ಡಿಸೆಂಬರ್ 1ರಂದು ಚಾಲಕ-ನಿರ್ವಾಹಕರಿಗೆ ಸನ್ಮಾನ

ಕಿನ್ನಿಗೋಳಿ: ಕಿನ್ನಿಗೋಳಿ ಬಸ್ಸು ಚಾಲಕ-ನಿರ್ವಾಹಕರ ಸಂಘದ ಉದ್ಘಾಟನಾ ಸಮಾರಂಭ ಡಿ.1 ರಂದು ರಾತ್ರಿ 8 ಗಂಟೆಗೆ ಕಿನ್ನಿಗೋಳಿಯ ಗಣೇಶೋತ್ಸವದ ವಸಂತ ಮಂಟಪದಲ್ಲಿ ನಡೆಯಲಿದೆ. ಈ ಸಂದರ್ಭ ಹಿರಿಯ ಚಾಲಕ ಹಾಗೂ ನಿರ್ವಾಹಕರನ್ನು ಸನ್ಮಾನಿಸಲಾಗುವುದು. ಸಚಿವ ಅಭಯಚಂದ್ರ ಜೈನ್ ಕಾರ್ಯಕ್ರಮ ಉದ್ಘಾಟಿಸಿ ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲು ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮುಲ್ಕಿ ಠಾಣೆಯ ನಿರೀಕ್ಷಕ ರಾಮಚಂದ್ರ ನಾಯಕ್, ಈಶ್ವರ ಕಟೀಲು, ಭುವನಾಭಿರಾಮ ಉಡುಪ ಮೊದಲಾದವರು ಭಾಗವಹಿಸಲಿದ್ದಾರೆ ಎಂದು ಕಿನ್ನಿಗೋಳಿ ಬಸ್ಸು ಮಾಲಕರ ಸಂಘದ ಅಧ್ಯಕ್ಷ ದುರ್ಗಾಪ್ರಸಾದ್ ಹೆಗ್ಡೆ ಪತ್ರಿಕ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Comments

comments

Comments are closed.

Read previous post:
ತೋಕೂರು : ಪೈಪ್‌ಲೈನ್ ಹೋರಾಟಕ್ಕೆ ನಿರ್ಧಾರ

ಕಿನ್ನಿಗೋಳಿ : ಮಂಗಳೂರಿನ ಬೈಕಂಪಾಡಿ ತೋಕೂರಿನಿಂದ ಉಡುಪಿ ಜಿಲ್ಲೆಯ ಶಿರ್ವದ ಪಾದೂರಿನವರೆಗೆ ನಿರ್ಮಿಸಲು ಉದ್ದೇಶಿಸಿರುವ ಕಚ್ಚಾ ಪೆಟ್ರೋಲ್‌ನ ಪೈಪ್‌ಲೈನ್‌ಗೆ ಹಳೆಯಂಗಡಿ ಬಳಿಯ ತೋಕೂರಿನಲ್ಲಿ ತೀವ್ರ ಆಕ್ಷೇಪ ವ್ಯಕ್ತಪಡಿಸಲಾಗಿದ್ದು ಗ್ರಾಮಸ್ಥರ...

Close