ಕ್ರೀಡೆಗಳು ಆರೋಗ್ಯಕ್ಕೆ ಪೂರಕ

Puneethakrishna Sk
ಮುಲ್ಕಿ: ಕ್ರೀಡೆಗಳಲ್ಲಿ ಸೋಲು ಗೆಲುವು ಮುಖ್ಯವಲ್ಲ ಭಾಗವಹಿಸುವುದು ಮುಖ್ಯ.ಇಂದಿನ ವೈಜ್ಞಾನಿಕ ಯುಗದಲ್ಲಿ ಕೆಸರುಗದ್ದೆಯಂತಹ ಜಾನಪದ ಕ್ರೀಡೆಗಳು ನಶಿಸಿ ಹೋಗುತ್ತಿದೆ,ಯುವಜನಾಂಗ ಒಗ್ಗಟ್ಟಾಗಿ ಇಂತಹ ಕೀಡೆಗಳಿಗೆ ಪ್ರೋತ್ಸಾಹ ನೀಡಬೇಕಾಗಿದೆ,ಕೀಡೆಗಳಿಂದ ಆರೋಗ್ಯವೂ ಅಭಿವೃದ್ದಿ ಹೊಂದುವುದು ಎಂದು ಪತ್ರಕರ್ತ ಪರಮಾನಂದ ಸಾಲ್ಯಾನ್ ಹೇಳಿದರು. ಅವರು ದಕಜಿಪ ಕಿರಿಯ ಪ್ರಾಥಮಿಕ ಶಾಲೆ ಕವಾತ್ತಾರು ಮತ್ತು ಹಳೇವಿದ್ಯಾರ್ಥಿ ಸಂಘದ ವಾರ್ಷಿಕೋತ್ಸವದ ನಿಮಿತ್ತ ಕರ್ನೀರೆಯ ದೇವಸ್ಥಾನದ ಬಳಿ ನಡೆದ ಕೆಸರುಗದ್ದೆ ಕ್ರೀಡೋತ್ಸವವನ್ನು ಉದ್ಘಾಟಿಸಿ ಮಾತನಾಡಿದರು.
ವೇದಿಕೆಯಲ್ಲಿ ಬಳುಂಜ ಗ್ರಾ.ಪಂ. ಅಧ್ಯಕ್ಷ ದಿನೇಶ ಪುತ್ರನ್, ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ಲೀಲಾಧರ ಶೆಟ್ಟಿ ದೇಂದಡ್ಕ, ಕಾರ್ಯಧ್ಯಕ್ಷ ಮೋಹನದಾಸ ಶೆಟ್ಟಿ, ಎಸ್‌ಡಿಎಮ್‌ಸಿ ಅಧ್ಯಕ್ಷ ಅಶೋಕ ಭಂಡಾರಿ, ಕೆಸರುಗದ್ದೆ ಓಟಕ್ಕೆ ಸ್ಥಳದಾನ ನೀಡಿದ ಬಾಲಗುತ್ತುಮನೆ ರಮಣಿ ಚೌಟ, ಉದ್ಯಮಿ ಧನರಾಜ ಉಪಸ್ಥಿತರಿದ್ದರು. ಪ್ರಾಣೇಶ ಭಟ್ ದೇಂದಡ್ಕ ಕಾರ್ಯಕ್ರಮ ನಿರ್ವಹಿಸಿದರು. ಬಳಿಕ ಕೆಸರುಗದ್ದೆ ಕ್ರೀಡೋತ್ಸವ ನಡೆದು ವಿವಿದ ಸ್ಪರ್ದೆಗಳಲ್ಲಿ ಜಯ ಗಳಿಸಿದವರಿಗೆ ಬಹುಮಾನ ವಿತರಿಸಲಾಯಿತು.

Kinnigili21111302

Kinnigili21111301

Comments

comments

Comments are closed.

Read previous post:
Kinnigoli 19111302
ಪೊಂಪೈ ಎನ್.ಎಸ್.ಎಸ್. ಶಿಬಿರ ಸಮಾರೋಪ

ಕಿನ್ನಿಗೋಳಿ: ವ್ಯಕ್ತಿತ್ವ ವಿಕಸನ, ನಾಯಕತ್ವ, ಸೇವಾ ಮನೋಭಾವನೆ ಹಾಗೂ ಮಾನವೀಯ ಸಂಬಂಧಗಳ ಸರ್ವಾಂಗೀಣ ಬೆಳವಣಿಗೆಗೆಗೆ ಎನ್. ಎಸ್. ಎಸ್. ಶಿಬಿರ ಪೂರಕ ಎಂದು ಕಟೀಲು ದೇವಳ ಕಾಲೇಜು ಪ್ರಾಚಾರ್ಯ...

Close