ಕ್ರೀಡಾಕೂಟದಲ್ಲಿ ಪ್ರಥಮ ಸ್ಥಾನ-ಮಮತಾ ಶರತ್ ಶೆಟ್ಟಿ

ಮೂಲ್ಕಿ : ರೋಟರಿಯ ಆತಿಥ್ಯದಲ್ಲಿ  ಮೂಲ್ಕಿ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಇತ್ತೀಚಿಗೆ ನಡೆದ ರೋಟರಿ ವಲಯ ಕ್ರೀಡಾಕೂಟದಲ್ಲಿ ಕಿನ್ನಿಗೋಳಿ ರೋಟರಿಯನ್ನು ಪ್ರತಿನಿಧಿಸಿದ ಮಮತಾ ಶರತ್ ಶೆಟ್ಟಿ ಯವರು ಮಹಿಳೆಯರ ವಿಭಾಗದ ಎತ್ತರ ಜಿಗಿತ,ಉದ್ದ ಜಿಗಿತ, 100 ಮೀ ಓಟ, ಗುಂಡೆಸೆತದಲ್ಲಿ ಪ್ರಥಮ ಸ್ಥಾನ ಗಳಿಸಿ ಕಲ್ಯಾಣಪುರದಲ್ಲಿ ನಡೆಯಲಿರುವ ಜಿಲ್ಲಾ ಮಟ್ಟದ ರೋಟರಿ ಜಿಲ್ಲಾ  ಕ್ರೀಡಾ ಕೂಟದಲ್ಲಿ ಭಾಗವಹಿಸಲು ಅರ್ಹತೆ ಹೊಂದಿದ್ದಾರೆ. ಇವರು ಕಿನ್ನಿಗೋಳಿ ಇನ್ನರ್ ವೀಲ್‌ನ ನಿಕಟಪೂರ್ವಾಧ್ಯಕ್ಷರಾಗಿದ್ದು, ಪ್ರಸ್ತುತ ಮುಂಡ್ಕೂರಿನ ಉಡುಪಿ ಜಿಲ್ಲಾ ಪಂಚಾಯತ್  ಹಿರಿಯ ಪ್ರಾಥಮಿಕ ಶಾಲೆಯಲ್ಲಿ  ದೈಹಿಕ ಶಿಕ್ಷಣ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

Kinnigoli1212201303

ಮೂಲ್ಕಿ : ರೋಟರಿಯ ಆತಿಥ್ಯದಲ್ಲಿ  ಮೂಲ್ಕಿ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ರವಿವಾರ ನಡೆದ ರೋಟರಿ ವಲಯ ಕ್ರೀಡಾಕೂಟದಲ್ಲಿ ಕಿನ್ನಿಗೋಳಿ ರೋಟರಿಯನ್ನು ಪ್ರತಿನಿಽಸಿದ ಶಮಾ ಶರತ್ ಶೆಟ್ಟಿ ಯವರು ಬಾಲಕಿಯರ ವಿಭಾಗದ 100 ಮೀ ಓಟದಲ್ಲಿ ಪ್ರಥಮ , ಉದ್ದ ಜಿಗಿತದಲ್ಲಿ ದ್ವಿತೀಯ ಸ್ಥಾನ ಗಳಿಸಿ ಕಲ್ಯಾಣಪುರದಲ್ಲಿ ನಡೆಯಲಿರುವ ಜಿಲ್ಲಾ ಮಟ್ಟ ರೋಟರಿ ಜಿಲ್ಲಾ  ಕ್ರೀಡಾ ಕೂಟದಲ್ಲಿ ಭಾಗವಹಿಸಲು ಅರ್ಹತೆ ಹೊಂದಿದ್ದಾರೆ.ಇವರು ಬೆಳ್ಮಣ್ ಶ್ರೀ ಲಕ್ಷ್ಮೀ ಜನಾರ್ದನ ಆಂಗ್ಲ ಮಾಧ್ಯಮ ಶಾಲಾ 6ನೇ ತರಗತಿಯ ವಿದ್ಯಾರ್ಥಿನಿ.

Kinnigoli1212201304

Comments

comments

Comments are closed.

Read previous post:
Kinnigoli1212201302
ತೋಕೂರು : ಸದಾಶಿವ ಸಾಲ್ಯಾನ್ ಸನ್ಮಾನ

ಕಿನ್ನಿಗೋಳಿ: ತೋಕೂರು ಶ್ರೀ ಸುಬ್ರಹ್ಮಣ್ಯ ದೇವಳದಲ್ಲಿ ಷಷ್ಠಿ ಮಹೋತ್ಸವದ ಸಂದರ್ಭ ರಾಜೋತ್ಸವ ಪುರಸ್ಕೃತ ಸದಾಶಿವ ಸಾಲ್ಯಾನ್ ಮತ್ತು ಸಾಧಕರಾದ ಕು.ರೀತಿಕಾ, ಪುಷ್ಪರಾಜ್ ಚೆಳ್ಳಾಯರು ಅವರನ್ನು ತೋಕೂರು ಶ್ರೀ ಸುಬ್ರಹ್ಮಣ್ಯ...

Close