ಕಟೀಲು: ಪದವಿ ಪೂರ್ವ ಕಾಲೇಜು ವಾರ್ಷಿಕೋತ್ಸವ

ಕಿನ್ನಿಗೋಳಿ: ಛಲವಿದ್ದರೆ ಯಶಸ್ಸಿನ ಮೆಟ್ಟಲುಗಳನ್ನು ಏರಬಹುದು ಎಂದು ಕಟೀಲು ದೇವಳ ಆಡಳಿತಾಧಿಕಾರಿ ಎಸ್ ಕೃಷ್ಣಮೂರ್ತಿ ಹೇಳಿದರು.
ಭಾನುವಾರ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ಪದವಿ ಪೂರ್ವ ಕಾಲೇಜಿನ ವಾರ್ಷಿಕೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳದ ಅನುವಂಶಿಕ ಮೊಕ್ತೇಸರ ವಾಸುದೇವ ಆಸ್ರಣ್ಣ ಆಶೀರ್ವಚನಗೈದರು. ಕಟೀಲು ದೇವಳ ಅರ್ಚಕ ಅನಂತ ಪದ್ಮನಾಭ ಆಸ್ರಣ್ಣ ಶುಭಾಶಂಸನೆಗೈದರು. ಕಾಲೇಜಿನ ಪ್ರತಿಭಾನ್ವಿತ ವಿದ್ಯಾರ್ಥಿನಿ ಕುಮಾರಿ ಅನುಜ್ಞಾ ಭಟ್ ಅವರನ್ನು ಸನ್ಮಾನಿಸಲಾಯಿತು.
ಉದ್ಯಮಿ ಜಗದೀಶ್ ಶೆಟ್ಟಿ ಮರವೂರು, ಪ್ರೌಢಶಾಲಾ ಮುಖ್ಯ ಶಿಕ್ಷಕ ಸುರೇಶ್ ಭಟ್ ಉಪಸ್ಥಿತರಿದ್ದರು.
ಉಪನ್ಯಾಸಕಿ ಶ್ರೀಮತಿ ವನಿತಾ ಜೋಷಿ ಸ್ವಾಗತಿಸಿ, ಕಾಲೇಜು ಪ್ರಿನ್ಸಿಪಾಲ್ ಜಯರಾಮ ಪೂಂಜ ವಾರ್ಷಿಕ ವರದಿ ವಾಚಿಸಿದರು. ಕೇಶವ ಹೆಗ್ಡೆ ವಂದಿಸಿದರು. ವಿದ್ಯಾರ್ಥಿನಿಯರಾದ ಜೋಸ್ನಾ, ಸೌಜನ್ಯ ಹಾಗೂ ಕಾವ್ಯ ಕಾರ್ಯಕ್ರಮ ನಿರೂಪಿಸಿದರು.

Kinnigoli04121306

Comments

comments

Comments are closed.

Read previous post:
Kinnigoli04121305
ಪುನರೂರು ಪರಿಸರದಲ್ಲಿ ಚಿರತೆ ಹಾವಳಿ

ಕಿನ್ನಿಗೋಳಿ: ಅವ್ಯಾಹಿತ ಅರಣ್ಯ ನಾಶ ಹಾಗೂ ಗುಡ್ಡ ಬೆಟ್ಟಗಳು ಕೂಡ ನಾಶವಾಗುತ್ತಿರುವುದರಿಂದ ಪ್ರಾಣಿಗಳೂ ನಿರಾಶ್ರಿತರಾಗಿವೆ. ಆದುದರಿಂದ ಅವು ಮಾನವರ ನೆಲೆಯಲ್ಲಿ ಆಶ್ರಯ ಹುಡುಕುತ್ತಿವೆ. ಆದುದರಿಂದಲೇ ದೇಶದ ಅನೇಕ ಭಾಗಗಳಲ್ಲಿ...

Close