ಕಿನ್ನಿಗೋಳಿ ರೋಟರಿ ಶಾಲೆ : ಗುರು ವಂದನೆ

ಕಿನ್ನಿಗೋಳಿ: ಶಿಕ್ಷಕರು ವಿದ್ಯಾರ್ಥಿಗಳನ್ನು ಶೀಲ, ಸಚ್ಚಾರಿತ್ರ್ಯ, ಸನ್ನಡತೆಯನ್ನು ಬೆಳೆಸಿ ಭವಿಷ್ಯದ ಉತ್ತಮ ಪ್ರಜೆಯನ್ನಾಗಿಸುತ್ತಾರೆ. ಆದ್ದರಿಂದ ಒಂದು ದೇಶದ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ತುಂಬಾ ಮುಖ್ಯವಾಗಿದೆ. ಈ ಹಿನ್ನೆಲೆಯಲ್ಲಿ ಶಿಕ್ಷಕರನ್ನು ನಾವು ಯಾವತ್ತೂ ಸ್ಮರಿಸಿಕೊಳ್ಳಬೇಕು. ನಮ್ಮ ಗೌರವವು ಕೇವಲ ಒಂದೇ ದಿನಕ್ಕೆ ಸೀಮಿತವಾಗಬಾರದು ಎಂದು ಕಿನ್ನಿಗೋಳಿ ರೋಟರಿ ಆಂಗ್ಲಮಾಧ್ಯಮ ಶಾಲೆಯ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಯೋಗೀಶ್ ಕೋಟ್ಯಾನ್ ಹೇಳಿದರು
ಕಿನ್ನಿಗೋಳಿ ರೋಟರಿ ಆಂಗ್ಲಮಾಧ್ಯಮ ಶಾಲೆಯ ಶಿಕ್ಷಕ ರಕ್ಷಕ ಸಂಘದ ವತಿಯಿಂದ ಶನಿವಾರ ನಡೆದ ಗುರುವಂದನೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಈ ಸಂದರ್ಭ ಶಾಲೆಯ ಶಿಕ್ಷಕ ಹಾಗೂ ಶಿಕ್ಷಕೇತರ ಸಿಬ್ಬಂದಿಗಳನ್ನು ಸನ್ಮಾನಿಸಲಾಯಿತು.
ಕಿನ್ನಿಗೋಳಿ ರೋಟರಿ ಆಂಗ್ಲಮಾಧ್ಯಮ ಶಾಲೆಯ ಕಾರ್ಯದರ್ಶಿ ಕಳ್ಳಿಗೆ ಬಾಲಕೃಷ್ಣ ಶೆಟ್ಟಿ ಅಧ್ಯಕ್ಷತೆಯನ್ನು ವಹಿಸಿದ್ದರು. ಶಾಲಾ ಕೋಶಾಧಿಕಾರಿ ಸತೀಶ್ಚಂದ್ರ ಹೆಗ್ಡೆ, ಕಿನ್ನಿಗೋಳಿ ರೋಟರಿ ಕ್ಲಬ್ ಅಧ್ಯಕ್ಷ ರಾಬರ್ಟ್ ರುಸಾರಿಯೋ, ಕಾರ್ಯದರ್ಶಿ ಜೊಕಿಂ ಸಿಕ್ವೇರಾ, ಮುಖ್ಯ ಶಿಕ್ಷಕ ಗಿಲ್ಬರ್ಟ್ ಡಿಸೋಜ ಉಪಸ್ಥಿತರಿದ್ದರು.
ಶಾಲೆಯ ಶಿಕ್ಷಕ ರಕ್ಷಕ ಸಂಘದ ಉಪಾಧ್ಯಕ್ಷೆ ಪ್ರತಿಮಾ ಕಾರ್ಯಕ್ರಮ ನಿರ್ವಹಿಸಿದರು.

Kinnigoli16111302

Comments

comments

Comments are closed.

Read previous post:
ಕೆರೆಕಾಡು- ಜನವರಿ 19ರಂದು ಮುಸ್ಲಿಮ್ ಸಾಮೂಹಿಕ ಮದುವೆ

ಕಿನ್ನಿಗೋಳಿ: ಕೆರೆಕಾಡು-ಮುಲ್ಕಿ ಸಾದತ್ ವಲಿಯುಲ್ಲಾಹಿ ( ಖ. ಸಿ. ) ಝಿಕರ್ ಸಮಿತಿಯ ವತಿಯಿಂದ 9 ನೇ ವರ್ಷದ ಸಾಮೂಹಿಕ ವಿವಾಹವು ಜ. 19-01-2014ರಂದು ಕೆರೆಕಾಡು -ಮುಲ್ಕಿ ಮಜ್ಲಿಸ್...

Close