ಹಿರಿಯರ ನಾಗರಿಕ ಗುರುತು ಚೀಟಿ ಮಾಡಬೇಕು : ಕೆ. ರಮೇಶ್

ಕಿನ್ನಿಗೋಳಿ: ಕೇಂದ್ರ ಹಾಗೂ ರಾಜ್ಯ ಸರಕಾರದಿಂದ ಹಿರಿಯ ನಾಗರಿಕರಿಗೆ ವಿವಿಧ ಸವಲತ್ತುಗಳು ದೊರಕುತ್ತದೆ. ಆದ್ದರಿಂದ ಹಿರಿಯ ನಾಗರಿಕರ ಗುರುತು ಚೀಟಿ ಅಗತ್ಯ. ಮಾಡಬೇಕು ಎಂದು ಮಂಗಳೂರು ಹಿರಿಯ ನಾಗರಿಕರ ಸಂಘದ ಕಾರ್ಯದರ್ಶಿ ಕೆ ರಮೇಶ್ ಹೇಳಿದರು.
ಕಿನ್ನಿಗೋಳಿ ರೋಟರಿ ಕ್ಲಬ್, ರೋಟರ‍್ಯಾಕ್ಟ್, ಇನ್ನರ್ ವೀಲ್ ಕ್ಲಬ್, ಕಥೋಲಿಕ್ ಸಭಾ ಕಿನ್ನಿಗೋಳಿ ಘಟಕ, ಸೌತ್ ಕೆನರಾ ಫೋಟೋಗ್ರಾಫರ‍್ಸ್ ಅಸೋಸಿಯೇಶನ್ ಮುಲ್ಕಿ ವಲಯ, ಸ್ತ್ರೀ ಸಂಘಟನೆ ಕಿನ್ನಿಗೋಳಿ, ಐ. ಸಿ. ವೈ. ಎಂ. ಕಿನ್ನಿಗೋಳಿ ಹಾಗೂ ಮಂಗಳೂರು ಹಿರಿಯ ನಾಗರಿಕ ಸಂಘದ ಆಶ್ರಯದಲ್ಲಿ ಕಿನ್ನಿಗೋಳಿ ಕನ್ಸೆಟ್ಟಾ ಆಸ್ಪತ್ರೆಯ ಸಭಾಂಗಣದಲ್ಲಿ ಭಾನುವಾರ ನಡೆದ ಹಿರಿಯ ನಾಗರಿಕರಿಗೆ ಗುರುತು ಚೀಟಿ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕನ್ಸೆಟ್ಟಾ ಆಸ್ಪತ್ರೆ ದಾದಿಯರ ಮೇಲ್ಚಿಚಾರಕಿ ಯ ಸಿ| ಸೊಫಿಯಾ, ಕೆಥೋಲಿಕ್ ಸಭಾದ ಹೆರಿಕ್ ಪಾಯಸ್, ಸೌತ್ ಕೆನರಾ ಫೋಟೋಗ್ರಾಫರ‍್ಸ್ ಅಸೋಸಿಯೇಶನ್ ಮುಲ್ಕಿ ವಲಯ ಅಧ್ಯಕ್ಷ ನವೀನ್ ಕುಮಾರ್ ಕಟೀಲು, ಇನ್ನರ್‌ವೀಲ್ ಅಧ್ಯಕ್ಷೆ ಸಿಂಥಿಯಾ ಕುಟಿನ್ಹೊ, ರೋಟರಿಯ ಕೆ.ಬಿ.ಸುರೇಶ್ ಉಪಸ್ಥಿತರಿದ್ದರು.
ಮನೋಜ್ ಫೆರ್ನಾಂಡಿಸ್ ಕಾರ್ಯಕ್ರಮ ನಿರೂಪಿಸಿದರು.

Kinnigoli01121305 Kinnigoli01121306 Kinnigoli01121307 Kinnigoli01121308

Comments

comments

Comments are closed.

Read previous post:
Kinnigoli01121304
ಪಂಜಿನಡ್ಕ-ವರ್ಷಾವಧಿ ಭಜನಾ ಮಹೋತ್ಸವ

Puneethakrishna Sk ಮುಲ್ಕಿ; ಪಂಜಿನಡ್ಕ ವಿಠೋಭ ರುಕುಮಾಯಿ ಭಜನಾ ಮಂದಿರ ಇದರ ವರ್ಷಾವಧಿ ಭಜನಾ ಮಹೋತ್ಸವ ಹಾಗೂ ಭಜನಾ ಮಂಗಲೋತ್ಸವ ಶನಿವಾರ ರಾತ್ರಿ ನಡೆಯಿತು. ಈ ಸಂದರ್ಭ...

Close