ಶ್ರೀ ದೇವಿ ಚಿಲ್ಡ್ರನ್ಸ್ ಪ್ಲೇ ಸ್ಕೂಲ್ “ಮಕ್ಕಳ ದಿನಾಚರಣೆ”

ಕಿನ್ನಿಗೋಳಿ : ಎಳೆಯ ಮಕ್ಕಳಲ್ಲಿ ಪ್ರಾಥಮಿಕ ಹಂತದಿಂದಲೇ, ಸುಪ್ತ ಪ್ರತಿಭೆಯನ್ನು ಗುರುತಿಸಿ, ಪ್ರೋತ್ಸಾಹ ಕೊಟ್ಟಾಗ ಮುಂದಿನ ಜೀವನದಲ್ಲಿ ಯಶಸ್ಸನ್ನು ಕಾಣುತ್ತಾರೆ ಎಂದು ಯುಗಪುರುಷ ಸಂಪಾದಕ ಭುವನಾಭಿರಾಮ ಉಡುಪ ಹೇಳಿದರು.
ಕಿನ್ನಿಗೋಳಿ ಯುಗಪುರುಷ ಸಭಾಭವನದಲ್ಲಿ ಗುರುವಾರ ನಡೆದ ಶ್ರೀ ದೇವಿ ಚಿಲ್ಡ್ರನ್ಸ್ ಪ್ಲೇ ಸ್ಕೂಲ್ ಆಂಡ್ ನರ್ಸರಿ ಇದರ ಮಕ್ಕಳ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತಾಡಿದರು.
ಕಟೀಲು ಪದವಿ ಪೂರ್ವ ಕಾಲೇಜು ಪ್ರಿನ್ಸಿಪಾಲ್ ಜಯರಾಮ ಪೂಂಜ, ಸಮಾಜ ಸೇವಕಿ ಸಾವಿತ್ರಿ ಎಸ್. ಶೆಟ್ಟಿ, ಕಿನ್ನಿಗೋಳಿ ಇನ್ನರ್‌ವೀಲ್ ಅಧ್ಯಕ್ಷೆ ಸಿಂತಿಯಾ ಕುಟಿನ್ಹೊ ಹಾಗೂ ಶ್ರೀ ದೇವಿ ಚಿಲ್ಡ್ರನ್ಸ್ ಪ್ಲೇ ಸ್ಕೂಲ್ ಆಂಡ್ ನರ್ಸರಿ ಸಂಚಾಲಕಿ ಮಲ್ಲಿಕಾ ಪೂಂಜ, ಕೆ.ಬಿ. ಸುರೇಶ್, ಮಮತಾ ಶರತ್ ಶೆಟ್ಟಿ ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮದ ಎಲ್ಲಾ ಜವಾಬ್ದಾರಿಗಳನ್ನು ಪುಟಾಣಿ ಮಕ್ಕಳೆ ನಡೆಸಿದುದ್ದು ವಿಶೇಷವಾಗಿತ್ತು. ಪುಟಾಣಿಗಳಾದ ಐಶ್ವರ‍್ಯ, ಪ್ರಾರ್ಥಸಿ, ಅನನ್ಯ ಸ್ವಾಗತಿಸಿ, ಪ್ರತೀತಿ ಮುಖ್ಯ ಅಥಿತಿಗಳ ಪರಿಚಯಿಸಿ, ಅಹನಾ ಶೆಟ್ಟಿ ವಂದಿಸಿದರು. ಬಳಿಕ ಛದ್ಮವೇಷದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಹಾಗೂ ಇತರ ಸ್ಪರ್ಧೆಗಳಲ್ಲಿ ಭಾಗವಹಿಸಿದ ಪುಟಾಣಿಗಳಿಗೆ ಬಹುಮಾನ ವಿತರಿಸಲಾಯಿತು.

kinnigoli14111305

Comments

comments

Comments are closed.