ಸೇವಾ ಮನೋಭಾವನೆ ಗುಣ ಜೀವನದ ಸಾರ್ಥಕತೆ

ಪಕ್ಷಿಕೆರೆ: ಸೇವಾ ಮನೋಭಾವನೆಯ ಗುಣವೇ ಜೀವನವನ್ನು ಸಾರ್ಥಕತೆಗೊಳಿಸಬಲ್ಲುದು. ಜನರಿಗೆ ಸಹಕಾರಿಯಾಗುವ ಈ ತಂಗುದಾಣದ ಮೂಲಕ ತಮ್ಮ ಕೀರ್ತಿಶೇಷ ಹಿರಿಯರ ನೆನಪು ಸಾರ್ವಜನಿಕರ ಮನಸ್ಸಿನಲ್ಲಿ ಉಳಿಸಿದಂತಾಗಿದೆ ಎಂದು ತುಳು ಅಕಾಡೆಮಿ ಮಾಜಿ ಅಧ್ಯಕ್ಷ ಉಮಾನಾಥ ಕೋಟ್ಯಾನ್ ಹೇಳಿದರು.
ಶುಕ್ರವಾರ ಪಡುಪಣಂಬೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಕ್ಷಿಕೆರೆ ಸಂತ ಜೂದರ ಪವಿತ್ರ ಯಾತ್ರಿಕ ಕೇಂದ್ರದ ಬಳಿ ಅತ್ತೂರು ಗುತ್ತು ದಿವಂಗತ ಕೃಷ್ಣ ಶೆಟ್ಟಿಯವರ ಸ್ಮರಣಾರ್ಥ ಪತ್ನಿ ಮತ್ತು ಮಕ್ಕಳ ಕೊಡುಗೆಯಾದ ಪ್ರಯಾಣಿಕರ ತಂಗುದಾಣ ಉದ್ಘಾಟಿಸಿ ಮಾತನಾಡಿದರು.
ಸುರಗಿರಿ ಶ್ರೀ ಮಹಾಲಿಂಗೇಶ್ವರ ಕ್ಷೇತ್ರದ ಆಡಳಿತ ಮೊಕ್ತೇಸರ ಕೆ. ಸೀತಾರಾಮ ಶೆಟ್ಟಿ, ಹಳೆಯಂಗಡಿ ಪಿ.ಸಿಎ ಬ್ಯಾಂಕ್ ನಿರ್ದೇಶಕ ಜಯರಾಮ ಆಚಾರ್ಯ, ಸೀತರಾಮ್‌ಕುಮಾರ್ ಕಟೀಲು, ಜಿಲ್ಲಾ ಪಂಚಾಯಿತಿ ಸದಸ್ಯ ಈಶ್ವರ ಕಟೀಲು, ಪಡುಪಣಂಬೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕೊಲ್ಲು, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ವಿನೋದ್ ಬೊಳ್ಳೂರು, ಪಡಪಣಂಬೂರು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ವಿನೋದ್ ಸಾಲ್ಯಾನ್, ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾ ಉಪಾಧ್ಯಕ್ಷೆ ಕಸ್ತೂರಿ ಪಂಜ, ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ಅಧ್ಯಕ್ಷ ಜನಾರ್ದನ ಕಿಲೆಂಜೂರು, ಲೀಲಾ ಭಂಜನ್, ವಿಕಾಸ್ ಶೆಟ್ಟಿ,ಗುಲಾಬಿ ಸುವರ್ಣ,ಬರ್ಕೆ ಸುಧಾಕರ ಶೆಟ್ಟಿ, ಮೊಮ್ಮೊಟ್ಟು ಜಗನ್ನಾಥ ಶೆಟ್ಟಿ, ಅತ್ತೂರು ಗುತ್ತು ಪ್ರಸನ್ನ ಶೆಟ್ಟಿ, ಶಂಕರ ಶೆಟ್ಟಿ, ಸುರೇಶ್ ಪಂಜ, ದಾನಿಗಳಾದ ಹರೀಶ್ ಶೆಟ್ಟಿ, ನಿತಿನ್ ಶೆಟ್ಟಿ, ಸಚಿನ್ ಶೆಟ್ಟಿ ಉಪಸ್ಥಿತರಿದ್ದರು.

Kinnigoli15111301

Comments

comments

Comments are closed.

Read previous post:
kinnigoli14111308
ತಿಮ್ಮಪ್ಪಯ್ಯ, ಬಸದಿ, ಮಸೀದಿ ರಸ್ತೆ ಉದ್ಘಾಟನೆ

ಕಿನ್ನಿಗೋಳಿ : ಪಡು ಪಣಂಬೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಿಮ್ಮಪ್ಪಯ್ಯ, ಬಸದಿ ಹಾಗೂ ಮಸೀದಿ ರಸ್ತೆಯು ಮಂಗಳೂರು ಸಂಸದರ ನಿಧಿಯಿಂದ 17.50 ಲಕ್ಷ ರೂಪಾಯಿಗಳ ವೆಚ್ಚದಲ್ಲಿ ಕಾಂಕ್ರೀಟೀಕರಣಗೊಂಡಿದ್ದು ಗುರುವಾರ...

Close