ನಳಿನ್ ಕುಮಾರ್ ಕಟೀಲು ಧನ ಸಹಾಯ

ಕಿನ್ನಿಗೋಳಿ:  ಕೆಲವು ದಿನಗಳ ಹಿಂದೆ ಕಿನ್ನಿಗೋಳಿ ಸಮೀಪದ ಏಳಿಂಜೆ ಶುಂಠಿಪಾಡಿ ಎಂಬಲ್ಲಿನ ಹರೀಶ್ ಪೂಜಾರಿ ಅವರ ಮನೆಗೆ ಆಕಸ್ಮಿಕ ಬೆಂಕಿ ಬಿದ್ದು ತೆಂಗಿನ ಕಾಯಿ ಹಾಗೂ ಅಡಿಕೆ ದಾಸ್ತಾನು ಇರಿಸಿದ್ದ ಕೊಠಡಿ ಬೆಂಕಿಗೆ ಆಹುತಿಯಾಗಿ ಸುಮಾರು ಒಂದು ಲಕ್ಷ ರೂಪಾಯಿ ಅಂದಾಜಿನಷ್ಟು ನಷ್ಟ ಸಂಭವಿಸಿದೆ. ಶನಿವಾರ ಸಂತ್ರಸ್ಥರ ಮನೆಗೆ ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲು ಭೇಟಿ ನೀಡಿ ವೈಯಕ್ತಿಕ ಧನ ಸಹಾಯ ಹಸ್ತ ನೀಡಿದರು. ಅಲ್ಲದೆ ಸಂಬಂಧ ಪಟ್ಟ ಅಧಿಕಾರಿಗಳೊಂದಿಗೆ ಮಾತನಾಡಿ ಸೂಕ್ತ ಪರಿಹಾರ ಒದಗಿಸಿ ಕೊಡುವ ಭರವಸೆ ನೀಡಿದರು.
ಈ ಸಂಧರ್ಭ ಜಿಲ್ಲಾ ಪಂಚಾಯಿತಿ ಸದಸ್ಯ ಈಶ್ವರ್ ಕಟೀಲು, ಐಕಳ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪದ್ಮಿನಿ ವಸಂತ್, ಉಪಾಧ್ಯಕ್ಷ ದಿವಾಕರ ಚೌಟ, ಮನ್ನಬೆಟ್ಟು ಗ್ರಾಮ ಪಂಚಾಯಿತಿ ಅಧ್ಯಕ್ಷ ಜನಾರ್ಧನ ಕಿಲೆಂಜೂರು, ಭುವನಾಭಿರಾಮ ಉಡುಪ, ಸುರೇಶ್ ಎಂ. ಕೋಟ್ಯಾನ್, ರಘುರಾಮ, ಜಯಂತ್ ಸಾಲ್ಯಾನ್, ಭಾಸ್ಕರ ಪೂಜಾರಿ ಮತ್ತಿತರರು ಉಪಸ್ಥಿತರಿದ್ಧರು.

Kinnigoli02121306 Kinnigoli02121307 Kinnigoli02121308

Comments

comments

Comments are closed.

Read previous post:
Kinnigoli02121305
ಗುತ್ತಕಾಡಿನಲ್ಲಿ ಕೊರಗ ಸಮುದಾಯ ಭವನ

ಕಿನ್ನಿಗೋಳಿ : ಕೊರಗ ಸಮುದಾಯದ ಶೈಕ್ಷಣಿಕ, ಆರ್ಥಿಕ ಸಶಕ್ತತೆಗೆ ಒತ್ತು ನೀಡಿ ಸದೃಡರಾಗಿ ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂದು ಮಂಗಳೂರು ಐ.ಟಿ. ಡಿ.ಪಿ ಯೋಜನಾ ಸಮನ್ವ ಅಧಿಕಾರಿ ಸಾಬೀರ್...

Close