ನಿಧನ – ಸದಾನಂದ ಸುವರ್ಣ(54)

ಮೂಲ್ಕಿ: ಮೂಲ್ಕಿಯ ಸಮಾಜ ಸೇವಕ ಹಾಗೂ ಕೆ.ಎಸ್ ರಾವ್ ನಗೆದ ಕಾಂಗ್ರೇಸ್‌ನ ಪ್ರಮುಖ ನಾಯಕರಾಗಿರುವ ಸದಾನಂದ ಸುವರ್ಣ(54)ರವರು ಪಣಂಬೂರು ಎನ್‌ಎಂಪಿಟಿಯಲ್ಲಿ ನಡೆದ ಅವಘಡವೊಂದರಲ್ಲಿ ಸೋಮವಾರ ತಡ ರಾತ್ರಿ ಮೃತಪಟ್ಟರು.
ಅವರು ಮೂಲ್ಕಿಯ ಮಾನೀಷ್ ಕ್ರಿಕೇಟ್ ಸಂಸ್ಥೆಯ ಮಾಜಿ ಅಧ್ಯಕ್ಷ, ಕೆ.ಎಸ್.ರಾವ್.ನಗರದ ಸರ್ಕಾರಿ ಶಾಲೆಯ ಮೆಲುಸ್ತುವಾರಿ ಸಮಿತಿ ಅಧ್ಯಕ್ಷರಾಗಿ, ಕೆ.ಎಸ್.ರಾವ್.ನಗರದ ಸಾರ್ವಜನಿಕ ಹಿಂದೂ ರುದ್ರಭೂಮಿ ಸಮಿತಿಯ ಅಧ್ಯಕ್ಷರಾಗಿ ಅವರು ಕೆ.ಎಸ್.ರಾವ್.ನಗರದ ಲಿಂಗಪ್ಪಯ್ಯಕಾಡಿನ ಆದರ್ಶ ಯುವಕ ವೃಂದದ ಗಣೇಶೋತ್ಸವ ಸಮಿತಿ ಗೌರವಾಧ್ಯಕ್ಷರಾಗಿ. ಕಾಂಗ್ರೇಸ್ ಬೂತ್ ಮಟ್ಟದ ಅಧ್ಯಕ್ಷರಾಗಿ ರಾಜಕೀಯಲ್ಲಿಯೂ ಗುರುತಿಸಿಕೊಂಡಿದ್ದರು. ಮೃತರು ಪತ್ನಿ ಒಂದು ಹೆಣ್ಣು ಮತ್ತು ಇಬ್ಬರು ಗಂಡು ಮಕ್ಕಳನ್ನು ಅಗಲಿದ್ದಾರೆ.
ಮೃತರ ಶೋಕಾರ್ಥ ಮಂಗಳವಾರ ಸ್ಥಳೀಯ ಸರ್ಕಾರಿ ಶಾಲೆಗೆ ರಜೆ ಸಾರಲಾಗಿತ್ತು. ಹಾಗೂ ಮೂಲ್ಕಿ ನಗರ ಪಂಚಾಯಿತಿಯ ಸಾಮಾನ್ಯ ಸಭೆಯನ್ನು ಸಹ ಬುಧವಾರಕ್ಕೆ ಮುಂದೂಡಲಾಗಿದೆ. ಮಂಗಳವಾರ ಮೃತರ ಶರೀರವನ್ನು ಅವರ ಮಾತೃ ನಿವಾಸ ಪ್ರಕಾಶ ಭವನದಿಂದ ಕೆ.ಎಸ್.ರಾವ್.ನಗರದವರೆಗೆ ಮೂಲ್ಕಿ ಬಸ್ಸು ನಿಲ್ದಾಣ,ಕಾರ್ನಾಡು ಮಾರ್ಗವಾಗಿ ಸಾರ್ವಜನಿಕ ಮೆರವಣಿಗೆ ನಡೆಸಿ ಕೆ.ಎಸ್‌ರಾವ್ ನಗರದ ಸರ್ಕಾರಿ ಶಾಲೆಯಲ್ಲಿ ಅಂತಿಮ ದರ್ಶನಕ್ಕಾಗಿ ಇಟ್ಟು ರುದ್ರಭೂಮಿಯಲ್ಲಿ ಅಂತಿಮ ಕ್ರಿಯೆ ಮಾಡಲಾಯಿತು.
