ಐಕಳ ಶಾಲೆ : ಪ್ರತಿಭಾ ಕಾರಂಜಿ

ಕಿನ್ನಿಗೋಳಿ : ಪ್ರತಿಭಾ ಕಾರಂಜಿಯಂತಹ ಪಠ್ಯೇತರ ಚಟುವಟಿಕೆಯಲ್ಲಿ ಪಾಲ್ಗೊಳ್ಳುವುದರಿಂದ ವಿದ್ಯಾರ್ಥಿಯ ಕಲಿಕಾ ಸಾಮಾರ್ಥ್ಯ ವ್ಯಕ್ತಿತ್ವ ವಿಕಸನ ಹಾಗೂ ನಾಯಕತ್ವದ ಗುಣ ವೃದ್ಧಿಯಾಗುತ್ತದೆ ಸುಪ್ತ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ಪರಿಪಾಠ ಪೋಷಕರಲ್ಲಿ ಬೆಳೆಯಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಸದಸ್ಯೆ ಆಶಾ ರತ್ನಾಕರ ಸುವರ್ಣ ಹೆಗ್ಡೆ ಹೇಳಿದರು.
ದ.ಕ. ಜಿಲ್ಲಾ ಪಂಚಾಯಿತಿ ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ, ಸಂಪನ್ಮೂಲ ಕೇಂದ್ರ ಮಂಗಳೂರು ಉತ್ತರ ವಲಯ, ಉಲ್ಲಂಜೆ ಹಾಗೂ ಪದ್ಮನೂರು ಸಮೂಹ ಸಂಪನ್ಮೂಲ ಕೇಂದ್ರಗಳ ಜಂಟಿ ಆಶ್ರಯದಲ್ಲಿ ಇತ್ತೀಚೆಗೆ ಐಕಳ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಉಲ್ಲಂಜೆ ಹಾಗೂ ಪದ್ಮನೂರು ಕ್ಲಸ್ಟರ್ ವಲಯ ಮಟ್ಟದ ಕಿರಿಯ ವಿಭಾಗದ ಪ್ರತಿಭಾ ಕಾರಂಜಿ ಸಮಾರಂಭದಲ್ಲಿ ಮಾತನಾಡಿದರು.
ಐಕಳ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪದ್ಮಿನಿ ವಸಂತ್ ಅಧ್ಯಕ್ಷತೆ ವಹಿಸಿದ್ದರು.
ಸುಧಾಮ ಶೆಟ್ಟಿ, ಸುರೇಶ್ ಸುವರ್ಣ, ಶಂಕರ್ ಶೆಟ್ಟಿ, ಶಾಲಾಭಿವೃದ್ಧಿ ಸಂಘದ ಅಧ್ಯಕ್ಷೆ ಹೇಮಲತಾ, ಸಿ.ಆರ್.ಪಿ. ಜಗದೀಶ್ ನಾವಡ ಉಪಸ್ಥಿತರಿದ್ದರು.
ಐಕಳ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಜೂಲಿಯೆಟ್ ಸ್ವಾಗತಿಸಿ ಶಿಕ್ಷಕಿ ಜಯಶ್ರೀ ವಂದಿಸಿದರು. ವೀಡಾ ಮರಿಯ ಕಾರ್ಯಕ್ರಮ ನಿರೂಪಿಸಿದರು.

Comments

comments

Comments are closed.

Read previous post:
Kinnigoli 10121304
ಕಟೀಲು ಸೈಕಲ್ ವಿತರಣೆ

ಕಿನ್ನಿಗೋಳಿ : ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಳ ಫ್ರೌಢ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಯುವಜನ ಸೇವೆ ಹಾಗೂ ಮೀನುಗಾರಿಕಾ ಸಚಿವರಾದ ಅಭಯಚಂದ್ರ ಜೈನ್ ಸೋಮವಾರ ಕರ್ನಾಟಕ ಸರಕಾರದ ಯೋಜನೆಯ ಸೈಕಲ್‌ಗಳನ್ನು...

Close