ಪುನರೂರು ಪರಿಸರದಲ್ಲಿ ಚಿರತೆ ಹಾವಳಿ

ಕಿನ್ನಿಗೋಳಿ: ಅವ್ಯಾಹಿತ ಅರಣ್ಯ ನಾಶ ಹಾಗೂ ಗುಡ್ಡ ಬೆಟ್ಟಗಳು ಕೂಡ ನಾಶವಾಗುತ್ತಿರುವುದರಿಂದ ಪ್ರಾಣಿಗಳೂ ನಿರಾಶ್ರಿತರಾಗಿವೆ. ಆದುದರಿಂದ ಅವು ಮಾನವರ ನೆಲೆಯಲ್ಲಿ ಆಶ್ರಯ ಹುಡುಕುತ್ತಿವೆ. ಆದುದರಿಂದಲೇ ದೇಶದ ಅನೇಕ ಭಾಗಗಳಲ್ಲಿ ಮೇಲಿಂದ ಮೇಲೆ ಹುಲಿ-ಚಿರತೆ, ಆನೆಗಳು ಗ್ರಾಮ ನಗರಗಳಲ್ಲಿ ಓಡಾಡಿ ಭಯ ಸೃಷ್ಟಿಸಿದ ಘಟನೆಗಳು ನಡೆಯುತ್ತಿವೆ. ಕಿನ್ನಿಗೋಳಿ ಸಮೀಪದ ಹಳೆಯಂಗಡಿ, ತೋಕೂರು, ಬೆಳ್ಳಾಯರು, ಪಡುಪಣಂಬೂರು, ಕಲ್ಲಾಪು, ಇಂದಿರಾನಗರ ಪರಿಸರದಲ್ಲಿ ನವೆಂಬರ್ ತಿಂಗಳಲ್ಲಿ ಚಿರತೆ ಹಾವಳಿ ವಿಪರೀತವಾಗಿತ್ತು.
ಮೂರು ದಿನದ ಹಿಂದೆ ಕಿನ್ನಿಗೋಳಿ ಸಮೀಪದ ಪುನರೂರು ಪರಿಸರದಲ್ಲಿ ಮತ್ತೆ ಚಿರತೆ ಪ್ರತ್ಯಕ್ಷವಾಗಿದೆ. ಮಂಗಳವಾರ ಸಂಜೆ ೫.೩೦ ರ ವೇಳೆಗೆ ಸ್ಥಳಿಯ ವ್ಯಕ್ತಿ ಸುನೀಲ್ ಅವರು ಹರಿಕೃಷ್ಣ ಪುನರೂರು ಅವರ ತೋಟದಲ್ಲಿ ಎರಡು ಚಿರತೆ ಮರಿಗಳು ಆಟವಾಡುತ್ತಿದ್ದನ್ನು ಕಂಡು ತನ್ನ ಸ್ನೇಹಿತರಿಗೆ ತಿಳಿಸಿ ಸುಮಾರು ಇಪ್ಪತ್ತು ಮಂದಿ ಯುವಕರು ಚಿರತೆ ಮರಿಗಳನ್ನು ಅಟ್ಟಾಡಿಸಿಕೊಂಡು ಹೋದಾಗ ಕಣ್ಮರೆಯಾಗಿತ್ತು. ರಾತ್ರಿ ಹತ್ತೂವರೆ ಗಂಟೆಗೆ ಅಸಹಜ ಶಬ್ಬ ಕೇಳಿದ ಯುವಕರು ಟಾರ್ಚ್‌ನೊಂದಿಗೆ ಈ ಪರಿಸರ ಹುಡುಕಾಡಿದಾಗ ಸ್ಥಳೀಯ ಭಾರತ ಮಾತಾ ಶಾಲೆಯ ಕಂಪೌಂಡ್ ಮೇಲೆ ದೊಡ್ಡ ಚಿರತೆಯೊಂದು ಮಲಗಿದ್ದನ್ನು ಕಂಡಿದ್ದಾರೆ. ರಾತ್ರಿ ಪೂರ್ತಿ ಚಿರತೆಯನ್ನು ಓಡಿಸುವ ಪ್ರಯತ್ನ ಸಾಗಿತ್ತು. ಈ ಪರಿಸರದಲ್ಲಿ ಕೆಲವು ದಿನಗಳಿಂದ ನಾಯಿಗಳು ಕಾಣೆಯಾಗಿದ್ದು ಚಿರತೆ ಹಿಡಿದು ತಿಂದಿರಬಹುದು ಎಂದು ಹೇಳಲಾಗುತ್ತಿದೆ. ಗುಡ್ಡ ಪ್ರದೇಶದಲ್ಲಿ ದೊಡ್ಡ ಹೆಗ್ಗಣಗಳನ್ನು ತಿಂದು ಹಾಕಿದ್ದು ಮತ್ತು ಮಲ ವಿಸರ್ಜನೆ ಮಾಡಿದ್ದು ಅರಣ್ಯಾಧಿಕಾರಿಗಳು ಚಿರತೆಯ ಓಡಾಟವನ್ನು ಧೃಡಿಕರಿಸಿದ್ದಾರೆ. ಈ ಪರಿಸರದಲ್ಲಿ ನೂರಾರು ಮನೆಗಳಿದ್ದು ಅಲ್ಲದೆ ಶಾಲಾ ಪರಿಸರದಿಂದಾಗಿ ಮಕ್ಕಳು ಮನೆಯಿಂದ ಹೊರಗಡೆ ಆಟವಾಡಲು ಮೈದಾನಕ್ಕೆ ತೆರಳುವುದಕ್ಕೂ ಭಯ ಪಡುವಂತಾಗಿದೆ.
ಚಿರತೆಗಳು ಹಳೆಯಂಗಡಿ, ಇಂದಿರಾನಗರ ತೋಕೂರು, ಬೆಳ್ಳಾಯರು, ಪಡುಪಣಂಬೂರು, ಕಲ್ಲಾಪು, ಕೆಂಚನಕೆರೆ ಪುನರೂರು ಶಿಮಂತೂರು ಬಳಕುಂಜೆ ಸಮೀಪದ ಕೊಲ್ಲೂರು ಪದವು ಶಾಂತಿಪಲ್ಕೆ ಸಂಕಲಕರಿಯ ಮುಂಡ್ಕೂರು ಬೋಳ ಕಜೆ ದಡ್ಡು ಪ್ರದೇಶಗಳನ್ನು ತಮ್ಮ ಬೇಟೆಗಾಗಿ ಮಾರ್ಗಸೂಚಿಯಾಗಿ ಕಂಡುಕೊಳ್ಳುತ್ತಿದೆ ಎಂದು ಹಿರಿಯರ ತರ್ಕ
ಗ್ರಾಮಸ್ಥರ ಮನವಿಗೆ ಶೀಘ್ರ ಕ್ರಮ ಕೈಗೊಂಡ ಅರಣ್ಯಾಧಿಕಾರಿಗಳು ಭಾರತ ಮಾತಾ ಶಾಲೆಯ ಮುಂದುಗಡೆಯ ಗುಡ್ಡದಲ್ಲಿ ಬೋನನ್ನು ತಂದು ಇರಿಸಿದ್ದಾರೆ. ಅರಣ್ಯ ಇಲಾಖೆಯ ಅಧಿಕಾರಿಗಳು ಬೋನಿನೊಳಗೆ ಬಾತುಕೋಳಿಗಳನ್ನು ಕೂಡಿ ಹಾಕಿ ಚಿರತೆ ಹಿಡಿಯಲು ಪ್ರಯತ್ನಿಸುತ್ತಿದ್ದಾರೆ.ಮಂಗಳವಾರ ರಾತ್ರಿಯಿಂದಲೇ ಸ್ಥಳೀಯ ಪುನರೂರು ನಿವಾಸಿಗಳಾದ ಸಂತೊಷ್, ಗೋಪಾಲಕೃಷ್ಣ, ಹರಿಣಾಕ್ಷ, ರಾಜೇಂದ್ರ, ಉಮೇಶ್, ವಿಜಯ್‌ರವರು ತಂಡವಾಗಿ ಕಾಡಿನ ಮೂಲೆ ಮೂಲೆಯನ್ನು ಅರಣ್ಯ ಇಲಾಖೆಯ ಸಿಬ್ಬಂದಿಗಳಾದ ಶಂಕರ, ಶೇಷಯ್ಯರೊಂದಿಗೆ ಚಿರತೆಯ ಬೇಟೆಗೆ ಇಳಿದಿದ್ದಾರೆ.

