ಕಿನ್ನಿಗೋಳಿ : ಗೇರು ಪುನಶ್ಚೇತನ ಮಾಹಿತಿ ಶಿಬಿರ

ಕಿನ್ನಿಗೋಳಿ : ಲಾಭದಾಯಕ ಉಪಬೆಳೆಗಳತ್ತ ಆಸಕ್ತಿ ವಹಿಸುವುದು ಉತ್ತಮ. ಗೇರು ತೋಟಗಳ ಪುನಶ್ಚೇತನದಿಂದ ಉತ್ತಮ ಫಸಲು ಪಡೆಯಲು ಸಾದ್ಯ, ಗೇರು ಬೀಜಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೇಡಿಕೆಯಿರುದರಿಂದ ಕೃಷಿಕರು ಸರ್ಕಾರದ ಸವಲತ್ತುಗಳನ್ನು ಪಡಕೊಳ್ಳಬೇಕು ಎಂದು ಜಿಲ್ಲಾ ಪಂಚಾಯಿತಿ ಸದಸ್ಯೆ ಆಶಾ ರತ್ನಾಕರ ಸುವರ್ಣ ಹೇಳಿದರು.
ತೋಟಗಾರಿಕೆ ಇಲಾಖೆ ಜಿ.ಪಂ. ಮಂಗಳೂರು ಹಾಗೂ ರಾಷ್ಟ್ರೀಯ ತೋಟಗಾರಿಕೆ ಮಿಷನ್ ಇದರ ಸಂಯುಕ್ತ ಆಶ್ರಯದಲ್ಲಿ ಕಿನ್ನಿಗೋಳಿಯ ಯುಗಪುರುಷ ಸಭಾ ಭವನದಲ್ಲಿ ಮಂಗಳವಾರ ನಡೆದ ಗೇರು ಪುನಶ್ಚೇತನ ಮಾಹಿತಿ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶ್ಯಾಮಲ ಪಿ. ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ಸಂಪನ್ಮೂಲ ವ್ಯಕ್ತಿಗಳಾದ ಶಶಿಕಾಂತ್ ಕಟ್ಟಿಮನಿ ಹಾಗೂ ಕರುಣಾಕರ ಆಳ್ವ ಗೇರು ಕೃಷಿ ಹಾಗೂ ಪುನಶ್ಚೇತನದ ಬಗ್ಗೆ ಮಾಹಿತಿ ನೀಡಿದರು.
ಜಿಲ್ಲಾ ಪಂಚಾಯಿತಿ ಸದಸ್ಯ ಈಶ್ವರ ಕಟೀಲು, ತಾಲೂಕು ಪಂಚಾಯಿತಿ ಸದಸ್ಯ ರಾಜು ಕುಂದರ್, ಎ.ಪಿ.ಎಮ್.ಸಿ. ಸದಸ್ಯ ಪ್ರಮೋದ್ ಕುಮಾರ್, ಮೆನ್ನಬೆಟ್ಟು ಪಂಚಾಯಿತಿ ಅಧ್ಯಕ್ಷ ಜನಾರ್ಧನ ಕಿಲೆಂಜೂರು, ಯುಗಪುರುಷದ ಭುವನಾಭಿರಾಮ ಉಡುಪ ಮತ್ತಿತರರು ಉಪಸ್ಥಿತರಿದ್ದರು.
ಸಹಾಯಕ ತೋಟಗಾರಿಕೆ ಅಧಿಕಾರಿ ಚನ್ನರಸೇ ಗೌಡ ಕಾರ್ಯಕ್ರಮ ನಿರೂಪಿಸಿದರು.

Kinnigoli1212201301

Comments

comments

Comments are closed.

Read previous post:
Kinnigoli1112201301
ಭ್ರಾಮರೀ ಫ್ರೆಂಡ್ಸ್ ಕ್ಲಬ್ ಯಕ್ಷಗಾನ ಸಮಿತಿ

ಕಿನ್ನಿಗೋಳಿ: ಕಟೀಲು ಮಲ್ಲಿಗೆಯಂಗಡಿ ಭ್ರಾಮರೀ ಫ್ರೆಂಡ್ಸ್ ಕ್ಲಬ್ ಸಹಯೋಗದ ಯಕ್ಷಗಾನ ಸಮಿತಿಯ 2013-14ನೇ ಸಾಲಿನ ಅಧ್ಯಕ್ಷರಾಗಿ ರಮೇಶ್ ಪೂಜಾರಿ ಆಯ್ಕೆಯಾಗಿದ್ದಾರೆ. ಕಾರ್ಯದರ್ಶಿ ಪ್ರೇಮನಾಥ್ ಶೆಟ್ಟಿ, ಶರತ್ ಶೆಟ್ಟಿ, ಗೌರವಾಧ್ಯಕ್ಷರಾಗಿ ಮಂಜುನಾಥ...

Close