ದಾಮಸ್‌ಕಟ್ಟೆ ಕಿರೆಂ ಚರ್ಚ್ ವಾರ್ಷಿಕ ಹಬ್ಬ

ಕಿನ್ನಿಗೋಳಿ: ದಾಮಸ್‌ಕಟ್ಟೆ ಕಿರೆಂ ಚರ್ಚ್‌ನಲ್ಲಿ ಬುಧವಾರ ನಡೆದ ವಾರ್ಷಿಕ ಹಬ್ಬದಲ್ಲಿ ಐಕಳಬಾವ, ತಾಳಿಪಾಡಿಗುತ್ತು, ಹಾಗೂ ಏಳಿಂಜೆ ಅಂಗಡಿಗುತ್ತುನವರಿಗೆ ಅಡಿಕೆ , ವೀಳ್ಯ ಹಾಗೂ ಬಾಳೆಗೊನೆ ಸಂಪ್ರದಾಯದಂತೆ ನೀಡಲಾಯಿತು.
ಹಿಂದೆ ಟಿಪ್ಪು ಸುಲ್ತಾನ್‌ನ ದಾಳಿಯ ಇತಿಹಾಸವುಳ್ಳ ಈ ಚರ್ಚ್‌ನ್ನು ಐಕಳಬಾವ, ತಾಳಿಪಾಡಿಗುತ್ತು, ಹಾಗೂ ಏಳಿಂಜೆ ಅಂಗಡಿಗುತ್ತುನವರು ರಕ್ಷಿಸಿದ್ದರು. ಆ ರಕ್ಷಣೆಯ ಸವಿನೆನಪಿಗಾಗಿ ಇಂದಿಗೂ ವಾರ್ಷಿಕ ಹಬ್ಬದಂದು ಆ ಗುತ್ತುಗಳಿಗೆ ಸಂಬಂಧಪಟ್ಟವರಿಗೆ ಬಾಳೆಗೊನೆ ನೀಡುವ ಮೂಲಕ ಗೌರವಿಸಲಾಗುತ್ತದೆ. ತಾಳಿಪಾಡಿಗುತ್ತುವಿನ ಸುಕುಮಾರ್ ಶೆಟ್ಟಿ, ವಿಶಾಲ್ ಶೆಟ್ಟಿ, ಐಕಳಬಾವದ ರಘುಚಂದ್ರ ಶೆಟ್ಟಿ, ಜಯಪಾಲ ಶೆಟ್ಟಿ, ಹಾಗೂ ಏಳಿಂಜೆ ಅಂಗಡಿಗುತ್ತು ಶಂಭು ಶೆಟ್ಟಿ, ಬಾಲಕೃಷ್ಣ ಶೆಟ್ಟಿ, ಪ್ರಸಾದ್ ಶೆಟ್ಟಿ ಗೌರವ ಸ್ವೀಕರಿಸಿದರು.
ದಾಮಸ್ಕಟ್ಟೆ ಕಿರೆಂ ಚರ್ಚ್ ಧರ್ಮಗುರು ಫಾ| ಪಾವ್ಲ್ ಪಿಂಟೊ, ಫಾ| ಜೆರೋಮ್ ಡಿಸೋಜಾ, ಪಾಲನಾ ಮಂಡಳಿ ಉಪಾಧ್ಯಕ್ಷ ರಾರ್ಬಟ್ ರೊಡ್ರಿಗಸ್, ಕಾರ್ಯದರ್ಶಿ ಮಾರ್ಸೆಲಿನ್ ಸಲ್ಡಾನ, ಸಂತಾನ್ ಡಿ’ಸೋಜಾ, ಬರ್ಟನ್ ಸಿಕ್ವೇರಾ ಮತ್ತಿತರರು ಉಪಸ್ಥಿತರಿದ್ದರು.

Kirem 27111301 Kirem 27111302

Kirem 27111311Kirem 27111303 Kirem 27111304 Kirem 27111305 Kirem 27111306 Kirem 27111307 Kirem 27111308

Comments

comments

Comments are closed.

Read previous post:
Kirem 27111309
ಕೊಡೆತ್ತೂರು ಸಂಕೇಶ ಬ್ರಹ್ಮಸ್ಥಾನ ಶಿಲಾನ್ಯಾಸ

ಕಿನ್ನಿಗೋಳಿ: ಕೊಡೆತ್ತೂರು ಸಂಕೇಶ ಉದ್ಬವ ಬ್ರಹ್ಮಸ್ಥಾನ ಜೀಣೋಧ್ಧಾರದ ಅಂಗವಾಗಿ ಶಿಲಾನ್ಯಾಸ ನಡೆಯಿತು. ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲ್ , ಕಟೀಲು ದೇವಳ ಅರ್ಚಕರಾದ ಲಕ್ಷ್ಮೀನಾರಾಯಣ ಆಸ್ರಣ್ಣ ,...

Close