ಕರ್ನಿರೆ -ಕೊಪ್ಪಲ ರಸ್ತೆ ಗುದ್ದಲಿ ಪೂಜೆ

ಕಿನ್ನಿಗೋಳಿ : ಬಳಕುಂಜೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕರ್ನಿರೆ -ಕೊಪ್ಪಲ ರಸ್ತೆಗೆ ಮಂಗಳೂರು ಸಂಸದರ ನಿಧಿಯಿಂದ ಏಳು ಲಕ್ಷ ಹಾಗೂ ಜಿ.ಪಂ. ನಿಧಿಯಿಂದ ಐದು ಲಕ್ಷ ರೂ. ವೆಚ್ಚದಲ್ಲಿ ಕಾಂಕ್ರೀಟು ಕಾಮಗಾರಿಯ ಗುದ್ದಲಿ ಪೂಜೆ ಗುರುವಾರ ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲು ನೆರವೇರಿಸಿದರು. ಮಂಗಳೂರು ಸಂಸದರ ನಿಧಿಯ 19ಕೋಟಿ ಅನುದಾನದಲ್ಲಿ17ಕೋಟಿಯ ಕಾಮಾಗಾರಿ ನಡೆದಿದೆ ಎಂದು ತಿಳಿಸಿದರು. . ಈ ಸಂದರ್ಭ ಜಿ.ಪಂ.ಸದಸ್ಯ ಈಶ್ವರ ಕಟೀಲ್, ಸದಸ್ಯೆ ಆಶಾ ರತ್ನಾಕರ ಸುವರ್ಣ, ಬಳ್ಕುಂಜೆ ಪಂಚಾಯಿತಿ ಅಧ್ಯಕ್ಷ ದಿನೇಶ್ ಪುತ್ರನ್, ಕಾರ್ಯದರ್ಶಿ ನಾರಾಯಣ ಮೂಲ್ಯ, ಪಿ.ಡಿ.ಒ. ಜಲಜ, ಸುಚರಿತ ಶೆಟ್ಟಿ, ಉಮನಾಥ ಕೋಟ್ಯಾನ್, ಆದರ್ಶ ಶೆಟ್ಟಿ, ಪಂಚಾಯಿತಿ ಸದಸ್ಯರಾದ ಕಿಶೋರ್, ಗೋಪಿ, ಕುಸುಮ, ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ದೇವಪ್ರಸಾದ್ ಪುನರೂರು, ಉದ್ಯಮಿಗಳಾದ ಕರ್ನಿರೆ ವಿಶ್ವನಾಥ ಶೆಟ್ಟಿ, ಗಂಗಾಧರ ಅಮೀನ್, ಹರೀಶ್ಚಂದ್ರ ಶೆಟ್ಟಿ, ಮೋಹನ್ ಶೆಟ್ಟಿ, ರವೀಂದ್ರ ಶೆಟ್ಟಿ, ರಾಮ ಕೋಟ್ಯಾನ್ ಮತ್ತಿತರರು ಉಪಸ್ಥಿತರಿದ್ದರು.

kinnigoli14111306

Comments

comments

Comments are closed.

Read previous post:
kinnigoli14111305
ಶ್ರೀ ದೇವಿ ಚಿಲ್ಡ್ರನ್ಸ್ ಪ್ಲೇ ಸ್ಕೂಲ್ “ಮಕ್ಕಳ ದಿನಾಚರಣೆ”

ಕಿನ್ನಿಗೋಳಿ : ಎಳೆಯ ಮಕ್ಕಳಲ್ಲಿ ಪ್ರಾಥಮಿಕ ಹಂತದಿಂದಲೇ, ಸುಪ್ತ ಪ್ರತಿಭೆಯನ್ನು ಗುರುತಿಸಿ, ಪ್ರೋತ್ಸಾಹ ಕೊಟ್ಟಾಗ ಮುಂದಿನ ಜೀವನದಲ್ಲಿ ಯಶಸ್ಸನ್ನು ಕಾಣುತ್ತಾರೆ ಎಂದು ಯುಗಪುರುಷ ಸಂಪಾದಕ ಭುವನಾಭಿರಾಮ ಉಡುಪ ಹೇಳಿದರು....

Close