ಕಿನ್ನಿಗೋಳಿ ರಕ್ತದಾನ ಶಿಬಿರ

ಕಿನ್ನಿಗೋಳಿ: ಆದರ್ಶ ಬಳಗ ಕೊಡೆತ್ತೂರು, ಕಿನ್ನಿಗೋಳಿ ವಿಶ್ವಬ್ರಾಹ್ಮಣ ಸಮಾಜ ಸೇವಾ ಸಂಘ, ಸಾರ್ವಜನಿಕ ಬಾಲ ಗಣೇಶೋತ್ಸವ ಸಮಿತಿ ರಾಜರತ್ನಪುರ, ಸೌತ್ ಕೆನೆರಾ ಫೋಟೋಗ್ರಾಫರ‍್ಸ್ ಅಸೋಸಿಯೇಶನ್ ಮೂಲ್ಕಿ ವಲಯ ಇದರ ಜಂಟೀ ಆಶ್ರಯದಲ್ಲಿ ಮಂಗಳೂರು ಎ. ಜೆ. ಆಸ್ಪತ್ರೆಯ ಸಹಯೋಗದಲ್ಲಿ ಬೃಹತ್ ರಕ್ತದಾನ ಶಿಬಿರ ಭಾನುವಾರ ರಾಜರತ್ನಪುರ ಸರಾಫ್ ಅಣ್ಣಯ್ಯಾಚಾರ್ ಸಭಾಭವನದಲ್ಲಿ ನಡೆಯಿತು. ಎ. ಜೆ. ಆಸ್ಪತ್ರೆಯ ವೈದ್ಯ ಡಾ| ಅರವಿಂದ, ವಿಶ್ವಬ್ರಾಹ್ಮಣ ಸಮಾಜ ಸೇವಾ ಸಂಘದ ಅಧ್ಯಕ್ಷ ಕೆ. ದಿನೇಶ್ ಆಚಾರ್ಯ, ಕಟ್ಟಡ ಸಮಿತಿ ಅಧ್ಯಕ್ಷ ಪೃಥ್ವಿರಾಜ ಆಚಾರ್ಯ, ಯುಗಪುರುಷದ ಭುವನಾಭಿರಾಮ ಉಡುಪ, ಮೆನ್ನಬೆಟ್ಟು ಗ್ರಾ. ಪಂ. ಅಧ್ಯಕ್ಷ ಜನಾರ್ದನ ಕಿಲೆಂಜೂರು. ಗ್ರಾ. ಪಂ. ಸದಸ್ಯ ಕೇಶವ ಕಟೀಲ್, ಆದರ್ಶ ಬಳಗದ ಅಧ್ಯಕ್ಷ ಜೀತೇಂದ್ರ ಶೆಟ್ಟಿ , ದಾಮೋದರ ಶೆಟ್ಟಿ, ಪೋಟೋಗ್ರಾಫರ‍್ಸ್ ಅಸೋಸಿಯೇಶನ್ ಅಧ್ಯಕ್ಷ ನವೀನ್‌ಕುಮಾರ್ ಕಟೀಲ್, ಕೆ. ಬಿ. ಸುರೇಶ್, ಗಣೇಶೋತ್ಸವ ಸಮಿತಿ ಅಧ್ಯಕ್ಷ ಶಿವಶಂಕರ್, ಯುವ ಶಕ್ತಿ ಅಧ್ಯಕ್ಷ ಶೈಲೇಶ್ ಮತ್ತಿತರರು ಉಪಸ್ಥಿತರಿದ್ದರು.

kinnigoli18111305

Comments

comments

Comments are closed.

Read previous post:
kinnigoli18111304
ಕಿನ್ನಿಗೋಳಿ “ಆಜ್ ಅಮಿ ಕೊಂಕ್ಣಿ ಉಲವ್ಯಾಂ” ಕಾರ್ಯಗಾರ

ಕಿನ್ನಿಗೋಳಿ: ದಾಯ್ಜಿ ದುಬಾಯಿ ಇಂಡಿಯಾ, ಮಂಗಳೂರು ಘಟಕ ಹಾಗೂ ಕಿನ್ನಿಗೋಳಿಯ ಸ್ಥಳೀಯ ಕೊಂಕಣಿ ಸಂಘಟನೆಗಳ ಸಹಯೋಗದಲ್ಲಿ ಡಿಸೆಂಬರ್ 1ರಂದು ಕಿನ್ನಿಗೋಳಿ ಮೂರುಕಾವೇರಿ ಬಳಿಯ ಕೊಯಿಲಾದಲ್ಲಿ ಶಾಲಾ ವಿದ್ಯಾರ್ಥಿಗಳಿಗಾಗಿ ಒಂದು...

Close