ನಿವೃತ್ತ ಶಿಕ್ಷಕ ಉಮೇಶ ರಾವ್ ಎಕ್ಕಾರು ಸನ್ಮಾನ

ಕಿನ್ನಿಗೋಳಿ : ದಕ್ಷಿಣ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಹಿರಿಯ ಸಾಹಿತಿ ಹಾಗೂ ಕಟೀಲು ಪದವಿ ಪೂರ್ವ ಕಾಲೇಜಿನ ನಿವೃತ್ತ ಉಪಪ್ರಾಂಶುಪಾಲ ಉಮೇಶ ರಾವ್ ಎಕ್ಕಾರು ಅವರನ್ನು ಕಿನ್ನಿಗೋಳಿಯ ಯುಗಪುರುಷ ಹಾಗೂ ವಿಜಯಾಕಲಾವಿದರು ಕಿನ್ನಿಗೋಳಿ ಇದರ ವತಿಯಿಂದ ಸನ್ಮಾನಿಸಲಾಯಿತು. ಈ ಸಂದರ್ಭ ಕಟೀಲು ದೇವಳದ ಅರ್ಚಕ ಲಕ್ಷ್ಮೀನಾರಾಯಣ ಆಸ್ರಣ್ಣ, ಯುಗಪುರುಷದ ಸಂಪಾದಕ ಭುವನಾಭಿರಾಮ ಉಡುಪ, ಕಟೀಲು ದೇವಳ ಕಾಲೇಜು ಪ್ರಿನ್ಸಿಪಾಲ್ ಎಂ. ಬಾಲಕೃಷ್ಣ ಶೆಟ್ಟಿ, ವಿಜಯಾ ಕಲಾವಿದರು ನಾಟಕ ತಂಡದ ಶರತ್ ಶೆಟ್ಟಿ, ಉಪನ್ಯಾಸಕಿ ಸುಧಾರಾಣಿ, ಸುರಗಿರಿ ಮಹಾಲಿಂಗೇಶ್ವರ ದೇವಳ ಆಡಳಿತ ಮೊಕ್ತೇಸರ sಸೀತಾರಾಮ ಶೆಟ್ಟಿ, ಯೋಗೀಶ್ ರಾವ್ ಏಳಿಂಜೆ, ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷೆ ಶಾಲೆಟ್ ಪಿಂಟೋ, ಕಿನ್ನಿಗೋಳಿ ಇನ್ನರ್ ವೀಲ್ ಅಧ್ಯಕ್ಷೆ ಸಿಂತಿಯಾ ಕುಟಿನ್ಹೊ, ಲಯನ್ಸ್ ಕ್ಲಬ್ ಅಧ್ಯಕ್ಷ ವೈ. ಕೃಷ್ಣ ಸಾಲ್ಯಾನ್, ಸಾಹಿತಿ ಎನ್ ಪಿ ಶೆಟ್ಟಿ, ಎಪಿಎಂಸಿ ಸದಸ್ಯ ಪ್ರಮೋದ್ ಕುಮಾರ್, ಶಿಕ್ಷಕ ಸಾಯಿನಾಥ ಶೆಟ್ಟಿ, ವೇದವ್ಯಾಸ ಉಡುಪ, ಶರತ್ ಶೆಟ್ಟಿ ಕಟೀಲು ದೇವಳ ಕಾಲೇಜು ಪ್ರಿನ್ಸಿಪಾಲ್ ಎಂ. ಬಾಲಕೃಷ್ಣ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು. 

kinnigoli14111302

Comments

comments

Comments are closed.

Read previous post:
kinnigoli14111301
ಕಿನ್ನಿಗೋಳಿ : ಆಳ್ವಾಸ್ ವಿಶ್ವನುಡಿಸಿರಿ ಪೂರ್ವಭಾವಿ ಸಭೆ

ಕಿನ್ನಿಗೋಳಿ : ವಿಶ್ವನುಡಿಸಿರಿ ಗಾಗಿ ಶ್ರಮಿಸುತ್ತಿರುವ ಡಾ| ಮೋಹನ ಆಳ್ವರವರಿಗೆ ಕಿನ್ನಿಗೋಳಿ ಪರಿಸರದ ನಾಗರಿಕರು ಸರ್ವ ರೀತಿಯಲ್ಲಿ ಸಹಕರಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಕಟೀಲು ದೇವಳ ಅರ್ಚಕ ಲಕ್ಷ್ಮೀನಾರಾಯಣ...

Close