ನ. 29- ಡಿ.1; ಕಿನ್ನಿಗೋಳಿ – ರಾಜ್ಯಮಟ್ಟ ಪವರ್ ಲಿಫ್ಟಿಂಗ್ ಸ್ಪರ್ಧೆ

ಕಿನ್ನಿಗೋಳಿ : 35 ನೇ ವರ್ಷದ ಕರ್ನಾಟಕ ರಾಜ್ಯ ಮಟ್ಟದ ಜ್ಯೂನಿಯರ್, ಸಬ್ ಜ್ಯೂನಿಯರ್ ಹಾಗೂ ಮಾಸ್ಟರ‍್ಸ್ ಪವರ್ ಲಿಫ್ಟಿಂಗ್‌ನ ಸ್ಪರ್ಧೆ ನವೆಂಬರ್ 29,30 ಹಾಗೂ ಡಿಸೆಂಬರ್ 1ರಂದು ಮೂರು ದಿನಗಳ ಕಾಲ ಕಿನ್ನಿಗೋಳಿಯ ಯುಗಪುರುಷ ಸಭಾಭವನದಲ್ಲಿ ನಡೆಯಲಿದೆ ಎಂದು ಕರ್ನಾಟಕ ರಾಜ್ಯ ಪವರ್ ಲಿಫ್ಟಿಂಗ್ ಅಸೋಸಿಯೇಶನ್ ಕಾರ್ಯದರ್ಶಿ ಸತೀಶ್ ಕುಮಾರ್ ಕುದ್ರೋಳಿ ಹೇಳಿದರು.
ಕಿನ್ನಿಗೋಳಿಯ ಯುಗಪುರುಷದ ಸಭಾಭವನದಲ್ಲಿ ಭಾನುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಕರ್ನಾಟಕ ಪವರ್ ಲಿಫ್ಟಿಂಗ್ ಅಸೋಸಿಯೇಶನ್‌ನ ಮಂಗಳೂರು ಶಾಖೆಯ ಸಹಯೋಗದಲ್ಲಿ ನಡೆಯುವ ಸ್ಪರ್ಧಾ ಕೂಟದಲ್ಲಿ ರಾಜ್ಯದ ಶ್ರೇಷ್ಠ ಮತ್ತು ರಾಷ್ಟ್ರೀಯ ಅಂತರಾಷ್ಟ್ರೀಯ ಪದಕ ವಿಜೇತರು ಭಾಗವಹಿಸಲಿದ್ದು ಮುಂದಿನ ವರ್ಷದ ಜನವರಿ ತಿಂಗಳ 4 ರಿಂದ 9 ರವರೆಗೆ ಹಿಮಾಚಲ ಪ್ರದೇಶದಲ್ಲಿ ಜರಗಲಿರುವ ರಾಷ್ಟ್ರೀಯ ಸ್ಪರ್ಧೆಗೆ ಕರ್ನಾಟಕ ತಂಡವನ್ನು ಆಯ್ಕೆ ಮಾಡಲಾಗುತ್ತದೆ. ರಾಜ್ಯದಾದ್ಯಂತ ಸುಮಾರು 30 ರಿಂದ 40 ಸಂಸ್ಥೆಗಳ ೧೮೦ ಕ್ಕೂ ಹೆಚ್ಚು ಸ್ಪರ್ಧಾಳುಗಳು ಭಾಗವಹಿಸಲಿದ್ದು, ರಾಜ್ಯದ ಪ್ರಬಲ ತಂಡಗಳಾದ ಮಂಗಳೂರಿನ ಬಾಲಾಂಜನೇಯ ಜಿಮ್ನಾಶಿಯಂ, ದಾವಣಗೆರೆಯ ಬೀರೇಶ್ವರ ವ್ಯಾಯಾಮ ಶಾಲೆ ಮತ್ತು ಮುನ್ಸಿಪಲ್ ಸ್ಪೋರ್ಟ್ಸ್ ಕ್ಲಬ್, ಉಜಿರೆಯ ಎಸ್.ಡಿ.ಎಂ ರಿಕ್ರಿಯೇಶನ್ ಕ್ಲಬ್,ಹಾಗೂ ಆಳ್ವಾಸ್ ಜಿಮ್ನಾಶಿಯಂ ತಂಡಗಳ ನಡುವೆ ತೀವ್ರ ಪೈಪೋಟಿ ನಡೆಯಲಿದೆ ಎಂದು ತಿಳಿಸಿದರು.
