ಪಡುಪಣಂಬೂರು ಕ್ಲಸ್ಟರ್: ಪ್ರತಿಭಾ ಕಾರಂಜಿ

Bhagyavan Sanil

ಕಿನ್ನಿಗೋಳಿ : ಸಾಧನೆಯ ಮೆಟ್ಟಿಲು ಏರಲು ನಿರಂತರ ಪರಿಶ್ರಮ ಅಗತ್ಯ. ವಿದ್ಯಾರ್ಥಿಗಳು ರಾಷ್ಟ್ರೀಯ ಸಾಮರಸ್ಯತೆ, ಶಿಸ್ತು, ಸಂಸ್ಕೃತಿ ಹಾಗೂ ಸಂಸ್ಕಾರಗಳಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ನೈಜ ಪ್ರತಿಭೆಯನ್ನು ಪ್ರದರ್ಶಿಸಬೇಕು ಎಂದು ದ.ಕ ಜಿಲ್ಲಾ ಪಂಚಾಯಿತಿ ಸದಸ್ಯ ಈಶ್ವರ ಕಟೀಲು ಹೇಳಿದರು.
ಪಕ್ಷಿಕರೆ-ಪಂಜ ದ. ಕ. ಜಿ. ಪಂ. ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ನಡೆದ ಮಂಗಳೂರು ಉತ್ತರವಲಯ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕೆಮ್ರಾಲ್ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೇವತಿ ಶೆಟ್ಟಿಗಾರ್ ಅಧ್ಯಕ್ಷತೆ ವಹಿಸಿದ್ದರು. ಪಡುಪಣಂಬೂರು ಕ್ಲಸ್ಟರ್ ಸಿಆರ್‌ಪಿ ರಾಮದಾಸ್ ಭಟ್ ಪ್ರಸ್ತಾವನೆಗೈದರು. ಕೆಮ್ರಾಲ್ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ರಿಚಾರ್ಡ್ ಡಿಸೋಜ, ಗ್ರಾಮ ಪಂಚಾಯಿತಿ ಸದಸ್ಯರಾದ ಸುರೇಶ್ ದೇವಾಡಿಗ, ತಾರಾ ಶೆಟ್ಟಿ , ಸುಮಲತಾ, ಕೆಮ್ರಾಲ್ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಗಣೇಶ್, ಶಾಲಾ ಸಮಿತಿ ಅಧ್ಯಕ್ಷ ಪದ್ಮನಾಭ ಪೂಜಾರಿ ಉಪಸ್ಥಿತರಿದ್ದರು.
ಶಾಲಾ ಮುಖ್ಯ ಶಿಕ್ಷಕಿ ಜಯಂತಿ ಸ್ವಾಗತಿಸಿದರು. ಲಿಲ್ಲಿ ಪಿಂಟೊ ವಂದಿಸಿದರು, ಐರಿನ್ ಡಿಸೋಜ ಕಾರ್ಯಕ್ರಮ ನಿರೂಪಿಸಿದರು.

Kinnigili21111305

Comments

comments

Comments are closed.

Read previous post:
Kinnigili21111304
ಉಲ್ಲಂಜೆ ಮತ್ತು ಪದ್ಮನೂರು ಕ್ಲಸ್ಟರ್ ಪ್ರತಿಭಾ ಕಾರಂಜಿ

ಕಿನ್ನಿಗೋಳಿ : ಶಿಕ್ಷಕರ- ಪೋಷಕರು ಪಠ್ಯವಲ್ಲದೆ ಪ್ರತಿಭಾ ಕಾರಂಜಿಗಳಂತಹ ಚಟುವಟಿಕೆಗಳಿಗೆ ಸತತ ಪ್ರೋತ್ಸಾಹ ನೀಡಿ, ಮಕ್ಕಳಲ್ಲಿ ನಾಯಕತ್ವ, ಆತ್ಮವಿಶ್ವಾಸ ಹಾಗೂ ವ್ಯಕ್ತಿತ್ವ ವಿಕಸನ ರೂಪುಗೊಳಿಸಿ ಸುಪ್ತ ಪ್ರತಿಭೆಗಳನ್ನು ಸಮಾಜದ...

Close