ಕಿನ್ನಿಗೋಳಿಯಲ್ಲಿ ಅಜ್ ಅಮಿ ಕೊಂಕ್ಣಿ ಉಲವ್ಯಾಂ ಕಾರ್ಯಗಾರ

ಆಧುನಿಕತೆಯ ತಂತ್ರಜ್ಞಾನದ ಧಾವಂತದಲ್ಲಿ ಕೊಂಕಣಿ ಭಾಷೆ, ಸಾಹಿತ್ಯ, ಜಾನಪದ, ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಕಾರ್ಯ ಇಂತಹ ಕಾರ್ಯಾಗಾರಗಳು ಮೂಂದೆಯೂ ನಡೆಯುವಂತಾಗಬೇಕು ಎಂದು ಕಿನ್ನಿಗೋಳಿ ಚರ್ಚ್ ಧರ್ಮಗುರು ಫಾ| ಅಲ್ಫ್ರೆಡ್ ಜೆ. ಪಿಂಟೋ ಹೇಳಿದರು.
ದಾಯ್ಚಿ ದುಬಾಯಿ ಇಂಡಿಯಾ ಮಂಗಳೂರು ಘಟಕ ಹಾಗೂ ಸ್ಥಳೀಯ ಕೆಲವು ಕೊಂಕಣಿ ಸಂಘಟನೆಗಳ ಸಹಯೋಗದಲ್ಲಿ ಭಾನುವಾರ ಕಿನ್ನಿಗೋಳಿ ಮೂರುಕಾವೇರಿ ಸಮೀಪದ ಕೊಲದಲ್ಲಿ ಶಾಲಾ ವಿದ್ಯಾರ್ಥಿಗಳ ಒಂದು ದಿನದ “ಅಜ್ ಅಮಿ ಕೊಂಕ್ಣಿ ಉಲವ್ಯಾಂ” ಕೊಂಕಣಿ ಕಾರ್ಯಗಾರ ಅಕ್ಕಿ ಮುಡಿಗೆ ಅಕ್ಕಿ ಹಾಕುವ ಮೂಲಕ ವಿಶಿಷ್ಟ ರೀತಿಯಲ್ಲಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮಂಗಳೂರು ದಾಯ್ಜಿ ವೀಕ್ಲಿಯ ಸಂಪಾದಕ ಹೇಮಾಚಾರ್ಯ ಮಾತನಾಡಿ ಕೊಂಕಣಿ ವಿದ್ಯಾರ್ಥಿಗಳಿಗೆ ಗ್ರಾಮೀಣ ಜೀವನ, ಕೃಷಿ, ತೋಟಗಾರಿಕೆ, ಗುಡ್ಡ ಕಾಡು ಪರಿಸರದ ಪರಿಚಯಿಸುವ ಮೂಲಕ ಪ್ರಕೃತಿಯ ವೈವಿದ್ಯಮಯ ಸೊಗಡು ಹಾಗು ಆಡು ಮಾತೃ ಬಾಷೆ ಕೊಂಕಣಿಯಲ್ಲಿ ಬಳಸಲ್ಪಡುವ ವಿವಿಧ ವಸ್ತುಗಳ ಶಬ್ದ ಭಂಡಾರವನ್ನು ವೃದ್ಧಿಗೊಳಿಸುವ ವಿನೂತನ ಪ್ರಯೋಗದ ಮೂಲಕ ಮಕ್ಕಳಲ್ಲಿ ಕೊಂಕಣಿ ಸಂಸ್ಕ್ರತಿ, ಭಾಷಾಭಿಮಾನ ಭಾವನೆಗಳನ್ನು ಬಿತ್ತಬಹುದು ಎಂದರು.
ಕಾರ್ಯಾಗಾರದಲ್ಲಿ ಮಂಗಳೂರು ನಗರ ಪ್ರದೇಶದ ೩೦ ಹಾಗೂ ಕಿನ್ನಿಗೋಳಿ ಪರಿಸರದ 30 ಹೀಗೆ ಒಟ್ಟು 80 ಮಂದಿ ವಿದ್ಯಾರ್ಥಿಗಳು ಭಾಗವಹಿಸಿದ್ದರು. ವಿದ್ಯಾರ್ಥಿಗಳಿಗೆ ನಾಲ್ಕು ತಂಡ ರಚಿಸಿ ಮಾಹಿತಿ ನೀಡಲಾಯಿತು.
ಮಾಜಿ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಶಾಲೆಟ್ ಪಿಂಟೋ, ಕಾರ್ಮಿನ್ ರೋಡ್ರಿಗಸ್, ನಿವೃತ್ತ ಶಿಕ್ಕಕಿ ಸ್ಟೆಲ್ಲಾ ಪಿಂಟೋ, ಮೆಲ್ವಿನ್ ರೊಡ್ರಿಗಸ್, ಮತ್ತಿತರರು ಉಪಸ್ಥಿತರಿದ್ದರು. ವಾಲ್ಟರ್ ದಾಂತಿಸ್ ಹಾಗೂ ವಿಕ್ಟರ್ ಮಥಾಯಸ್ ಕಾರ್ಯಕ್ರಮ ನಿರೂಪಿಸಿದರು.

Kinnigoli01121310 Kinnigoli01121311 Kinnigoli01121312 Kinnigoli01121313

Comments

comments

Comments are closed.

Read previous post:
Kinnigoli01121308
ಹಿರಿಯರ ನಾಗರಿಕ ಗುರುತು ಚೀಟಿ ಮಾಡಬೇಕು : ಕೆ. ರಮೇಶ್

ಕಿನ್ನಿಗೋಳಿ: ಕೇಂದ್ರ ಹಾಗೂ ರಾಜ್ಯ ಸರಕಾರದಿಂದ ಹಿರಿಯ ನಾಗರಿಕರಿಗೆ ವಿವಿಧ ಸವಲತ್ತುಗಳು ದೊರಕುತ್ತದೆ. ಆದ್ದರಿಂದ ಹಿರಿಯ ನಾಗರಿಕರ ಗುರುತು ಚೀಟಿ ಅಗತ್ಯ. ಮಾಡಬೇಕು ಎಂದು ಮಂಗಳೂರು ಹಿರಿಯ ನಾಗರಿಕರ...

Close