ಸುಖಾನಂದ ಶೆಟ್ಟಿ ರಸ್ತೆ ಗುದ್ದಲಿ ಪೂಜೆ

ಕಿನ್ನಿಗೋಳಿ : ಪಡು ಪಣಂಬೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಲ್ನಾಡು ರಾಷ್ಟ್ರೀಯ ಹೆದ್ದಾರಿಯಿಂದ ಬೆಳ್ಳಾಯರು ಚಂದ್ರ ಮೌಳೀಶ್ವರ ದೇವಸ್ಥಾನಕ್ಕೆ ಹೋಗುವ ಸುಖಾನಂದ ರಸ್ತೆಗೆ ಮಂಗಳೂರು ಸಂಸದರ ನಿಧಿಯಿಂದ ಐದು ಲಕ್ಷ ರೂ. ವೆಚ್ಚದಲ್ಲಿ ಕಾಂಕ್ರೀಟು ಕಾಮಗಾರಿಯ ಗುದ್ದಲಿ ಪೂಜೆ ಗುರುವಾರ ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲು ನೆರವೇರಿಸಿದರು.
ಈ ಸಂದರ್ಭ ಜಿ.ಪಂ.ಸದಸ್ಯ ಈಶ್ವರ ಕಟೀಲ್, ಸದಸ್ಯೆ ಆಶಾ ರತ್ನಾಕರ ಸುವರ್ಣ, ಪಡು ಪಣಂಬೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕೊಲ್ಲು, ಮಾಜಿ ಅಧ್ಯಕ್ಷ ವಿನೋದ್ ಎಸ್.ಸಾಲ್ಯಾನ್, ತಾ.ಪಂ ಸದಸ್ಯೆ ವನಿತಾ ಉದಯ ಅಮೀನ್, ಹರ್ಷಿತ್ ರಾಜ್ ಸುವರ್ಣ, ಬಳ್ಕುಂಜೆ ಪಂಚಾಯಿತಿ ಅಧ್ಯಕ್ಷ ದಿನೇಶ್ ಪುತ್ರನ್, ಸುಚರಿತ ಶೆಟ್ಟಿ, ಉಮನಾಥ ಕೋಟ್ಯಾನ್, ಆದರ್ಶ ಶೆಟ್ಟಿ, ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ದೇವಪ್ರಸಾದ್ ಪುನರೂರು ಮತ್ತಿತರರು ಉಪಸ್ಥಿತರಿದ್ದರು.

kinnigoli14111307

Comments

comments

Comments are closed.

Read previous post:
kinnigoli14111306
ಕರ್ನಿರೆ -ಕೊಪ್ಪಲ ರಸ್ತೆ ಗುದ್ದಲಿ ಪೂಜೆ

ಕಿನ್ನಿಗೋಳಿ : ಬಳಕುಂಜೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕರ್ನಿರೆ -ಕೊಪ್ಪಲ ರಸ್ತೆಗೆ ಮಂಗಳೂರು ಸಂಸದರ ನಿಧಿಯಿಂದ ಏಳು ಲಕ್ಷ ಹಾಗೂ ಜಿ.ಪಂ. ನಿಧಿಯಿಂದ ಐದು ಲಕ್ಷ ರೂ....

Close