ಗುತ್ತಕಾಡಿನಲ್ಲಿ ಕೊರಗ ಸಮುದಾಯ ಭವನ

ಕಿನ್ನಿಗೋಳಿ : ಕೊರಗ ಸಮುದಾಯದ ಶೈಕ್ಷಣಿಕ, ಆರ್ಥಿಕ ಸಶಕ್ತತೆಗೆ ಒತ್ತು ನೀಡಿ ಸದೃಡರಾಗಿ ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂದು ಮಂಗಳೂರು ಐ.ಟಿ. ಡಿ.ಪಿ ಯೋಜನಾ ಸಮನ್ವ ಅಧಿಕಾರಿ ಸಾಬೀರ್ ಅಹಮ್ಮದ್ ಮುಲ್ಲಾ ಹೇಳಿದರು.

ಕಿನ್ನಿಗೋಳಿ ಕೊರಗ ಅಭಿವೃದ್ಧಿ ಸಂಘ ಹಾಗೂ ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟ ( ಕರ್ನಾಟಕ- ಕೇರಳ ) ಇದರ ಸಹಯೋಗದಲ್ಲಿ ಭಾನುವಾರ ಕಿನ್ನಿಗೋಳಿ ಸಮೀಪದ ಗುತ್ತಕಾಡಿನಲ್ಲಿ 24 ಲಕ್ಷರೂ ವೆಚ್ಚದಲ್ಲಿ ಗುತ್ತಕಾಡು ಕೊರಗ ಸಮುದಾಯ ಭವನ ಉದ್ಘಾಟನೆಯ ಸಮಾರಂಭದಲ್ಲಿ ಮಾತನಾಡಿದರು.
ಕಿನ್ನಿಗೋಳಿ ಗಾಮ ಪಂಚಾಯಿತಿ ಅಧ್ಯಕ್ಷೆ ಶ್ಯಾಮಲಾ ಪಿ. ಹೆಗ್ಡೆ ಕೊರಗ ಸಮುದಾಯ ಭವನ ಉದ್ಘಾಟಿಸಿದರು. ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟದ ಅಧ್ಯಕ್ಷೆ ಸುಮತಿ ಕಾಸರಗೋಡು ಅಧ್ಯಕ್ಷತೆ ವಹಿಸಿದ್ದರು.
ಜಿಲ್ಲಾ ಪಂಚಾಯಿತಿ ಸದಸ್ಯೆ ಆಶಾ ರತ್ನಾಕರ ಸುವರ್ಣ, ಕಿನ್ನಿಗೋಳಿ ಕೊರಗ ಅಭಿವೃದ್ಧಿ ಸಂಘದ ಅಧ್ಯಕ್ಷ ಶೇಖರ್ ಕೊರಗ, ಎ. ಪಿ. ಎಂ. ಸಿ ಸದಸ್ಯ ಪ್ರಮೋದ್ ಕುಮಾರ್, ಕಿನ್ನಿಗೋಳಿ ಗ್ರಾ. ಪಂ. ಸದಸ್ಯ ಟಿ. ಎಚ್. ಮಯ್ಯದ್ದಿ , ಕೊರಗ ಮಹಿಳಾ ವಿವಿದ್ಧೋದ್ಧಶ ಸಹಕಾರಿ ಸಂಘದ ನಿರ್ದೇಶಕಿ ಸುಶೀಲ ಕೆಮ್ಮಡೆ , ಪೆರ್ನಾಲು ಸಮಗ್ರ ಗ್ರಾಮೀಣ ಆಶ್ರಮದ ಶಶಿಕಲಾ , ಕೊರಗ ಅ. ಸಂಘ (ಕರ್ನಾಟಕ-ಕೇರಳ) ಒಕ್ಕೂಟದ ಕಾರ್ಯದರ್ಶಿ ಸಂಜೀವ ಮೂಡಬಿದಿರೆ ಮತ್ತಿತರರು ಉಪಸ್ಥಿತರಿದ್ದರು.
ಬಬಿತಾ ಸ್ವಾಗತಿಸಿದರು. ಪ್ರಕಾಶ್ ವಂದಿಸಿದರು. ರಮೇಶ್ ಗುಂಡಾವು ಕಾರ್ಯಕ್ರಮ ನಿರೂಪಿಸಿದರು.

Kinnigoli02121301 Kinnigoli02121302 Kinnigoli02121303 Kinnigoli02121304 Kinnigoli02121305

Comments

comments

Comments are closed.

Read previous post:
Kinnigoli01121313
ಕಿನ್ನಿಗೋಳಿಯಲ್ಲಿ ಅಜ್ ಅಮಿ ಕೊಂಕ್ಣಿ ಉಲವ್ಯಾಂ ಕಾರ್ಯಗಾರ

ಆಧುನಿಕತೆಯ ತಂತ್ರಜ್ಞಾನದ ಧಾವಂತದಲ್ಲಿ ಕೊಂಕಣಿ ಭಾಷೆ, ಸಾಹಿತ್ಯ, ಜಾನಪದ, ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಕಾರ್ಯ ಇಂತಹ ಕಾರ್ಯಾಗಾರಗಳು ಮೂಂದೆಯೂ ನಡೆಯುವಂತಾಗಬೇಕು ಎಂದು ಕಿನ್ನಿಗೋಳಿ ಚರ್ಚ್ ಧರ್ಮಗುರು ಫಾ|...

Close