ಶಿಕ್ಷಣ ಟ್ಯೂಷನ್ ಮತ್ತು ಟೆನ್‌ಶನ್ ಆಗದಿರಲಿ

ಕಿನ್ನಿಗೋಳಿ: ಇಂದಿನ ನಗರದ ಶಿಕ್ಷಣ ಟ್ಯೂಷನ್ ಮತ್ತು ಟೆನ್‌ಶನ್ ಆದರೆ ಗ್ರಾಮಾಂತರ ಪ್ರದೇಶಗಳಲ್ಲಿ ಸಂಸ್ಕಾರಭರಿತ ನೈತಿಕ ಶಿಕ್ಷಣ ಸಿಗುತ್ತದೆ ಶಾಲ ಹಂತಗಳಲ್ಲಿಯೇ ಉತ್ತಮ ವ್ಯಕ್ತಿ ನಿರ್ಮಾಣದ ಕಾರ್ಯ ಆಗಬೇಕು. ಎಂದು ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು.
ಶನಿವಾರ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ಪದವಿ ಪೂರ್ವ ಕಾಲೇಜು ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಮಾತನಾಡಿದರು.
ಮಂಗಳೂರು ಶಾರದಾ ವಿದ್ಯಾ ಸಂಸ್ಥೆಗಳ ಅಧ್ಯಕ್ಷ ಪ್ರೋ| ಎಮ್.ಬಿ. ಪುರಾಣಿಕ್ ಮಾತನಾಡಿ ಪಾಶ್ಚಾತ್ಯ ಸಂಸ್ಕೃತಿಯಿಂದಾಗಿ ನಮ್ಮ ವ್ಯಕ್ತಿತ್ವ ಬದಲಾವಣೆಗಳಾಗದಿರಲಿ. ಭಾರತೀಯ ಸಂಸ್ಕಾರ ಸಂಸ್ಕ್ರತಿ, ಮೌಲ್ಯ ಹಾಗೂ ಗುಣಮಟ್ಟವನ್ನು ಶಿಕ್ಷಕರು ಹಾಗೂ ಪೋಷಕರು ವಿದ್ಯಾರ್ಥಿಗಳಲ್ಲಿ ಮೂಡಿಸಬೇಕು ಎಂದು ಹೇಳಿದರು.
ಕಟೀಲು ದೇವಳ ಅನುವಂಶಿಕ ಆಡಳಿತ ಮೊಕ್ತೇಸರ ವಾಸುದೇವ ಆಸ್ರಣ್ಣ ಆಶೀರ್ವಚನಗೈದರು.
ಶಾಲಾ ಶಿಕ್ಷಕ ರಕ್ಷಕ ಸಂಘ ಅಧ್ಯಕ್ಷ ಈಶ್ವರ್ ಕಟೀಲ್ ಅಧ್ಯಕ್ಷತೆ ವಹಿಸಿದ್ದರು. ಯುವಜನ ಸೇವಾ ಮತ್ತು ಮೀನುಗಾರಿಕೆ ಸಚಿವ ಕೆ ಅಭಯಚಂದ್ರ ಜೈನ್ ಹಾಗೂ ನಿವೃತ್ತ ಉಪಪ್ರಾಚಾರ್ಯ ಸಾಹಿತಿ ಉಮೇಶ್ ರಾವ್ ಎಕ್ಕಾರು ಅವರನ್ನು ಸನ್ಮಾನಿಸಲಾಯಿತು. ರಾಜ್ಯ ಮಟ್ಟದಲ್ಲಿ ಆಯ್ಕೆಯಾಗಿದ್ದ ಶಾಲಾ ಕ್ರೀಡಾಪಟುಗಳನ್ನು ಅಭಿನಂದಿಸಲಾಯಿತು.
ಮಂಗಳೂರು ಶಾರದಾ ವಿದ್ಯಾ ಸಂಸ್ಥೆಗಳ ಅಧ್ಯಕ್ಷ ಪ್ರೋ| ಎಮ್.ಬಿ. ಪುರಾಣಿಕ್, ವಿದ್ಯಾರ್ಥಿ ನಾಯಕಿ ಅನುಜ್ಞಾ ಭಟ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಟೀಲು ಪದವಿ ಪೂರ್ವ ಕಾಲೇಜು ಪ್ರಾಚಾರ್ಯ ಜಯರಾಮ ಪೂಂಜ ಸ್ವಾಗತಿಸಿದರು. ಉಪನ್ಯಾಸಕಿ ವಿಜಯಾ ಆಳ್ವ ವಂದಿಸಿದರು. ಉಪನ್ಯಾಸಕಿ ಭಾರತಿ ಶೆಟ್ಟಿ, ವಿದ್ಯಾರ್ಥಿನಿಯರಾದ ಕವಿತಾ ಹಾಗೂ ಅಶ್ವಿನಿ ಕಾರ್ಯಕ್ರಮ ನಿರೂಪಿಸಿದರು.

Kinnigoli01121302

Comments

comments

Comments are closed.

Read previous post:
Kinnigoli01121301
ಹಿರಿಯರ ಮತ್ತು ಶಿಕ್ಷಕರ ಮಾರ್ಗದರ್ಶನ ಅತ್ಯಗತ್ಯ

ಕಿನ್ನಿಗೋಳಿ: ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಫ್ರೌಡಿಮೆ ಬೆಳೆಯಲು ಹಿರಿಯರ ಮತ್ತು ಶಿಕ್ಷಕರ ಮಾರ್ಗದರ್ಶನ ಅತ್ಯಗತ್ಯ.ಎಳೆಯ ವಯಸ್ಸಿನಲ್ಲಿ ಮಕ್ಕಳಿಗೆ ಶಿಷ್ಠಾಚಾರದ ಶಿಕ್ಷಣ ನೀಡಿದಾಗ ಭವಿಷ್ಯದಲ್ಲಿ ಉತ್ತಮ ನಾಗರಿಕರಾಗಬಲ್ಲರು. ಎಂದು ಕಟೀಲು...

Close