ಕಿನ್ನಿಗೋಳಿಯಲ್ಲಿ ಮೋದಿ ಬೆಂಬಲಿಸಿ ಬೈಕ್ ಜಾಥಾ

ಕಿನ್ನಿಗೋಳಿ : ಮೂಲ್ಕಿ ವಲಯ ಮೋದಿ ಅಭಿಮಾನಿ ಬಳಗ ಹಾಗೂ ಮುಲ್ಕಿ ಭಾರತೀಯ ಜನತಾ ಪಾರ್ಟಿ ಜಂಟೀ ಆಶ್ರಯದಲ್ಲಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರನ್ನು ಬೆಂಬಲಿಸಿ ಬೈಕ್ ಜಾಥಾ ಭಾನುವಾರ ಸಂಜೆ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಳ ಮುಂಭಾಗದಿಂದ ಹೊರಟು ಕಿನ್ನಿಗೋಳಿ, ಹಳೆಯಂಗಡಿ ಮಾರ್ಗವಾಗಿ ಮುಲ್ಕಿವರೆಗೆ ನಡೆಯಿತು.
ಬೈಕ್ ರ‍್ಯಾಲಿಯ ನೇತೃತ್ವ ವಹಿಸಿದ ರಾಜ್ಯ ಬಿಜೆಪಿ ಯುವಮೋರ್ಛಾ ಕಾರ್ಯದರ್ಶಿ ತೇಜಸ್ವಿ ಸೂರ್ಯ ಕಿನ್ನಿಗೋಳಿಯಲ್ಲಿ ಮಾತನಾಡಿ ಭಾರತ ದೇಶದ ಭವಿಷ್ಯದ ಆಶಾಕಿರಣ ಬಿಜೆಪಿಯ ಪ್ರಧಾನಿ ಬೆಂಬಲಿತ ಅಭ್ಯರ್ಥಿ ನರೇಂದ್ರ ಮೋದಿ ಅವರ ಸಾರಥ್ಯ ಬಿಜೆಪಿ ಪಕ್ಷದ ಬಲವರ್ಧನೆಗೆ ಸಹಾಯಕವಾಗಲಿದ್ದು, ಕಾರ್ಯಕರ್ತರಲ್ಲಿ ಮತ್ತಷ್ಟು ಉತ್ಸಾಹ ಹಾಗೂ ಬಲ ತುಂಬಲಿದೆ. ಎಂದು ಹೇಳಿದರು.
ಈ ಸಂದರ್ಭ ಮುಲ್ಕಿ ಮೂಡಬಿದ್ರೆ ಬಿಜೆಪಿ. ಅಧ್ಯಕ್ಷ ಸುಚರಿತ ಶೆಟ್ಟಿ, ಪ್ರಧಾನ ಕಾರ್ಯದರ್ಶಿಗಳಾದ ನಾಗರಾಜ ಪೂಜಾರಿ, ದೇವಪ್ರಸಾದ್ ಪುನರೂರು, ಜಿಲ್ಲಾ ಉಪಧ್ಯಕ್ಷರಾದ ಉಮಾನಾಥ ಕೋಟ್ಯಾನ್, ಕಸ್ಥೂರಿ ಪಂಜ, ಭುವನಾಭಿರಾಮ ಉಡುಪ, ಜಿಲ್ಲಾ ಪಂಚಾಯಿತಿ ಸದಸ್ಯ ಈಶ್ವರ ಕಟೀಲು, ಸಂಘಟಕರಾದ ಸತೀಶ್ ಅಂಚನ್, ನವೀನ್ ರಾಜ್ ಬಪ್ಪನಾಡು ಶರತ್ ಕುಬೆವೂರು ಮತ್ತಿತರರು ಉಪಸ್ಥಿತರಿದ್ದರು.

Kinnigoli02121315 Kinnigoli02121314 Kinnigoli02121313

Comments

comments

Comments are closed.

Read previous post:
Kinnigoli02121312
ಕಮ್ಮಾಜೆ ಮೋರಾರ್ಜಿ ದೇಸಾಯಿ ವಸತಿ ಶಾಲೆ

ಕಿನ್ನಿಗೋಳಿ: ಮನೆಯ ವಾತಾವರಣವನ್ನು ಕಲ್ಪಿಸುವ ಹಾಗೂ ಸತತ ನೂರು ಶೇಕಡಾ ಫಲಿತಾಂಶ ದಾಖಲಿಸಿದ ಮೋರಾರ್ಜಿ ದೇಸಾಯಿ ವಸತಿ ಶಾಲೆ ಖಾಸಗಿ ಶಾಲೆಗಳಿಗೆ ಮಾದರಿಯಾಗಿದೆ. ರಾಜ್ಯದ ಬೇರೆ ಬೇರೆ ಭಾಗಗಳ...

Close