ಕಿನ್ನಿಗೋಳಿ: ರಾಜ್ಯಮಟ್ಟದ ಪವರ್ ಲಿಫ್ಟಿಂಗ್ ಸ್ಪರ್ಧೆ

ಕಿನ್ನಿಗೋಳಿ : ರಾಜ್ಯಮಟ್ಟದ ಕ್ರೀಡೆಗಳು ನಗರಕ್ಕೆ ಮೀಸಲಾಗಿರದೇ ಗ್ರಾಮೀಣ ಭಾಗದಲ್ಲಿಯೂ ಸಂಘಟನೆಗಳು ಪ್ರಾಯೋಜಿಸಬೇಕು, ದೇಶದಲ್ಲಿ ಕ್ರೀಡಾಳುಗಳ ಕೊರತೆಯಿಲ್ಲ ಪ್ರೊತ್ಸಾಹದ ಕೊರತೆ ಎದ್ದು ಕಾಣುತ್ತದೆ. ದೇಶದ ಕೀರ್ತಿ ಹೆಚ್ಚಿಸಲು ಕ್ರೀಡಾಳುಗಳು ತರಬೇತಿ ಪಡೆಯಬೇಕು ಎಂದು ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು.
ಕಿನ್ನಿಗೋಳಿಯ ಯುಗಪುರುಷ ಸಭಾಭವನದಲ್ಲಿ ಶುಕ್ರವಾರ ನಡೆದ 25ನೇ ವರ್ಷದ ಕರ್ನಾಟಕ ರಾಜ್ಯ ಮಟ್ಟದ ಜ್ಯೂನಿಯರ್, ಸಬ್ ಜ್ಯೂನಿಯರ್ ಹಾಗೂ ಮಾಸ್ಟರ‍್ಸ್ ಪವರ್ ಲಿಫ್ಟಿಂಗ್‌ನ ಸ್ಪರ್ಧೆಯ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
ಕರ್ನಾಟಕ ರಾಜ್ಯ ಪವರ್ ಲಿಫ್ಟಿಂಗ್ ಅಸೋಸಿಯೇಶನ್ ಕಾರ್ಯದರ್ಶಿ ಸತೀಶ್ ಕುಮಾರ್ ಕುದ್ರೋಳಿ ಪ್ರಾಸ್ತವಿಕವಾಗಿ ಮಾತನಾಡಿ ಕರ್ನಾಟಕ ರಾಜ್ಯದ ತಂಡವನ್ನು ಆಯ್ಕೆಗೊಳಿಸುವ ವೇದಿಕೆ ಇದಾಗಲಿದೆ ಮುಂದಿನ ವರ್ಷದ ಜನವರಿ ತಿಂಗಳ 4ರಿಂದ 9ರವರೆಗೆ ಹಿಮಾಚಲ ಪ್ರದೇಶದಲ್ಲಿ ಜರಗಲಿರುವ ರಾಷ್ಟ್ರೀಯ ಸ್ಪರ್ಧೆಗೆ ಕರ್ನಾಟಕ ತಂಡವನ್ನು ಆಯ್ಕೆ ಮಾಡುವಲ್ಲಿ ಈ ಸ್ಪರ್ಧಾ ಕೂಟ ಕ್ರೀಡಾಳುಗಳಿಗೆ ಮಹತ್ವದ್ದಾಗಿದೆ ಎಂದು ತಿಳಿಸಿದರು
ಮಂಗಳೂರು ಶ್ರೀ ದೇವಿ ಶಿಕ್ಷಣ ಸಂಸ್ಥೆ ಅಧ್ಯಕ್ಷ ಸದಾನಂದ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.
ಸಮಾರಂಭದಲ್ಲಿ ಅಂತರಾಷ್ಟ್ರೀಯ ಪವರ್ ಲಿಫ್ಟರ್‌ಗಳಾದ ವಿಜಯ ಕಾಂಚನ್, ಅಕ್ಷತಾ ಪೂಜಾರಿ ಹಾಗೂ ಕರಾಟೆ ಗ್ರಾಂಡ್ ಚಾಂಪಿಯನ್ ರಚನ್‌ಕುಮಾರ್ ಎಕ್ಕಾರು ಅವರನ್ನು ಸನ್ಮಾನಿಸಲಾಯಿತು. ದೇಹರ್ದಾಡ್ಯ ಸ್ಪರ್ಧೆಯಲ್ಲಿ ಸಾಧನೆಗೈದ ಅಭಿಲಾಷ್ ಶೆಟ್ಟಿ ಮತ್ತು ಹರೀಶ್ ಎಕ್ಕಾರು ಅವರನ್ನು ಅಭಿನಂದಿಸಲಾಯಿತು.
ಶ್ರೀ ವೀರಮಾರುತಿ ವ್ಯಾಯಾಮ ಶಾಲೆಯ ಗೌರವಾಧ್ಯಕ್ಷ ಕೊಡೆತ್ತೂರು ಭುವನಾಭಿರಾಮ ಉಡುಪ, ಪವರ್ ಲಿಪ್ಟಿಂಗ್ ಜಿಲ್ಲಾ ಸಮಿತಿಯ ಉಪಾಧ್ಯಕ್ಷ ಕೃಷ್ಣಮೂರ್ತಿ ರಾವ್ ಕಾವೂರು, ಮಂಗಳೂರು ನಗರಪಾಲಿಕೆ ಮಾಜಿ ಮೇಯರ್ ಪುರಂದರದಾಸ್ ಕೂಳೂರು,, ಕೊಡೆತ್ತೂರು ಅರಸು ಕುಂಜಿರಾಯ ದೈವಸ್ಥಾನದ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ, ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ದೇವಪ್ರಸಾದ್ ಪುನರೂರು ಉದ್ಯಮಿ ರವಿ ಪೂಜಾರಿ ಸೂರಿಂಜೆ ಉಪಸ್ಥಿತರಿದ್ದರು.
ಕಿನ್ನಿಗೋಳಿ ರಾಜರತ್ನಪುರದ ಶ್ರೀ ವೀರಮಾರುತಿ ವ್ಯಾಯಾಮ ಶಾಲೆಯ ಅಧ್ಯಕ್ಷ ಈಶ್ವರ ಕಟೀಲು ಸ್ವಾಗತಿಸಿದರು. ಅಭಿಲಾಷ್ ಶೆಟ್ಟಿ ವಂದಿಸಿದರು ನಿತೇಶ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Kinnigoli30111301

Comments

comments

Comments are closed.

Read previous post:
Kinnigoli29111309
ಚಾಲಕಿಯ ನಿಯಂತ್ರಣ ತಪ್ಪಿ ಹೊಂಡಕ್ಕೆ ಉರುಳಿದ ಕಾರು

ಕಿನ್ನಿಗೋಳಿ: ಎಸ್.ಕೋಡಿಯಿಂದ ಕಿನ್ನಿಗೋಳಿಗೆ ಹೋಗುತ್ತಿದ್ದ ಮಾರುತಿ ಆಲ್ಟೋ ಕಾರು ಹೊಸಕಾವೇರಿ ತಿರುವಿನ ಬಳಿ ಚಾಲಕಿಯ ನಿಯಂತ್ರಣ ತಪ್ಪಿ ರಸ್ತೆ ಬದಿಯ ಹೊಂಡಕ್ಕೆ ಉರುಳಿದ್ದು ಕಾರು ಚಲಾಯಿಸುತ್ತಿದ್ದ ಮಹಿಳೆ ಪವಾಡ...

Close