ಕ್ರೀಡೆಯಿಂದ ರಾಷ್ಟ್ರದ ಸಾಧಕರಾಗಲು ಸಾಧ್ಯ; ಉಡುಪ

ಕಟೀಲು: ಇಂದು ಗ್ರಾಮೀಣ ಪ್ರತಿಭೆಗಳೇ ರಾಷ್ಟ್ರಮಟ್ಟದ ಸಾಧಕ ಕ್ರೀಡಾಳುಗಳಾಗಿ ಬೆಳಗುತ್ತಿದ್ದು, ಗ್ರಾಮೀಣ ಶಿಕ್ಷಣ ಸಂಸ್ಥೆಗಳಲ್ಲಿ ಇಂತಹ ಭವಿಷ್ಯದ ಕ್ರೀಡಾಳುಗಳನ್ನು ಸ್ಪೂರ್ತಿ ನೀಡಿ ಪ್ರೋತ್ಸಾಹಿಸಬೇಕು ಎಂದು ಕಿನ್ನಿಗೋಳಿ ಯುಗಪುರುಷದ ಪ್ರಧಾನ ಸಂಪಾದಕ ಕೊಡೆತ್ತೂರು ಭುವಾಭಿರಾಮ ಉಡುಪ ಹೇಳಿದರು.

ಶುಕ್ರವಾರ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ಪದವಿ ಪೂರ್ವ ಕಾಲೇಜಿನ ವಾರ್ಷಿಕ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದರು. ಕಾಲೇಜಿನ ಪ್ರಾಂಶುಪಾಲ ಪ್ರೊ.ಜಯರಾಂ ಪೂಂಜಾ ಅಧ್ಯಕ್ಷತೆಯನ್ನು ವಹಿಸಿದ್ದರು. ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳದ ಅನುವಂಶಿಕ ಮೊಕ್ತೇಸರ ಕೆ. ವಾಸುದೇವ ಆಸ್ರಣ್ಣರು ಕ್ರೀಡಾ ಜ್ಯೋತಿ ಬೆಳಗಿಸಿದರು. ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಹಾಗೂ ದ.ಕ.ಜಿಲ್ಲಾ ಪಂಚಾಯಿತಿ ಸದಸ್ಯ ಈಶ್ವರ ಕಟೀಲು ಮಾತನಾಡಿ ಮನಸ್ಸಿನ ಮತ್ತು ಶಾರೀರಿಕ ಸಮತೋಲನಕ್ಕೆ ಕ್ರೀಡೆ ಮುಖ್ಯ. ಕ್ರೀಡೆಗಳಲ್ಲಿ ಪ್ರಶಸ್ತಿ ಗಳಿಸುವುದಕ್ಕಿಂತ, ಭಾಗವಹಿಸುವುದೇ ಶ್ರೇಷ್ಠ ಎಂದು ಹೇಳಿದರು.
ದೈಹಿಕ ಶಿಕ್ಷಕರಾದ ವಿಜಯಕುಮಾರ್ ಶೆಟ್ಟಿ, ಉಪನ್ಯಾಸಕರಾದ ಸುರೇಶ್ ಶೆಟ್ಟಿ ಹಾಜರಿದ್ದರು.

Kinnigoli29111301Kinnigoli29111302

 

 

Comments

comments

Comments are closed.

Read previous post:
Kinnigoli28111304
ಕಿನ್ನಿಗೋಳಿಯಲ್ಲಿ ಹೋಬಳಿ ಮಟ್ಟದ ಪ್ರತಿಭಾ ಕಾರಂಜಿ

ಕಿನ್ನಿಗೋಳಿ: ಮಕ್ಕಳ ಸುಪ್ತ ಪ್ರತಿಭೆಗಳು ಪ್ರತಿಭಾ ಕಾರಂಜಿಗಳಂತಹ ಕಾರ್ಯಕ್ರಮಗಳಲ್ಲಿ ಅನಾವರಣಗೊಳ್ಳುತ್ತವೆ ಇದನ್ನು ಪೋಷಕರು ಮತ್ತು ಶಿಕ್ಷಕರು ಗುರುತಿಸಿ ಪ್ರೋತ್ಸಾಹ ನೀಡಿದಾಗ ಯುವ ಪ್ರತಿಭೆಗಳು ರೂಪುಗೊಳ್ಳುತ್ತವೆ ಎಂದು ಮೆನ್ನಬೆಟ್ಟು ಗ್ರಾಮ...

Close