ಪೊಂಪೈ ಕಾಲೇಜು ಎನ್.ಎಸ್.ಎಸ್. ಶಿಬಿರ

ಕಿನ್ನಿಗೋಳಿ: ಎನ್. ಎಸ್. ಎಸ್ ನಂತಹ ಸಂಘ ಸಂಸ್ಥೆಗಳಲ್ಲಿ ತೊಡಗಿಸಿಕೊಂಡು ವ್ಯಕ್ತಿತ್ವ ವಿಕಸನ ನಾಯಕತ್ವ ಹಾಗೂ ಸೇವಾ ಮನೋಭಾವ ಬೆಳೆಸಿಕೊಳ್ಳಬಹುದು ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಈಶ್ವರ್ ಕಟೀಲ್ ಹೇಳಿದರು.
ಮಂಗಳವಾರ ಕಿನ್ನಿಗೋಳಿ ಕಮ್ಮಾಜೆ ಮೊರಾರ್ಜಿ ವಸತಿ ಶಾಲೆಯಲ್ಲಿ ಪೊಂಪೈ ಪದವಿ ಕಾಲೇಜಿನ ಎನ್. ಎಸ್. ಎಸ್‌ನ ವಾರ್ಷಿಕ ವಿಶೇಷ ಶಿಬಿರದಲ್ಲಿ ಮಾತನಾಡಿದರು.
ಪೊಂಪೈ ಕಾಲೇಜು ಪ್ರಾಚಾರ್ಯ ಡಾ. ಜೋನ್ ಸಿ. ಮಿರಾಂದ ಅಧ್ಯಕ್ಷತೆ ವಹಿಸಿದ್ದರು. ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ಅಧ್ಯಕ್ಷ ಜನಾರ್ದನ ಕಿಲೆಂಜೂರು, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯೆ ಶೈಲಾ ಸಿಕ್ವೇರಾ, ಮೋರಾರ್ಜಿ ಶಾಲೆಯ ಮುಖ್ಯ ಶಿಕ್ಷಕ ಚಂದ್ರಶೇಖರ್ ಬಿ., ಐಕಳ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಯೋಗೀಶ್ ಕೋಟ್ಯಾನ್, ಶಾಲಾ ಪೋಷಕರ ಸಮಿತಿಯ ಗೋಪಮ್ಮ , ಪೊಂಪೈ ಪದವಿ ಕಾಲೇಜಿನ ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ಸಂತಾನ್ ಡಿಸೋಜ, ಉಲ್ಲಂಜೆ ಕ್ಲಸ್ಟರ್ ಅಕಾರಿ ಜಗದೀಶ ನಾವಡ, ಮೆನ್ನಬೆಟ್ಟು ಗ್ರಾ. ಪಂ. ಸದಸ್ಯರಾದ ಗಂಗಾಧರ ಪೂಜಾರಿ, ಸುನಿಲ್ ಸಿಕ್ವೇರಾ, ವಿದ್ಯಾರ್ಥಿ ನಾಯಕ ಸಚಿನ್ ಮತ್ತಿತರರು ಉಪಸ್ಥಿತರಿದ್ದರು. ಶಿಬಿರಾಕಾರಿ ಡಾ. ಗುಣಕರ್ ಸ್ವಾಗತಿಸಿ, ಸಹ ಶಿಬಿರಾಕಾರಿ ಪ್ರದೀಪ್ ವಂದಿಸಿದರು. ಕು. ಲಿಖಿತಾ ಕಾರ್ಯಕ್ರಮ ನಿರೂಪಿಸಿದರು.

kinnigoli14111309

Comments

comments

Comments are closed.

Read previous post:
Kinnigoli 13111301
ಭಾವಾಡ್ತಾಚೆ ವರಸ್ 2012-13 ಸಮಾರೋಪ

ಕಿನ್ನಿಗೋಳಿ : ದೇವರ ಮೇಲೆ ಭಕ್ತಿ ವಿಶ್ವಾಸವಿರಬೇಕು. ಜನರು ಸಹಾಯ ಮನೋಧರ್ಮ ಬೆಳೆಸಿಕೊಂಡರೆ ಸಮಾಜದಲ್ಲಿ ಶಾಂತಿ ನೆಮ್ಮದಿ ಬೆಳಗುವುದು ಎಂದು ಮಂಗಳೂರು ಕಾರ್ಮೆಲ್ ಕೇಂದ್ರದ ಮುಖ್ಯಸ್ಥ ಫಾ| ಪಿಯುಸ್...

Close