ಗುತ್ತಕಾಡು: ರಕ್ತದಾನ ಶಿಬಿರ

ಕಿನ್ನಿಗೋಳಿ : ಗುತ್ತಕಾಡು ಯಂಗ್ ಫ್ರೆಂಡ್ಸ್ ಸ್ಪೋಟ್ಸ್ ಕ್ಲಬ್, ಬ್ರಹ್ಮ ಶ್ರೀ ನಾರಾಯಣ ಗುರು ಧರ್ಮ ಪರಿಪಾಲನಾ ಸಮಿತಿ ತಾಳಿಪಾಡಿ, ಶ್ರೀ ಮೂಕಾಂಬಿಕ ದೇವಸ್ಥಾನ, ಶ್ರೀ ರಾಮ ಯುವಕ ವೃಂದ ಗೋಳಿಜೋರ, ಎಳತ್ತೂರು ಫ್ರೆಂಡ್ಸ್ ಕ್ಲಬ್ ಮತ್ತು ಮಹಿಳಾ ಘಟಕ, ಯೂತ್ ಕಾಂಗ್ರೆಸ್ ಘಟಕ ಕಿನ್ನಿಗೋಳಿ, ನಾಗರಿಕ ಹಿತರಕ್ಷಣಾ ವೇದಿಕೆ ಶಾಂತಿನಗರ ಹಾಗೂ ಕೆ.ಎಂ.ಸಿ. ಆಸ್ಪತ್ರೆ ಮಂಗಳೂರು ಇವರ ಜಂಟೀ ಆಶ್ರಯದಲ್ಲಿ ಬೃಹತ್ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಭಾನುವಾರ ಗುತ್ತಕಾಡು ದ.ಕ. ಜಿಲ್ಲಾ ಪಂಚಾಯಿತಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು. ಎ.ಪಿ.ಎಂ.ಸಿ. ಸದಸ್ಯ ಪ್ರಮೋದ್ ಕುಮಾರ್ ರಕ್ತದಾನ ನೀಡುವ ಮೂಲಕ ಶಿಬಿರ ಉದ್ಘಾಟಿಸಿದರು. ಈ ಸಂದರ್ಭ ಡಾ| ಕಾರ್ತಿಕ್, ಧರ್ಮದರ್ಶಿ ವಿವೇಕಾನಂದ, ಚಂದ್ರಶೇಖರ, ಬಾಲಕೃಷ್ಣ ಡಿ ಸಾಲ್ಯಾನ್, ಶ್ರೀಪತಿ ಗೋಳಿಜೋರ, ಪವನ್ ಕುಮಾರ್, ಮಹಮ್ಮದ್ ಅರೀಫ್, ನೂರುದ್ದೀನ್, ದಿವಾಕರ ಕರ್ಕೇರ, ಅಬೂಬಕ್ಕರ್, ತಾಹಿರ್ ನಕಾಶ್ ಮತ್ತಿತರರು ಉಪಸ್ಥಿತರಿದ್ದರು.

Kinnigoli-24111301

 

Comments

comments

Comments are closed.

Read previous post:
Kinnigoli 23111312
ಕಟೀಲು: ದೀಪೋತ್ಸವ

ಕಟೀಲು: ಶ್ರೀ ದುರ್ಗಾ ಪರಮೇಶ್ವರೀ ದೇವಳದಲ್ಲಿ ದೀಪೋತ್ಸವವು ಶುಕ್ರವಾರ ನಡೆಯಿತು.

Close