ಕಟೀಲು ದೇವಸ್ಥಾನಕ್ಕೆ ನೂತನ ಧ್ವಜಸಂಸ್ತಂಭ

Narendra Kerekadu

ಕಟೀಲು : ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನಕ್ಕೆ ಕಿನ್ನಿಗೋಳಿ ಬಳಿಯ ಕೊಡೆತ್ತೂರು ಮಾಗಂದಡಿ ಕುಟುಂಬಿಕರು ಸೇವಾ ರೂಪದಲ್ಲಿ ನೂತನ ಧ್ವಜಸಂಸ್ತಂಭವನ್ನು ರಚಿಸಲು ಸುಳ್ಯದ ಉಬರಡ್ಕದ ರಾಮಮೋಹನರವರ ತೋಟದ ಮನೆಯ ತೇಗದ ಮರವನ್ನು ಬಳಸುವ ಮುಹೂರ್ತವನ್ನು ಭಾನುವಾರ ನಡೆಸಲಾಯಿತು. ಕಟೀಲು ದೇವಳದ ವೇದವ್ಯಾಸ ತಂತ್ರಿ, ಅನುವಂಶಿಕ ಅರ್ಚಕ ವಾಸುದೇವ ಆಸ್ರಣ್ಣ, ಪ್ರಧಾನ ಅರ್ಚಕ ಅನಂತ ಪದ್ಮನಾಭ ಆಸ್ರಣ್ಣ, ನ್ಯಾಯವಾದಿ ರಾಮಮೋಹನ ರಾವ್, ಗಣೇಶ್ ಕೆರ್ಮುನ್ನಾಯ, ಕೊಡೆತ್ತೂರು ಮಾಗಂದಡಿಯ ಮುಖ್ಯಸ್ಥ ರಾಮಕೃಷ್ಣ ಶೆಟ್ಟಿ, ಹರ್ಷರಾಜ್ ಶೆಟ್ಟಿ ಇನ್ನಿತರರು ಹಾಜರಿದ್ದರು.

Kinnigoli 19111301

Comments

comments

Comments are closed.

Read previous post:
kinnigoli18111306
ನಿಧನ: ಶಾರದಾ ಜಿ. ಶೆಣೈ(67)

ಕಿನ್ನಿಗೋಳಿ :ಕಿನ್ನಿಗೋಳಿಯ ದಾಮಸ್ ಕಟ್ಟೆ ನಿವಾಸಿ ಶಾರದಾ ಜಿ. ಶೆಣೈ(67 ವರ್ಷ) ಸೋಮವಾರದಂದು ನಿಧನರಾದರು. ಮೃತರು ಕಿನ್ನಿಗೋಳಿ ಶ್ರೀ ರಾಮ ಮಂದಿರದ ಮಾತೃ ಮಂಡಳಿಯ ಸಕ್ರೀಯ ಕಾರ್ಯಕರ್ತೆ...

Close