ಕಿನ್ನಿಗೋಳಿ “ಆಜ್ ಅಮಿ ಕೊಂಕ್ಣಿ ಉಲವ್ಯಾಂ” ಕಾರ್ಯಗಾರ

ಕಿನ್ನಿಗೋಳಿ: ದಾಯ್ಜಿ ದುಬಾಯಿ ಇಂಡಿಯಾ, ಮಂಗಳೂರು ಘಟಕ ಹಾಗೂ ಕಿನ್ನಿಗೋಳಿಯ ಸ್ಥಳೀಯ ಕೊಂಕಣಿ ಸಂಘಟನೆಗಳ ಸಹಯೋಗದಲ್ಲಿ ಡಿಸೆಂಬರ್ 1ರಂದು ಕಿನ್ನಿಗೋಳಿ ಮೂರುಕಾವೇರಿ ಬಳಿಯ ಕೊಯಿಲಾದಲ್ಲಿ ಶಾಲಾ ವಿದ್ಯಾರ್ಥಿಗಳಿಗಾಗಿ ಒಂದು ದಿನದ “ಆಜ್ ಅಮಿ ಕೊಂಕ್ಣಿ ಉಲವ್ಯಾಂ” ಕೊಂಕಣಿ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ.
ಪರಬಾಷಾ ವ್ಯಾಮೋಹದಿಂದ ಮೂಲ ಭಾಷೆಯನ್ನು ಮೂಲೆಗುಂಪು ಮಾಡಲಾಗುತ್ತದೆ. ಕೊಂಕಣಿಗೆ ಮಹತ್ವ ಕೊಡುವ ದೃಷ್ಟಿಯಿಂದ ಐದನೇ ತರಗತಿಯಿಂದ ಹತ್ತನೇ ತರಗತಿಯ ವಿದ್ಯಾರ್ಥಿಗಾಗಿ ಬೆಳಿಗ್ಗೆ 8 ಘಂಟೆಯಿಂದ ಸಂಜೆ 5 ಘಂಟೆಯವರೆಗೆ ಆಯೋಜಿಸಿಲಾಗುವ ಒಂದು ದಿನದ ಕಾರ್ಯಾಗಾರದಲ್ಲಿ ವಿದ್ಯಾರ್ಥಿಗಳಿಗೆ ಹಳ್ಳಿ ಸೊಗಡನ್ನು ಬಿಂಬಿಸುವ ಮನೆ, ಪ್ರಕೃತಿ ವೈವಿದ್ಯಮಯ ಹಾಗು ಆಡು ಬಾಷೆ ಕೊಂಕಣಿಯಲ್ಲಿ ಬಳಸಲ್ಪಡುವ ವಿವಿಧ ವಸ್ತುಗಳ ಶಬ್ದ ಭಂಡಾರವನ್ನು ವೃದ್ಧಿಗೊಳಿಸುವ ವಿನೂತನ ಪ್ರಯತ್ನದ ಮೂಲಕ ಮಕ್ಕಳಲ್ಲಿ ಕೊಂಕಣಿ ಸಂಸ್ಕ್ರತಿ, ಭಾಷಾಭಿಮಾನದ ಪ್ರೀತಿಯೊಂದಿಗೆ ತರಬೇತಿ ನೀಡಲಾಗುವುದು ಎಂದು ಮಂಗಳೂರು ದಾಯ್ಜಿ ವೀಕ್ಲಿಯ ಸಂಪಾದಕ ಹೇಮಾಚಾರ್ಯ ಕಿನ್ನಿಗೋಳಿಯ ಅಭಿನಂದನ್ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಹೇಳಿದರು.
ಒಂದು ದಿನದ ಕಾರ್ಯಾಗಾರದಲ್ಲಿ ಮಂಗಳೂರು ನಗರ ಪ್ರದೇಶದ 30 ಹಾಗೂ ಕಿನ್ನಿಗೋಳಿ ಪ್ರದೇಶದ 30 ಒಟ್ಟು 70 ಮಂದಿ ವಿಧ್ಯಾರ್ಥಿಗಳಿಗೆ ಮಾತ್ರ ಪ್ರವೇಶ. ಉಚಿತ ಕಾರ್ಯಾಗಾರದಲ್ಲಿ ಪಾಲ್ಗೊಳ್ಳುವ ಎಲ್ಲಾ ವಿದ್ಯಾರ್ಥಿಗಳಿಗೂ ಬಹುಮಾನ ಮತ್ತು ಸರ್ಟಿಫಿಕೇಟುಗಳನ್ನು ವಿತರಿಸಲಾಗುವುದು. ಆಸಕ್ತರು ನವೆಂಬರ್ 25 ರೊಳಗೆ ತಮ್ಮ ಹೆಸರನ್ನು ನೊಂದಾಯಿಸಬೇಕು ಎಂದು ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ಸಂಘಟಕ ಜೊಸ್ಸಿ ಪಿಂಟೊ, ಉಜ್ವಲ್ ಸ್ತ್ರೀ ಸಂಘಟನೆ ಅಧ್ಯಕ್ಷೆ ಗ್ರೇಸಿ ರೊಡ್ರಿಗಸ್ ಐಸಿವೈಎಮ್ ಅಧ್ಯಕ್ಷ ಲಾಯ್ಡ್ ಪಿಂಟೊ, ಹಿರಿಯ ಸಾಹಿತಿ ಕೆ.ಜಿ ಮಲ್ಯ, ಮೆಲ್ವಿನ್ ರೊಡ್ರಿಗಸ್, ವಾಲ್ಟರ್ ದಾಂತಿಸ್, ಪಾಸ್ಕಲ್ ರೇಗೊ, ರಿಚರ್ಡ್ ಪ್ರಶಾಂತ್ ರೊಡ್ರಿಗಸ್ ಉಪಸ್ಥಿತರಿದ್ದರು.

kinnigoli18111304

Comments

comments

Comments are closed.

Read previous post:
kinnigoli18111303
ಸೈಂಟ್ ಲಾರೆನ್ಸ್ ಇಂಡಿಯನ್ ಸ್ಕೂಲ್ ಹೊಸ ಕಟ್ಟಡ ಶಿಲನ್ಯಾಸ

ಕಿನ್ನಿಗೋಳಿ: ಉತ್ತಮ ಕನಸುಗಳು ಛಲ ಮತ್ತು ಉತ್ತಮ ಗುರಿಯನ್ನು ಇರಿಸಿ ಸಮಾಜದ ಸೇವೆಗಾಗಿ ಜೀವನ ಮುಡಿಪಾಗಿ ಇಟ್ಟಾಗ ಸಾರ್ಥಕ ಜೀವನ ಮತ್ತು ಮಾನಸಿಕ ನೆಮ್ಮದಿ ಕಂಡುಕೊಳ್ಳಬಹುದು ಎಂದು ಕಲ್ಯಾಣಪುರ...

Close