ಕಿನ್ನಿಗೋಳಿ ಬಸ್ಸು – ಸಂಘ ಉದ್ಘಾಟನೆ

ಕಿನ್ನಿಗೋಳಿ: ಬಸ್ಸು ಚಾಲಕ-ನಿರ್ವಾಹಕರು ರಸ್ತೆ ನಿಯಮ ಪಾಲನೆ ಹಾಗೂ ಪ್ರಯಾಣಿಕರ ಬಗ್ಗೆ ನಿಗಾ ವಹಿಸಿ ಶಿಸ್ತು ಸಂಯಮದ ಉತ್ತಮ ಸೇವೆ ನೀಡಿದಾಗ ಸಮಾಜ ಅವರನ್ನು ಗೌರವದಿಂದ ಕಾಣುತ್ತದೆ. ಎಂದು ಎ.ಪಿ.ಎಂ.ಸಿ. ಸದಸ್ಯ ಪ್ರಮೋದ್ ಕುಮಾರ್ ಹೇಳಿದರು.
ಕಿನ್ನಿಗೋಳಿ ಸಾರ್ವಜನಿಕ ಶ್ರೀ ಗಣೇಶೋತ್ಸವದ ವಸಂತ ಮಂಟಪದಲ್ಲಿ ಭಾನುವಾರ ನಡೆದ ಕಿನ್ನಿಗೋಳಿ ಬಸ್ಸು ಚಾಲಕ-ನಿರ್ವಾಹಕರ ಸಂಘದ ಉದ್ಘಾಟನಾ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಹಿರಿಯ ಬಸ್ಸು ಚಾಲಕ-ನಿರ್ವಾಹಕರಾದ ನಾರಾಯಣ, ಅಲ್ತಾಫ್, ಶಂಕರ ಹಾಗೂ ನವೀನ್ ಅವರನ್ನು ಸನ್ಮಾನಿಸಲಾಯಿತು. ಈ ಸಂಧರ್ಭ ಪ್ರಖ್ಯಾತ ಆಂಧ ಕಲಾವಿದ ಬಸವರಾಜ್ ಅವರನ್ನು ಸನ್ಮಾನಿಸಲಾಯಿತು. ಇತ್ತಿಚೆಗೆ ನಿಧನರಾದ ಚಾಲಕ ಗಣೇಶ್ ಅವರ ಮನೆಯರಿಗೆ ಧನ ಸಹಾಯ ನೀಡಲಾಯಿತು.
ಕಿನ್ನಿಗೋಳಿ ಬಸ್ಸು ಚಾಲಕ-ನಿರ್ವಾಹಕರ ಸಂಘ ಗೌರವಾಧ್ಯಕ್ಷ ಭುವನಾಭಿರಾಮ ಉಡುಪ, ಉಪಾಧ್ಯಕ್ಷ ಗುಲಾಂ ಹುಸೇನ್, ಶಶಿ ಅಮೀನ್, ಜಿಲ್ಲಾ ಪಂಚಾಯಿತಿ ಸದಸ್ಯ ಈಶ್ವರ್ ಕಟೀಲ್, ನ್ಯಾಯವಾದಿ ಶಶಿಧರ ಅಡ್ಕತ್ತಾಯ, ಬಸ್ಸು ಮಾಲಕರ ಸಂಘದ ಅಧ್ಯಕ್ಷ ದುರ್ಗಾಪ್ರಸಾದ್ ಹೆಗ್ಡೆ, ಕಾರ್ಯದರ್ಶಿ ಸ್ವರಾಜ್ ಶೆಟ್ಟಿ, ರಾಜಕುಮಾರ್, ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಜಾನ್ಸನ್ ಜೆರೋಮ್ ಡಿಸೋಜ, ಉದ್ಯಮಿ ಧನಂಜಯ ಶೆಟ್ಟಿಗಾರ್, ಕೆಮ್ರಾಲ್ ಗ್ರಾಮ ಪಂಚಾಯಿತಿ ಸದಸ್ಯ ಮಯ್ಯದ್ದಿ ಪಕ್ಷಿಕೆರೆ ಮತ್ತಿತರರು ಉಪಸ್ಥಿತರಿದ್ದರು.
ಕಿನ್ನಿಗೋಳಿ ಬಸ್ಸು ಚಾಲಕ-ನಿರ್ವಾಹಕರ ಸಂಘದ ಅಧ್ಯಕ್ಷ ಭಾಸ್ಕರ ಅಮೀನ್ ಉಲ್ಲಂಜೆ, ಸ್ವಾಗತಿಸಿದರು. ಶರತ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Kinnigoli03121312 Kinnigoli03121313 Kinnigoli03121314 Kinnigoli03121315 Kinnigoli03121316 Kinnigoli03121317

 

Comments

comments

Comments are closed.

Read previous post:
Kinnigoli03121311
ಅಜ್ ಅಮಿ ಕೊಂಕ್ಣಿ ಉಲವ್ಯಾಂ – ಸನ್ಮಾನ

ಕಿನ್ನಿಗೋಳಿ: ದಾಯ್ಚಿ ದುಬಾಯಿ ಇಂಡಿಯಾ ಮಂಗಳೂರು ಘಟಕ ಹಾಗೂ ಸ್ಥಳೀಯ ಕೆಲವು ಕೊಂಕಣಿ ಸಂಘಟನೆಗಳ ಸಹಯೋಗದಲ್ಲಿ ಭಾನುವಾರ ಕಿನ್ನಿಗೋಳಿ ಮೂರುಕಾವೇರಿ ಸಮೀಪದ ಕೊಲದಲ್ಲಿ ನಡೆದ "ಅಜ್ ಅಮಿ...

Close