗಿನಿ ಲೀರಾ ಮರಿಯಾ ಹಾಗೂ ಭಗಿನಿ ಜೆಸಿಂತಾ ನಿರ್ದೇಶಿತ “ಭಾವಾರ್ಥಾಚ್ಯಾ ಸೊದ್ನೆರ್ ಕಿರು ನಾಟಕಗಳು ಪ್ರದರ್ಶನಗೊಂಡವು

Kinnigoli 13111301

Comments

comments

Comments are closed.

Read previous post:
Kinnigoli 12111307
ಚಿರತೆ ಹಾವಳಿ

ಕಿನ್ನಿಗೋಳಿ: ಇಂದು ಅವ್ಯಾಹಿತ ಅರಣ್ಯ ನಾಶದಿಂದ ಗುಡ್ಡ ಬೆಟ್ಟಗಳು ಕೂಡ ಹಾಳು ಬಿದ್ದಂತೆ ಕಾಣಿಸುತ್ತವೆ. ಆದ್ದರಿಂದ ಮಳೆಯೂ ಬೀಳುತ್ತಿಲ್ಲ. ಯಾವ ಪ್ರಮಾಣದಲ್ಲಿ ಮರಗಳನ್ನು ಕಡಿಯಲಾಗುತ್ತದೆಯೋ, ಅದೇ ಪ್ರಮಾಣದಲ್ಲಿ ಗಿಡ...

Close