ಪಡುಪಣಂಬೂರು ಕ್ಲಸ್ಟರ್ ಪ್ರತಿಭಾ ಕಾರಂಜಿ

Yogeesh Pavanje

ಹಳೆಯಂಗಡಿ: ಶಾಲಾ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ನಡೆಯುವುದರಿಂದ ಮಕ್ಕಳಿಗೆ ಎಳೆವೆಯಲ್ಲಿಯೆ ಪ್ರೋತ್ಸಾಹ ಸಿಕ್ಕಾಗ ಮೊಗ್ಗಗಾಗಿದ್ದ ಪ್ರತಿಭೆಗಳು ಹೂವಾಗಿ ಅರಳ ಬಲ್ಲದು ವಿಧ್ಯಾರ್ಥಿಗಳಿಗೆ ಹೆತ್ತವರಿಂದ ಶಿಕ್ಷಕರಿಂದ ಪ್ರೋತ್ಸಾಹ ಸಿಕ್ಕರೆ ವಿಧ್ಯಾರ್ಥಿಗಳು ತಮ್ಮ ಊರು, ರಾಜ್ಯ, ದೇಶಕ್ಕೆ ಕೀರ್ತಿ ತರ ಬಲ್ಲರು ಎಂದು, ರಾಜೇಶ್ವರೀ ಸೂರ್ಯ ಕುಮಾರ್ ಹೇಳಿದರು.
ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ, ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರ್ಯವರ ಕಛೇರಿ ಉತ್ತರ ವಲಯ, ಯು. ಬಿ. ಂiiಂ. ಸಿ. ಹಿರಿಯ ಪ್ರಾಥಮಿಕ ಶಾಲೆ ಹಳೆಯಂಗಡಿ ಹಾಗೂ ಸಿ. ಎಸ್. ಐ. ಹಿರಿಯ ಪ್ರಾಥಮಿಕ ಶಾಲೆಗಳು ಜಂಟಿಯಾಗಿ ಹಮ್ಮಿಕೊಂಡ ಸಿ. ಆರ್. ಪಿ. ಪಡುಪಣಂಬೂರು ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ೨೦೧೩-೨೦೧೪ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಉದ್ಯಮಿ ಸ್ಟಾನ್ಲಿ ಕರ್ಕಡ, ಕೆನರ ಬ್ಯಾಂಕ್ ಹಳೆಯಂಗಡಿ ಶಾಖೆಯ ಪ್ರಬಂಧಕ ಗೋಪಾಲ ಕಾಮತ್, ಸಿ. ಎಸ್. ಐ. ಅಮ್ಮಣ್ಣ ಮೆಮೋರಿಯಲ್ ಚರ್ಚ್‌ನ ಧರ್ಮದರ್ಶಿ ರೆ| ಸಬೆಸ್ಟಿಯನ್ ಜತ್ತನ್ನ, ಹಳೆಯಂಗಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಪೂರ್ಣಿಮ ಮಧು, ಯು. ಬಿ. ಯಂ. ಸಿ. ಹಿರಿಯ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯಿನಿ ಜಾಸ್ಮಿನ್, ಸಿ. ಯಸ್. ಐ. ಹಿರಿಯ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯಿನಿ ಜ್ಯೋಯಿಸಿ ಶೆರ್ಲಿ, ಮೊದಲಾದವರು ಉಪಸ್ಥಿತರಿದ್ದರು.

Kinnigoli 23111301

Comments

comments

Comments are closed.

Read previous post:
Kinnigoli 22121304
ಶುಂಠಿಪಾಡಿ: ಮನೆಗೆ ಆಕಸ್ಮಿಕ ಬೆಂಕಿ

Ramesh P Ulepadi ಐಕಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಏಳಿಂಜೆ ಸಮೀಪದ ಶುಂಠಿಪಾಡಿ ಎಂಬಲ್ಲಿ ಶುಕ್ರವಾರ ಸಂಜೆ ಸುಮಾರು 5.30 ಗಂಟೆಗೆ ಹರೀಶ್ ಪೂಜಾರಿಯವರ ಮನೆಗೆ ಆಕಸ್ಮಿಕವಾಗಿ...

Close