ಕೆರೆಕಾಡು- ಜನವರಿ 19ರಂದು ಮುಸ್ಲಿಮ್ ಸಾಮೂಹಿಕ ಮದುವೆ

ಕಿನ್ನಿಗೋಳಿ: ಕೆರೆಕಾಡು-ಮುಲ್ಕಿ ಸಾದತ್ ವಲಿಯುಲ್ಲಾಹಿ ( ಖ. ಸಿ. ) ಝಿಕರ್ ಸಮಿತಿಯ ವತಿಯಿಂದ 9 ನೇ ವರ್ಷದ ಸಾಮೂಹಿಕ ವಿವಾಹವು ಜ. 19-01-2014ರಂದು ಕೆರೆಕಾಡು -ಮುಲ್ಕಿ ಮಜ್ಲಿಸ್ ನಲ್ಲಿ ನಡೆಯಲಿದೆ ಈ ಬಗ್ಗೆ ಮುಸ್ಲಿಮ್ ಸಮುದಾಯದ ಬಡ ವಧೂ-ವರರು ಹೆಸರನ್ನು ನೊಂದಾಯಿಸಿಕೊಳ್ಳಬಹುದು. ಸಮಿತಿಯ ವತಿಯಿಂದ ವಧುವಿಗೆ ನೆಕ್ಲೇಸ್ ಬೆಂಡೋಲೆ ಮತ್ತು ಮದುವೆಯ ಸೀರೆಯನ್ನು ಉಚಿತವಾಗಿ ನೀಡಲಾಗುವುದು. ಹೆಸರು ನೊಂದಾಯಿಸಲು ನ. 30 ಕೊನೆಯ ದಿನಾಂಕವಾಗಿದೆ. ಹೆಚ್ಚಿನ ಮಾಹಿತಿಗೆ 9686652127, 9880094731ಗೆ ಸಂಪರ್ಕಿಸ ಬಹುದು ಎಂದು ಸಮಿತಿಯ ಪ್ರಕಟನೆ ತಿಳಿಸಿದೆ.

Comments

comments

Comments are closed.

Read previous post:
Kinnigoli16111301
ತಾಳಿಪಾಡಿ: ವೈದ್ಯಕೀಯ ಶಿಬಿರ

ಕಿನ್ನಿಗೋಳಿ : ಗುತ್ತಕಾಡು ರೋಟರಿ ಗ್ರಾಮೀಣ ದಳ ಹಾಗೂ ಗ್ರೀನ್ ಸ್ಟಾರ್ ಅಸೋಶಿಯೇಶನ್ ಶಾಂತಿನಗರ ಆಶ್ರಯದಲ್ಲಿ ಮುಕ್ಕ ಶ್ರೀನಿವಾಸ ಆಸ್ಪತ್ರೆಯ ಸಹಯೋಗದೊಂದಿಗೆ ವೈದ್ಯಕೀಯ ಶಿಬಿರ ಶುಕ್ರವಾರ ಗುತ್ತಕಾಡು ಶಾಂತಿನಗರದಲ್ಲಿ...

Close