ಪುನರೂರುವಿನಲ್ಲಿ ಕಂಡು ಬಂದ ಚಿರತೆಗಳು ಹಳೆಯಂಗಡಿ ಪರಿಸರದಲ್ಲಿ ಕಂಡು ಬಂದ ಚಿರತೆಗಳೇ ಆಗಿರಬಹುದು. ಸ್ಥಳೀಯರು ಬುಧವಾರ ಬೆಳಿಗ್ಗೆ ಮಾಹಿತಿ ನೀಡಿದ ಕ್ಷಣವೇ ಬೋನನ್ನು ತಂದು ಇಟ್ಟಿದ್ದೇವೆ ಅಲ್ಲದೇ ಸ್ಥಳೀಯ ಯುವಕರ ಗುಂಪು ಉತ್ತಮ ಸ್ಪಂದನೆ ನೀಡುತ್ತಿದ್ದಾರೆ. ಚಿರತೆಯನ್ನು ಸೆರೆ ಹಿಡಿಯಲು ಶ್ರಮಿಸುತ್ತಿದ್ದೇವೆ
ಪರಮೇಶ್ವರ
ಅರಣ್ಯಾಧಿಕಾರಿ

Kinnigoli04121303 Kinnigoli04121304

Kinnigoli04121305

Comments

comments

Comments are closed.

Read previous post:
Kinnigoli04121301
ಮುಲ್ಕಿ; ಕೊಲೆಕಾಡಿ ಕುಂಜಾರುಗಿರಿ ‘ದೀಪೋತ್ಸವ’

ಮುಲ್ಕಿ; ಕೊಲೆಕಾಡಿ ಕುಂಜಾರುಗಿರಿ ಶ್ರೀ ಮಹಾಲಿಂಗೇಶ್ವರ ಶಾಸ್ತಾವು ದೇವಸ್ಥಾನ ಸೋಮವಾರ ‘ದೀಪೋತ್ಸವ’ ನಡೆಯಿತು. ಈ ಸಂದರ್ಭ ಜಿಲ್ಲೆಯ ಸುಪ್ರಸಿದ್ದ ಕಲಾವಿದರಿಂದ ’ವಿಶ್ವಕರ್ಮಾನುಗ್ರಹ’ ಯಕ್ಷಗಾನ ತಾಳಮದ್ದಳೆ ಯನ್ನು ಅರ್ಚಕ...

Close