ಶಿಕ್ಷಣ ಮಕ್ಕಳಿಗೆ ಮಾನಸಿಕ ಹೊರೆ ಆಗಬಾರದು

ಕಿನ್ನಿಗೋಳಿ: ಶಿಕ್ಷಣ ಕ್ಷೇತ್ರದಲ್ಲಿ ಸ್ಪರ್ಧೆಕ್ಕಿಂತ ಆತ್ಮವಿಶ್ವಾಸ ತುಂಬುವ ಕೆಲಸ ನಡೆಯಬೇಕಾಗಿದೆ. ಶಿಕ್ಷಣ ಮಕ್ಕಳಿಗೆ ಮಾನಸಿಕ ಹೊರೆ ಆಗಬಾರದು. ಪೋಷಕರು ಹಾಗೂ ಶಿಕ್ಷಕರು ಮಕ್ಕಳಿಗೆ ಸಂಸ್ಕಾರಯುತ ಗುಣ ಮಟ್ಟದ ಶಿಕ್ಷಣ ಕಲ್ಪಿಸಿ ಕೊಡಬೇಕು ಎಂದು ಬೆಥನಿ ಸಂಸ್ಥೆಯ ಮಂಗಳೂರು ಪ್ರಾಂತೀಯ ಮುಖ್ಯಸ್ಥೆ ಭಗಿನಿ ಸಿಸಿಲಿಯಾ ಮೆಂಡೊನ್ಸಾ ಬಿ.ಎಸ್ ಹೇಳಿದರು. ಮಂಗಳವಾರ ಕಿನ್ನಿಗೋಳಿ ಲಿಟ್ಲ್‌ಫ್ಲವರ್ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಿನ್ನಿಗೋಳಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅರುಣ್ ಪ್ರದೀಪ್ ಡಿ’ಸೋಜ, ಕಿನ್ನಿಗೋಳಿ ಸ್ಟೇಟ್ ಬ್ಯಾಂಕ್ ಪ್ರಬಂಧಕ ಕೇಶವ ನ್ಯಾಕ್, ಕಿನ್ನಿಗೋಳಿ ಮೇರಿವೆಲ್ ಕಾನ್ವೆಂಟ್ ಸುಪೀರಿಯರ್ ಭಗಿನಿ ವಿತಾಲೀಸ್ ಬಿ.ಎಸ್. , ಶಾಲಾ ಸಂಚಾಲಕಿ ರೋಸ್‌ಲೀಟಾ ಬಿ.ಎಸ್., ಶಾಲಾ ಶಿಕ್ಷಕ ರಕ್ಷಕ ಸಂಘದ ಉಪಾಧ್ಯಕ್ಷ ಶಶಿಕಾಂತ್ ಉಪಸ್ಥಿತರಿದ್ದರು. ಕಿನ್ನಿಗೋಳಿ ಲಿಟ್ಲ್‌ಫ್ಲವರ್ ಶಾಲಾ ಮುಖ್ಯ ಶಿಕ್ಷಕಿ ಭಗಿನಿ ಗ್ರೇಸಿ ಬಿ.ಎಸ್. ಸ್ವಾಗತಿಸಿದರು, ಶಿಕ್ಷಕ ಅಬ್ದುಲ್ ರಹಿಮಾನ್ ವಾರ್ಷಿಕ ವರದಿ ವಾಚಿಸಿದರು. ವೀಣಾ ವಂದಿಸಿ ಸೆಲಿನ್ ಪಿಂಟೊ ಕಾರ್ಯಕ್ರಮ ನಿರೂಪಿಸಿದರು. ಸಾಂಸ್ಕತಿಕ ಕಾರ್ಯಕ್ರಮದಲ್ಲಿ ಮಕ್ಕಳು ದೃಶ್ಯ ಮಾಧ್ಯಮ ಮತ್ತು ರೂಪಕದ ಮುಖಾಂತರ ನಂದಿಕೂರು ಹಾಗೂ ನಿಡ್ಡೋಡಿ ಉಷ್ಣ ವಿದ್ಯುತ್ ಸ್ಥಾವರದ ಒಳಿತು ಕೆಡುಕು ಆಗು ಹೋಗುಗಳ ಬಗ್ಗೆ ಕಿರುನಾಡಕ ಪ್ರಸ್ತುತ ಪಡಿಸಿ ಅಭಿನಯಿಸಿದ್ದು ವಿಶೇಷವಾಗಿತ್ತು.

Kinnigoli1212201306 Kinnigoli1212201307 Kinnigoli1212201308 Kinnigoli1212201309 Kinnigoli1212201310 Kinnigoli1212201311

Kinnigoli12122013123 Kinnigoli12122013124 Kinnigoli12122013125 Kinnigoli12122013126 Kinnigoli12122013127

Kinnigoli1212201312

Kinnigoli1212201313Kinnigoli1212201314Kinnigoli1212201315Kinnigoli1212201316Kinnigoli1212201317Kinnigoli1212201318Kinnigoli1212201319

Kinnigoli12122013120

Kinnigoli12122013122Kinnigoli12122013121

Comments

comments

Comments are closed.

Read previous post:
Kinnigoli1212201303
ಕ್ರೀಡಾಕೂಟದಲ್ಲಿ ಪ್ರಥಮ ಸ್ಥಾನ-ಮಮತಾ ಶರತ್ ಶೆಟ್ಟಿ

ಮೂಲ್ಕಿ : ರೋಟರಿಯ ಆತಿಥ್ಯದಲ್ಲಿ  ಮೂಲ್ಕಿ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಇತ್ತೀಚಿಗೆ ನಡೆದ ರೋಟರಿ ವಲಯ ಕ್ರೀಡಾಕೂಟದಲ್ಲಿ ಕಿನ್ನಿಗೋಳಿ ರೋಟರಿಯನ್ನು ಪ್ರತಿನಿಧಿಸಿದ ಮಮತಾ ಶರತ್ ಶೆಟ್ಟಿ ಯವರು ಮಹಿಳೆಯರ ವಿಭಾಗದ...

Close