ತೋಕೂರು : ಪೈಪ್‌ಲೈನ್ ಹೋರಾಟಕ್ಕೆ ನಿರ್ಧಾರ

ಕಿನ್ನಿಗೋಳಿ : ಮಂಗಳೂರಿನ ಬೈಕಂಪಾಡಿ ತೋಕೂರಿನಿಂದ ಉಡುಪಿ ಜಿಲ್ಲೆಯ ಶಿರ್ವದ ಪಾದೂರಿನವರೆಗೆ ನಿರ್ಮಿಸಲು ಉದ್ದೇಶಿಸಿರುವ ಕಚ್ಚಾ ಪೆಟ್ರೋಲ್‌ನ ಪೈಪ್‌ಲೈನ್‌ಗೆ ಹಳೆಯಂಗಡಿ ಬಳಿಯ ತೋಕೂರಿನಲ್ಲಿ ತೀವ್ರ ಆಕ್ಷೇಪ ವ್ಯಕ್ತಪಡಿಸಲಾಗಿದ್ದು ಗ್ರಾಮಸ್ಥರ ವಿಶೇಷ ಸಭೆಯಲ್ಲಿ ಪೈಪ್‌ಲೈನ್ ವಿರೋಧಿಸುವ ನಿರ್ಣಯವನ್ನು ಕೈಗೊಂಡು ಜನಪ್ರತಿನಿಧಿಗಳ ಸಹಿತ ಜಿಲ್ಲಾಡಳಿತಕ್ಕೆ ಮನವಿಯನ್ನು ಸಲ್ಲಿಸಿ ಹೋರಾಟದ ಬಗ್ಗೆ ಅಧಿಕೃತವಾಗಿ ಸೂಚನೆ ನೀಡುವುದೆಂದು ತೀರ್ಮಾನಿಸಲಾಯಿತು.
ಹಳೆಯಂಗಡಿ ಬಳಿಯ ತೋಕೂರು ಶ್ರೀ ಮಹಾಗಣಪತಿ ಸುಬ್ರಹ್ಮಣ್ಯ ದೇವಳದ ವಠಾರದಲ್ಲಿ ಭಾನುವಾರ ಸಭೆ ನಡೆಯಿತು.
ಫಲವತ್ತಾದ ಕೃಷಿ ಭೂಮಿಯನ್ನು ನಾಶಮಾಡುವ ಇಂತಹ ಯೋಜನೆಗಳಿಂದ ಗ್ರಾಮದಲ್ಲಿ ಅಶಾಂತಿ ವಾತಾವರಣ ನಿರ್ಮಾಣವಾಗುತ್ತದೆ, ಯೋಜನೆಯ ಬಗ್ಗೆ ಯಾವುದೇ ಸ್ಪಷ್ಟ ಮಾಹಿತಿ ನೀಡದೇ ಗ್ರಾಮ ಪಂಚಾಯಿತಿ ಹಾಗೂ ಜನರನ್ನು ಕತ್ತಲಲ್ಲಿಡುವ ಹುನ್ನಾರ ನಡೆಯುತ್ತಿದೆ ಎಂದು ಪಡುಪಣಂಬೂರು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ವಿನೋದ್ ಸಾಲ್ಯಾನ್ ಬೆಳ್ಳಾಯರು ಹೇಳಿದರು.
ಮೂಲ್ಕಿ ಮೂಡಬಿದ್ರಿ ಕ್ಷೇತ್ರದ ಶಾಸಕ, ಸಚಿವ ಕೆ.ಅಭಯಚಂದ್ರ ಜೈನ್, ಮಂಗಳೂರು ಸಂಸದ ನಳಿನ್‌ಕುಮಾರ್ ಕಟೀಲು, ದಕ್ಷಿಣ ಕನ್ನಡ ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ, ಗ್ರಾಮ ಪಂಚಾಯಿತಿ ಜನಪ್ರತಿನಿಧಿಗಳಿಗೆ ಸ್ಥಳೀಯ ಸದಸ್ಯರ ಮೂಲಕ ಮನವಿಯನ್ನು ಸಲ್ಲಿಸಿ ಅವರ ಪ್ರತಿಕ್ರಿಯೆಗೆ ನಂತರ ಕಾನೂನು ಹೋರಾಟ ಅಥವ ಗ್ರಾಮ ಗ್ರಾಮಗಳ ಮಟ್ಟದಲ್ಲಿ ಸಮಿತಿಯನ್ನು ರಚಿಸಿ ಹೋರಾಟದ ಬಗ್ಗೆ ಚಿಂತನೆ ನಡೆಯಿತು.
ಪಡುಪಣಂಬೂರು ಗ್ರಾಮ ಪಂಚಾಯಿತಿ ಸದಸ್ಯ ನಾರಾಯಣ ಸುವರ್ಣ, ಸ್ಥಳೀಯರಾದ ಗೋಪಾಲ ಮೂಲ್ಯ, ರಾಘವ ಹೆಬ್ಬಾರ್ ಮುಂಬಯಿ ಬಂಟರ ಸಂಘದ ಮಾಜಿ ಅಧ್ಯಕ್ಷ ಭುಜಂಗ ಶೆಟ್ಟಿ, ಅಭಿಪ್ರಾಯಗಳನ್ನು ನೀಡಿದರು.

Comments

comments

Comments are closed.

Read previous post:
Kinnigoli 25111304
ನ. 29- ಡಿ.1; ಕಿನ್ನಿಗೋಳಿ – ರಾಜ್ಯಮಟ್ಟ ಪವರ್ ಲಿಫ್ಟಿಂಗ್ ಸ್ಪರ್ಧೆ

ಕಿನ್ನಿಗೋಳಿ : 35 ನೇ ವರ್ಷದ ಕರ್ನಾಟಕ ರಾಜ್ಯ ಮಟ್ಟದ ಜ್ಯೂನಿಯರ್, ಸಬ್ ಜ್ಯೂನಿಯರ್ ಹಾಗೂ ಮಾಸ್ಟರ‍್ಸ್ ಪವರ್ ಲಿಫ್ಟಿಂಗ್‌ನ ಸ್ಪರ್ಧೆ ನವೆಂಬರ್ 29,30 ಹಾಗೂ ಡಿಸೆಂಬರ್ 1ರಂದು...

Close