ಸೈಂಟ್ ಲಾರೆನ್ಸ್ ಇಂಡಿಯನ್ ಸ್ಕೂಲ್ ಹೊಸ ಕಟ್ಟಡ ಶಿಲನ್ಯಾಸ

ಕಿನ್ನಿಗೋಳಿ: ಉತ್ತಮ ಕನಸುಗಳು ಛಲ ಮತ್ತು ಉತ್ತಮ ಗುರಿಯನ್ನು ಇರಿಸಿ ಸಮಾಜದ ಸೇವೆಗಾಗಿ ಜೀವನ ಮುಡಿಪಾಗಿ ಇಟ್ಟಾಗ ಸಾರ್ಥಕ ಜೀವನ ಮತ್ತು ಮಾನಸಿಕ ನೆಮ್ಮದಿ ಕಂಡುಕೊಳ್ಳಬಹುದು ಎಂದು ಕಲ್ಯಾಣಪುರ ಚರ್ಚ್ ಧರ್ಮಗುರು ಫಾ| ಸ್ಟೇನಿ ಬಿ. ಲೋಬೊ ಹೇಳಿದರು.
ಸುಮಾರು 30 ಕೋಟಿ ವೆಚ್ಚದ 90000ಚದರ ಅಡಿಗಳ ಕಿನ್ನಿಗೋಳಿಯ ಸೈಂಟ್ ಲಾರೆನ್ಸ್ ಇಂಡಿಯನ್ ಸ್ಕೂಲು ಹೊಸಕಟ್ಟಡದ ಶಿಲನ್ಯಾಸ ಸಮಾರಂಭದಲ್ಲಿ ಆಶೀರ್ವಚನ ನೀಡಿ ಮಾತನಾಡಿದರು.
ಯುವಜನ ಸೇವಾ ಹಾಗೂ ಮೀನುಗಾರಿಕಾ ಸಚಿವ ಅಭಯಚಂದ್ರ ಜೈನ್ ಕಾರ್ಯಕ್ರಮ ಉದ್ಘಾಟಿಸಿ ಅಧ್ಯಕ್ಷತೆ ವಹಿಸಿ ಮಾತನಾಡಿ ಗ್ರಾಮೀಣ ಪರಿಸರದ ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಮೌಲ್ಯಾಧಾರಿತ ಶಿಕ್ಷಣ ಸಿಗಬೇಕು. ಗ್ರಾಮೀಣ ಪ್ರತಿಭೆಗಳು ಭವಿಷ್ಯದಲ್ಲಿ ಸಮಾಜದ ಮುಂಚೂಣಿಗೆ ಬರುವಂತಾಗಬೇಕು ಎಂದು ಹೇಳಿದರು.

ಮಂಗಳೂರು ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಶಾಖೆಯ ಡೆಪ್ಯುಟಿ ಜನರಲ್ ಮ್ಯಾನೇಜರ್ ಎಂ.ಆರ್. ಜಯೇಶ್, ಮಾಜಿ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಶಾಲೆಟ್ ಪಿಂಟೊ, ಇಂಜೀನಿಯರ್ ಯಶವಂತ್ ಕುಮಾರ್ ರೈ, ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ಅಧ್ಯಕ್ಷ ಜನಾರ್ಧನ ಕಿಲೆಂಜೂರು, ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶ್ಯಾಮಲಾ ಪಿ. ಹೆಗ್ಡೆ, ಭಾರತಮಾತಾ ಶಿಕ್ಷಣಸಂಸ್ಥೆ ಚಯರ್‌ಮನ್ ಜೆ.ಬಿ. ಸಿಕ್ವೇರಾ ಉಪಸ್ಥಿತರಿದ್ದರು.
ಭಾರತಮಾತಾ ಶಿಕ್ಷಣಸಂಸ್ಥೆ ಹಾಗೂ ಚಾರಿಟೇಬಲ್ ಟ್ರಸ್ಟ್‌ನ ಆಡಳಿತ ನಿರ್ದೇಶಕ ವಾಲ್ಟರ್ ಸ್ಟೀಫನ್ ಮೆಂಡಿಸ್ ಸ್ವಾಗತಿಸಿ, ಮುಖ್ಯ ಶಿಕ್ಷಕಿ ಸ್ವರ್ಣ ವಂದಿಸಿದರು. ಪ್ಲೊರೆನ್ಸ್ ಮೆಂಡಿಸ್ ಹಾಗೂ ಎಡಿಲಿನ್ ಮೆಂಡಿಸ್ ಕಾರ್ಯಕ್ರಮ ನಿರ್ವಹಿಸಿದರು.

kinnigoli18111303

Comments

comments

Comments are closed.

Read previous post:
kinnigoli18111302
ಕಿನ್ನಿಗೋಳಿ ಕೊಸೆಸಾಂವ್ ಅಮ್ಮನವರ ಇಗರ್ಜಿ

Jerry Kinnigoli ಕಿನ್ನಿಗೋಳಿ: ವಾರ್ಷಿಕ ಹಬ್ಬ ದ ಪ್ರಯುಕ್ತ ಅಲಂಕಾರಗೊಂಡ ಕಿನ್ನಿಗೋಳಿ ಕೊಸೆಸಾಂವ್ ಅಮ್ಮನವರ ಇಗರ್ಜಿ

Close