ಹೆಗಲು ಕೊಟ್ಟ ಜನಾರ್ದನ ಪೂಜಾರಿ: ಮಾಜಿ ಕೇಂದ್ರ ಸಚಿವ ಜನಾರ್ದನ ಪೂಜಾರಿ ಮೂಲ್ಕಿ ಮನೆಗೆ ಭೇಟಿ ನೀಡಿ ಮೃತರ ಕುಟುಂಬಿಕರಿಗೆ ಸಾಂತ್ವನ ಹೇಳಿದರು. ಅಂತಿಮ ಕ್ರಿಯಾ ಮೆರವಣಿಗೆ ಪಾರ್ಥಿವ ಶರೀರಕ್ಕೆ ಹೆಗಲುಕೊಟ್ಟು ಮಾನವೀಯತೆ ಮೆರೆದರು. ಕಾಂಗ್ರೇಸ್ ಬ್ಲಾಕ್ ಅಧ್ಯಕ್ಷ ಪಯ್ಯೋಟ್ಟು ಸದಾಶಿವ ಸಾಲ್ಯಾನ್, ಮೂಲ್ಕಿ ನಗರ ಪಂಚಾಯಿತಿ ಅಧ್ಯಕ್ಷ ಶಶಿಕಾಂತ ಶೆಟ್ಟಿ, ಉಪಾಧ್ಯಕ್ಷ ಯೋಗಿಶ್ ಕೊಟ್ಯಾನ್, ಸದಸ್ಯರಾದ ಪುತ್ತಬಾವ, ಬಿ.ಎಂ.ಆಸಿಫ್, ಸ್ಥಳೀಯ ಕಾಂಗ್ರೇಸ್ ಕಾರ್ಯಕರ್ತರಾದ ಗೋಪಿನಾಥ ಪಡಂಗ, ಭೀಮಾಶಂಕರ್, ಸಾಧು ಅಂಚನ್ ಮಟ್ಟು, ಮೂಲ್ಕಿ ಬಿಲ್ಲವ ಸಂಘದ ಅಧ್ಯಕ್ಷ ಯದೀಶ್ ಅಮಿನ್ ಕೊಕ್ಕರಕಲ್, ಉಪಾಧ್ಯಕ್ಷ ಹರಿಶ್ಚಂದ್ರ ಸಾಲ್ಯಾನ್, ಕೆ.ಎಸ್.ರಾವ್.ನಗರದ ಬಿಲ್ಲವ ಸಂಘದ ಗೌರವಾಧ್ಯಕ್ಷ ರಾಘವ ಸುವರ್ಣ, ಅಧ್ಯಕ್ಷ ಹರಿಪ್ರಸಾದ್, ಸ್ಥಳೀಯರಾದ ಜೀವನ್ ಪೂಜಾರಿ, ಮಂಜುನಾಥ ಆರ್.ಕೆ, ನೀಲಾಧರ ಪೂಜಾರಿ ಇನ್ನಿತರರು ಉಪಸ್ಥಿತರಿದ್ದರು.

Kinnigoli28111302 Kinnigoli28111303

Comments

comments

Comments are closed.

Read previous post:
ಡಿಸೆಂಬರ್ 1ರಂದು ಚಾಲಕ-ನಿರ್ವಾಹಕರಿಗೆ ಸನ್ಮಾನ

ಕಿನ್ನಿಗೋಳಿ: ಕಿನ್ನಿಗೋಳಿ ಬಸ್ಸು ಚಾಲಕ-ನಿರ್ವಾಹಕರ ಸಂಘದ ಉದ್ಘಾಟನಾ ಸಮಾರಂಭ ಡಿ.1 ರಂದು ರಾತ್ರಿ 8 ಗಂಟೆಗೆ ಕಿನ್ನಿಗೋಳಿಯ ಗಣೇಶೋತ್ಸವದ ವಸಂತ ಮಂಟಪದಲ್ಲಿ ನಡೆಯಲಿದೆ. ಈ ಸಂದರ್ಭ ಹಿರಿಯ ಚಾಲಕ...

Close