ಕಿನ್ನಿಗೋಳಿ : ಆಳ್ವಾಸ್ ವಿಶ್ವನುಡಿಸಿರಿ ಪೂರ್ವಭಾವಿ ಸಭೆ

kinnigoli14111301

ಕಿನ್ನಿಗೋಳಿ : ವಿಶ್ವನುಡಿಸಿರಿ ಗಾಗಿ ಶ್ರಮಿಸುತ್ತಿರುವ ಡಾ| ಮೋಹನ ಆಳ್ವರವರಿಗೆ ಕಿನ್ನಿಗೋಳಿ ಪರಿಸರದ ನಾಗರಿಕರು ಸರ್ವ ರೀತಿಯಲ್ಲಿ ಸಹಕರಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಕಟೀಲು ದೇವಳ ಅರ್ಚಕ ಲಕ್ಷ್ಮೀನಾರಾಯಣ ಆಸ್ರಣ್ಣ ಹೇಳಿದರು.
ಮುಂದಿನ ತಿಂಗಳು ಮೂಡಬಿದ್ರೆಯಲ್ಲಿ ನಡೆಯುವ ಆಳ್ವಾಸ್ ವಿರಾಸತ್ ವಿಶ್ವನುಡಿಸಿರಿಯ ಕಾರ್ಯಕ್ರಮದ ಬಗ್ಗೆ ಮಂಗಳವಾರ ಕಿನ್ನಿಗೋಳಿಯ ಯುಗಪುರುಷ ಸಭಾಭವನದಲ್ಲಿ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಉಪನ್ಯಾಸಕ ರಾಮಪ್ರಸಾದ್ ಮೂಡಬಿದ್ರೆ ಪ್ರಸ್ತಾವನೆಗೈದರು.
ಯುಗಪುರುಷದ ಸಂಪಾದಕ ಕೆ. ಭುವನಾಭಿರಾಮ ಉಡುಪ, ಉಪನ್ಯಾಸಕಿ ಸುಧಾರಾಣಿ, ಸಾಹಿತಿ ಉಮೇಶ ರಾವ್ ಎಕ್ಕಾರು, ಸುರಗಿರಿ ಮಹಾಲಿಂಗೇಶ್ವರ ದೇವಳ ಆಡಳಿತ ಮೊಕ್ತೇಸರ ಸೀತಾರಾಮ ಶೆಟ್ಟಿ, ಯೋಗೀಶ್ ರಾವ್ ಏಳಿಂಜೆ, ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷೆ ಶಾಲೆಟ್ ಪಿಂಟೋ, ಕಿನ್ನಿಗೋಳಿ ಇನ್ನರ್ ವೀಲ್ ಅಧ್ಯಕ್ಷೆ ಸಿಂತಿಯಾ ಕುಟಿನ್ಹೊ, ಲಯನ್ಸ್ ಕ್ಲಬ್ ಅಧ್ಯಕ್ಷ ವೈ. ಕೃಷ್ಣ ಸಾಲ್ಯಾನ್, ಸಾಹಿತಿ ಎನ್ ಪಿ ಶೆಟ್ಟಿ, ಎಪಿಎಂಸಿ ಸದಸ್ಯ ಪ್ರಮೋದ್ ಕುಮಾರ್, ಶಿಕ್ಷಕ ಸಾಯಿನಾಥ ಶೆಟ್ಟಿ, ವೇದವ್ಯಾಸ ಉಡುಪ, ಶರತ್ ಶೆಟ್ಟಿ ಕಟೀಲು ದೇವಳ ಕಾಲೇಜು ಪ್ರಿನ್ಸಿಪಾಲ್ ಎಂ. ಬಾಲಕೃಷ್ಣ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

Comments

comments

Comments are closed.

Read previous post:
kinnigoli14111303
ದಿ ಶೈನರ್ ಡ್ಯಾನ್ಸ್ ಗ್ಯಾಲರಿ ಉದ್ಘಾಟನೆ

ಕಿನ್ನಿಗೋಳಿ : ಕಿನ್ನಿಗೋಳಿ ಡ್ರೀಮ್ ಬಾಯ್ಸ್ ದಿ ಶೈನರ್ ಡ್ಯಾನ್ಸ್ ಗ್ಯಾಲರಿ ನೃತ್ಯ ತರಗತಿಯನ್ನು ಇತ್ತೀಚೆಗೆ ಕಿನ್ನಿಗೋಳಿಯ ಯುಗಪುರುಷ ಸಭಾಭವನದಲ್ಲಿ ಯುಗಪುರುಷದ ಪ್ರಧಾನ ಸಂಪಾದಕ ಕೊಡೆತ್ತೂರು ಭುವನಾಭಿರಾಮ ಉಡುಪ...

Close