ಕಟೀಲು ಪದವಿಪೂರ್ವ ಕಾಲೇಜು : ಮಕ್ಕಳ ದಿನಾಚರಣೆ

kinnigoli14111304

ಕಿನ್ನಿಗೋಳಿ : ಪ್ರತಿಭಾ ಪ್ರದರ್ಶನ ರಾಷ್ಟ್ರೀಯತೆ, ರಾಷ್ಟ್ರಭಕ್ತಿ ಹಾಗೂ ಆತ್ಮೋನ್ನತಿ ಬೆಳೆಸುವಂತಿರಬೇಕು ಹೊರತು ಹಣ ಗಳಿಸುವ ದಾರಿಯಾಗಬಾರದು ಎಂದು ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ಪದವಿ ಪೂರ್ವ ಕಾಲೇಜಿನ ಸಂಸ್ಕೃತ ಉಪನ್ಯಾಸಕ ಡಾ| ಸೊಂದ ಭಾಸ್ಕರಭಟ್ ಹೇಳಿದರು.
ಗುರುವಾರ ಕಟೀಲು ಶ್ರೀ ದುರ್ಗಾ ಪರಮೇಶ್ವರೀ ದೇವಳ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಮಕ್ಕಳ ದಿನಾಚರಣೆ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಟೀಲು ದೇವಳ ಅನುವಂಶಿಕ ಮೊಕ್ತೇಸರ ವಾಸುದೇವ ಆಸ್ರಣ್ಣ ಕಾರ್ಯಕ್ರಮ ಉದ್ಘಾಟಿಸಿ ಮಕ್ಕಳಿಗೆ ಶುಭ ಹಾರೈಸಿದರು.
ಕಾಲೇಜು ಪ್ರಿನ್ಸಿಪಾಲ್ ಜಯರಾಮ ಪೂಂಜ ಪ್ರಾಸಾವನೆಗೈದು ಸ್ವಾಗತಿಸಿದರು. ಕುಮಾರಿ ವರ್ಷರಾವ್ ಪ್ರಾರ್ಥಿಸಿದರು, ಸಂಸ್ಥೆಯ ಸಂಸ್ಕೃತ ಉಪನ್ಯಾಸಕ ಶಂಕರ ಮರಾಠೆ ಕಾರ್ಯಕ್ರಮ ನಿರೂಪಿಸಿ ಧನ್ಯವಾದಗೈದರು. ಬಳಿಕ ತರಗತಿವಾರು ಪ್ರತಿಭಾ ಪ್ರದರ್ಶನ ಕಾರ್ಯಕ್ರಮ ನಡೆಯಿತು.

 

Comments

comments

Comments are closed.

Read previous post:
kinnigoli14111302
ನಿವೃತ್ತ ಶಿಕ್ಷಕ ಉಮೇಶ ರಾವ್ ಎಕ್ಕಾರು ಸನ್ಮಾನ

ಕಿನ್ನಿಗೋಳಿ : ದಕ್ಷಿಣ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಹಿರಿಯ ಸಾಹಿತಿ ಹಾಗೂ ಕಟೀಲು ಪದವಿ ಪೂರ್ವ ಕಾಲೇಜಿನ ನಿವೃತ್ತ ಉಪಪ್ರಾಂಶುಪಾಲ ಉಮೇಶ ರಾವ್ ಎಕ್ಕಾರು ಅವರನ್ನು ಕಿನ್ನಿಗೋಳಿಯ...

Close