ನ.29ರಂದು ಯುವಜನ ಸೇವಾ ಹಾಗೂ ಮೀನುಗಾರಿಕಾ ಸಚಿವರಾದ ಕೆ.ಅಭಯಚಂದ್ರ ಜೈನ್ ಉದ್ಘಾಟಿಸಿ ಮಂಗಳೂರಿನ ಉದ್ಯಮಿ ಸದಾನಂದ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ ಸಮಾರಂಭದಲ್ಲಿ ಅಂತರಾಷ್ಟ್ರೀಯ ಪವರ್ ಲಿಫ್ಟರ್‌ಗಳಾದ ವಿಜಯ ಕಾಂಚನ್ ಹಾಗೂ ಅಕ್ಷತಾ ಪೂಜಾರಿಯವರನ್ನು ಸಂಸದ ನಳಿನ್‌ಕುಮಾರ್ ಕಟೀಲು ಸನ್ಮಾನಿಸಲಿದ್ದಾರೆ. ಡಿ.1ರಂದು ನಡೆಯುವ ಸಮಾರೋಪ ಸಮಾರಂಭ ಮೆನ್ನಬೆಟ್ಟು ಗ್ರಾ.ಪಂ. ಅಧ್ಯಕ್ಷ ಜನಾರ್ದನ ಕಿಲೆಂಜೂರು ಅಧ್ಯಕ್ಷತೆಯಲ್ಲಿ ನಡೆಯಲಿದೆ ಎಂದು ಕ್ರೀಡಾ ಸ್ಪರ್ಧೆ ಸಂಯೋಜಕ ಕಿನ್ನಿಗೋಳಿ ರಾಜರತ್ನಪುರದ ಶ್ರೀ ವೀರಮಾರುತಿ ವ್ಯಾಯಾಮ ಶಾಲೆಯ ಅಧ್ಯಕ್ಷ ಈಶ್ವರ ಕಟೀಲು ತಿಳಿಸಿದರು.
ಶ್ರೀ ವೀರಮಾರುತಿ ವ್ಯಾಯಾಮ ಶಾಲೆಯ ಗೌರವಾಧ್ಯಕ್ಷ ಕೊಡೆತ್ತೂರು ಭುವನಾಭಿರಾಮ ಉಡುಪ, ದಕ್ಷಿಣ ಕನ್ನಡ ಪವರ್ ಲಿಫ್ಟಿಂಗ್ ಅಸೋಸಿಯೇಶನ್ ಗೌರವ ಕಾರ್ಯದರ್ಶಿ ಎಂ. ಮಧುಚಂದ್ರ, ರಾಷ್ಟ್ರೀಯ ತೀರ್ಪುಗಾರ ಬಿ.ಎಂ.ಜಗದೀಶ್, ಅಂತರಾಷ್ಟ್ರೀಯ ಪವರ್ ಲಿಫ್ಟರ್‌ಗಳಾದ ವಿಜಯ ಕಾಂಚನ್, ಅಕ್ಷತಾ ಪೂಜಾರಿ, ವಿನೋದ್‌ರಾಜ್, ವಿನ್ಸೆಂಟ್ ಪ್ರಕಾಶ್ ಕಾರ್ಲೊ, ಯು.ಲಕ್ಷ್ಮಣ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.

Kinnigoli 25111304

Comments

comments

Comments are closed.

Read previous post:
Kinnigoli 25111303
ಫೆ. 18 ಏಳಿಂಜೆ ದೇವಳ ದಲ್ಲಿ – ಲಕ್ಷಮೋದಕ ಹವನ

 ಕಿನ್ನಿಗೋಳಿ : ಕಿನ್ನಿಗೋಳಿ ಸಮೀಪದ ಏಳಿಂಜೆ ಲಕ್ಷ್ಮೀಜನಾರ್ದನ ಮಹಾಗಣಪತಿ ದೇವಳದಲ್ಲಿ ಫೆಬ್ರವರಿ 18 ಅಂಗಾರಿಕಾ ಸಂಕಷ್ಠಿಯ ದಿನ ದೇವರಿಗೆ ಅತೀ ವಿಶೇಷತೆಯ ೧೦೦೮ ಕಾಯಿ ಗಣಹೋಮ, ಲಕ್ಷಮೋದಕ ಹವನ...

Close