ಉಲ್ಲಂಜೆ ಮತ್ತು ಪದ್ಮನೂರು ಕ್ಲಸ್ಟರ್ ಪ್ರತಿಭಾ ಕಾರಂಜಿ

Kinnigili21111304

ಕಿನ್ನಿಗೋಳಿ : ಶಿಕ್ಷಕರ- ಪೋಷಕರು ಪಠ್ಯವಲ್ಲದೆ ಪ್ರತಿಭಾ ಕಾರಂಜಿಗಳಂತಹ ಚಟುವಟಿಕೆಗಳಿಗೆ ಸತತ ಪ್ರೋತ್ಸಾಹ ನೀಡಿ, ಮಕ್ಕಳಲ್ಲಿ ನಾಯಕತ್ವ, ಆತ್ಮವಿಶ್ವಾಸ ಹಾಗೂ ವ್ಯಕ್ತಿತ್ವ ವಿಕಸನ ರೂಪುಗೊಳಿಸಿ ಸುಪ್ತ ಪ್ರತಿಭೆಗಳನ್ನು ಸಮಾಜದ ಮುಂಚೂಣಿಗೆ ತರಬೇಕು ಎಂದು ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶ್ಯಾಮಲ ಪಿ. ಹೆಗ್ಡೆ ಹೇಳಿದರು.
ದ.ಕ. ಜಿಲ್ಲಾ ಪಂಚಾಯಿತಿ ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ, ಸಂಪನ್ಮೂಲ ಕೇಂದ್ರ ಮಂಗಳೂರು ಉತ್ತರ ವಲಯ, ಉಲ್ಲಂಜೆ ಹಾಗೂ ಪದ್ಮನೂರು ಸಮೂಹ ಸಂಪನ್ಮೂಲ ಕೇಂದ್ರಗಳ ಜಂಟಿ ಆಶ್ರಯದಲ್ಲಿ ಗುರುವಾರ ಗುತ್ತಕಾಡು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಉಲ್ಲಂಜೆ ಹಾಗೂ ಪದ್ಮನೂರು ಕ್ಲಸ್ಟರ್ ಮಟ್ಟದ ಕಿರಿಯ ಮತ್ತು ಹಿರಿಯ ಪ್ರಾಥಮಿಕ ಶಾಲೆಗಳ ಪ್ರತಿಭಾ ಕಾರಂಜಿ ಸಮಾರಂಭದಲ್ಲಿ ಮಾತನಾಡಿದರು.
ಕಿನ್ನಿಗೋಳಿ ಪಂಚಾಯಿತಿ ಸದಸ್ಯ ಟಿ.ಎಚ್. ಮಯ್ಯದ್ದಿ ಕಾರ್ಯಕ್ರಮ ಉದ್ಘಾಟಿಸಿದರು.
ಸಿ.ಆರ್.ಪಿ. ಜಗದೀಶ್ ನಾವಡ , ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ನಾರಾಯಣ ಪೂಜಾರಿ, ಗುತ್ತಕಾಡು ಬಿಲ್ಲವ ಸಂಘ ಅಧ್ಯಕ್ಷ ಬಾಲಕೃಷ್ಣ ಡಿ. ಸಾಲ್ಯಾನ್, ಪಂಚಾಯಿತಿ ಸದಸ್ಯೆ ಶಾಂತಾ, ಗುತ್ತಕಾಡು ಮಸೀದಿ ಖತೀಬರು ಮದನಿ, ನಿವೃತ್ತ ಮುಖ್ಯ ಶಿಕ್ಷಕ ರಾಮದಾಸ್, ನಾಗರಿಕ ಹಿತ ರಕ್ಷಣಾ ಸಮಿತಿಯ ಅಧ್ಯಕ್ಷ ಚಂದ್ರಶೇಖರ್, ಮಾಜಿ ಅಧ್ಯಕ್ಷ ಟಿ.ಎನ್.ನಜೀರ್, ಯಂಗ್ ಫ್ರೆಂಡ್ಸ್ ಮಾಜಿ ಅಧ್ಯಕ್ಷ ಅಬೂಕ್ಕರ್, ದಿವಾಕರ ಕರ್ಕೇರ ಉಪಸ್ಥಿತರಿದ್ದರು.
ಗುತ್ತಕಾಡು ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಉಷಾರಾಮದಾಸ್ ಸ್ವಾಗತಿಸಿ ಶಿಕ್ಷಕಿ ತನುಜ ವಂದಿಸಿದರು. ಅನುರಾಧ ಕಾರ್ಯಕ್ರಮ ನಿರೂಪಿಸಿದರು.

Comments

comments

Comments are closed.

Read previous post:
Kinnigili21111303
ಪುಚ್ಚಾಡಿ ಅಣೆಕಟ್ಟು ಕಿಂಡಿ ಬಾಗಿಲು

ಕಿನ್ನಿಗೋಳಿ : ಕಿಲೆಂಜೂರು ಸಮೀಪದ ಪುಚ್ಚಾಡಿ ಕಿಂಡಿ ಅಣೆಕಟ್ಟುವಿನಲ್ಲಿ ಬೇಸಿಗೆ ಕಾಲದ ಕೃಷಿಗೆ ನೀರು ಸಂಗ್ರಹಣೆಗಾಗಿ ಕಿಂಡಿ ಬಾಗಿಲು ಹಾಕುವ ಕಾರ್ಯಕ್ರಮ ಅತ್ತೂರು ಬೈಲು ಮಹಾಗಣಪತಿ ದೇವಸ್ಥಾನದ ಅರ್ಚಕ...

Close