ತೋಕೂರು : N S S ಶಿಬಿರದ ಸಮಾರೋಪ

ಕಿನ್ನಿಗೋಳಿ: ವಿದ್ಯಾರ್ಥಿಗಳು ಎನ್.ಎಸ್.ಎಸ್.ನ ಧ್ಯೇಯೋದ್ದೇಶಗಳನ್ನು ತಮ್ಮ ಜೀವನದಲ್ಲಿ ಆಳವಡಿಸಿದ್ದಲ್ಲಿ ರಾಷ್ರ್ಟೋನ್ನತಿ ಸಾಧ್ಯ, ಮುಂದಿನ ದಿನಗಳಲ್ಲಿ ಭಾರತ ದೇಶವು ವಿಶ್ವದಲ್ಲಿಯೇ ಅತ್ತ್ಯುತ್ತಮ ದೇಶವಾಗಿ ಹೊರಹೊಮ್ಮಲಿದೆ ಇದರಲ್ಲಿ ಎನ್‌ಎಸ್‌ಎಸ್ ಸ್ವಯಂ ಸೇವಕರ ಪಾತ್ರ ಪ್ರಾಮುಖ್ಯವಾದುದು ಹಾಗೂ ಸ್ವಯಂ ಸೇವಕರು ಕಲಿತ ಆದರ್ಶಗಳನ್ನು ಜೀವನದುದ್ದಕ್ಕೂ ಪಾಲಿಸಿ ಸಮಾಜಕ್ಕೆ ಯೋಗ್ಯ ವ್ಯಕ್ತಿಗಳಾಗಿ ಬಾಳಬೇಕು ಎಂದು ಮುಲ್ಕಿ ನಾಗರಿಕ ಸಮಿತಿ ಅಧ್ಯಕ್ಷ ವಿನೋದ್ ಸಾಲ್ಯಾನ್ ಹೇಳಿದರು.

ತೋಕೂರು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಇತ್ತೀಚಿಗೆ ನಡೆದ ಎಂ.ಆರ್. ಪೂಂಜಾ ಕೈಗಾರಿಕಾ ತರಬೇತಿ ಸಂಸ್ಥೆ ಹಾಗೂ ತೋಕೂರು ತಪೋವನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಅತ್ಯುತ್ತಮ ಸೇವೆಗೈದ ಸ್ವಯಂಸೇವಕರನ್ನು ಹಾಗೂ ತಂಡಗಳನ್ನು ಪುರಸ್ಕರಿಸಲಾತು.
ವನಿತಾ ಉದಯ್ ಅಮೀನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಟಿ.ಜಿ. ಭಂಡಾರಿ, ಕುಸುಮಾ, ಮೋಹನ್ ಕುಮಾರ್, ಪಡು ಪಣಂಬೂರು ಪಂಚಾಯಿತಿ ಅಧ್ಯಕ್ಷೆ ಕೊಲ್ಲು, ಮತ್ತಿತರರು ಉಪಸ್ಥಿತರಿದ್ದರು.
ಶಿಬಿರಾಧಿಕಾರಿ ರಘುರಾಮ್ ರಾವ್ ಸ್ವಾಗತಿಸಿದರು, ಸಹ ಶಿಬಿರಾಧಿಕಾರಿ ಹರಿ. ಎಚ್. ಪ್ರಸ್ತಾವನೆಗೈದರು. ವಿಲ್ಪೆರ್ಡ್ ಜಾನ್ ಮಥಯಸ್ ವಂದಿಸಿದರು, ವಿಶ್ವನಾಥ್ ರಾವ್ ಕಾರ್ಯಕ್ರಮ ನಿರೂಪಿಸಿದರು.

Kinnigoli03121318

Comments

comments

Comments are closed.

Read previous post:
Kinnigoli03121317
ಕಿನ್ನಿಗೋಳಿ ಬಸ್ಸು – ಸಂಘ ಉದ್ಘಾಟನೆ

ಕಿನ್ನಿಗೋಳಿ: ಬಸ್ಸು ಚಾಲಕ-ನಿರ್ವಾಹಕರು ರಸ್ತೆ ನಿಯಮ ಪಾಲನೆ ಹಾಗೂ ಪ್ರಯಾಣಿಕರ ಬಗ್ಗೆ ನಿಗಾ ವಹಿಸಿ ಶಿಸ್ತು ಸಂಯಮದ ಉತ್ತಮ ಸೇವೆ ನೀಡಿದಾಗ ಸಮಾಜ ಅವರನ್ನು ಗೌರವದಿಂದ ಕಾಣುತ್ತದೆ. ಎಂದು...

Close