ಕಿನ್ನಿಗೋಳಿಯಲ್ಲಿ ಬಿಜೆಪಿ ವಿಜಯೋತ್ಸವ

ಕಿನ್ನಿಗೋಳಿ : ನಾಲ್ಕು ರಾಜ್ಯಗಳಲ್ಲಿ ಭಾರತೀಯ ಜನತಾ ಪಾರ್ಟಿ ಅತ್ಯಧಿಕ ಸ್ಥಾನಗಳನ್ನು ಗಳಿಸಿದ ಹಿನ್ನಲೆಯಲ್ಲಿ ಕಿನ್ನಿಗೋಳಿಯಲ್ಲಿ ಬಿಜೆಪಿ ಕಾರ್ಯಕರ್ತರು ಕಿನ್ನಿಗೋಳಿ ಬಸ್ಸು ನಿಲ್ದಾಣದ ಬಳಿ ಪಟಾಕಿ ಸಿಡಿಸಿ, ಸಿಹಿ ತಿಂಡಿ ವಿತರಿಸಿ ವಿಜಯೋತ್ಸವವನ್ನು ಆಚರಿಸಿದರು. ಈ ಸಂದರ್ಭ ಬಿಜೆಪಿ ಮುಲ್ಕಿ ಮೂಡಬಿದ್ರೆ ಪ್ರಧಾನ ಕಾರ್ಯದರ್ಶಿ ದೇವಪ್ರಸಾದ್ ಪುನರೂರು, ಜಿಲ್ಲಾ ಪಂಚಾಯಿತಿ ಈಶ್ವರ್ ಕಟೀಲ್, ಜಿಲ್ಲಾ ಸಮಿತಿಯ ಭುವನಾಭಿರಾಮ ಉಡುಪ, ಕಸ್ತೂರಿ ಪಂಜ, ಮೆನ್ನಬೆಟ್ಟು ಪಂಚಾಯಿತಿ ಉಪಾಧ್ಯಕ್ಷೆ ಸರೋಜಿನಿ, ಶೈಲಾ ಶೆಟ್ಟಿ, ರಘುರಾಮ, ಮಾಧವ, ದೇವಿ ಪ್ರಸಾದ್ ಶೆಟ್ಟಿ, ಕೃಷ್ಣ ಶೆಟ್ಟಿಗಾರ್ ಮತ್ತಿತರರು ಉಪಸ್ಥಿತರಿದ್ದರು.

Kinnigoli 10121309 Kinnigoli 10121310

Comments

comments

Comments are closed.

Read previous post:
Kinnigoli 10121308
ಏಳಿಂಜೆ ಪೈಪ್ ಲೈನ್ ಕಾಮಾಗಾರಿ

ಕಿನ್ನಿಗೋಳಿ :  ಐಕಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಏಳಿಂಜೆಯಲ್ಲಿ ಕುಡಿಯುವ ನೀರಿನ ಯೋಜನೆಯ ಜಿಲ್ಲಾ ಪಂಚಾಯಿತಿ ಎರಡು ಲಕ್ಷ ಅನುದಾನದ ಪೈಪ್ ಲೈನ್ ಕಾಮಾಗಾರಿಯ ಗುದ್ದಲಿ ಪೂಜೆಯನ್ನು ಜಿಲ್ಲಾ...

Close