ಕಾಂತಾಬಾರೆ – ಬೂದಾಬಾರೆ ಕಿರು ಚಿತ್ರ ಮುಹೂರ್ತ

ಕಿನ್ನಿಗೋಳಿ : ಮೂಲ್ಕಿ ಸೀಮೆಯ ಕಾರ್ನಾಡು ಬೀದಿಸಾನ, ನಡಿಸಾಲು ಬಾಕ್ಯಾರ ಕೋಡಿ, ಸೀಮಂತೂರ ಭಾವಗಳಲ್ಲಿ ಅವರು ತೋಡಿದ ಬಾವಿಗಳಿವೆ. ಇದೀಗ ಕಾಂತಬಾರೆ-ಬೂದಬಾರೆಯರ ಕುರಿತು ಕಿರು ಚಿತ್ರ ಸಂಪನ್ನಗೊಳ್ಳುತ್ತಿರುವುದು ಒಂದು ಸಾರ್ಥಕ ಪ್ರಯತ್ನ ಎಂದು ಮುಲ್ಕಿ ಸೀಮೆ ಅರಸರಾದ ದುಗ್ಗಣ್ಣ ಸಾವಂತರು ಹೇಳಿದರು.
ಶನಿವಾರ ಮೂಲ್ಕಿ ಕೊಲ್ಲೂರಿನ ಕಾಂತಾಬಾರೆ – ಬೂದಾಬಾರೆ ಜನ್ಮ ಕ್ಷೇತ್ರ ತಿರ್ತಗುಡ್ಡೆಯಲ್ಲಿ ಅವಳಿ ವೀರರಾದ ಕಾಂತಾಬಾರೆ ಬೂದಬಾರೆಯರ ಸತ್ಯಕಥೆ ಆಧಾರಿತ ಬಾರೆರ್ ಮೊಕುಲು ಬೀರೆರ್ ಕಿರುಚಿತ್ರದ ಶುಭ ಮೂಹೂರ್ತ ನೇರವೇರಿಸಿ ಮಾತನಾಡಿದರು.
ಧರ್ಮದರ್ಶಿ ಹರಿಕೃಷ್ಣ ಪುನರೂರು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು.
ಮೂಲ್ಕಿಯ ಒಂಭತ್ತು ಮಾಗಣೆಯ ಕಾರಣಿಕ ಪುರುಷರಾಗಿ ಮೆರೆದ ಸತ್ಯ ಶಕ್ತಿಗಳಾದ ಕಾಂತಾಬಾರೆ – ಬೂದಾಬಾರೆ ಅವರ ಜೀವನದ ಸತ್ಯ ಕಥೆ ಆದರಿಸಿದ ಚಿತ್ರವು ಮೂರು ಗಂಟೆ ಅವಧಿಯಾಗಿದ್ದು ಚಿತ್ರದಲ್ಲಿ ಎರಡು ಗಂಟೆ ಕಾಲದ ಸತ್ಯ ಕಥೆ, ಅರ್ಧ ಗಂಟೆ ಕಾರಣಿಕಗಳ ವಿವರ ಮತ್ತು ಉಳಿದ ಅರ್ಧಗಂಟೆ ಚರಿತ್ರೆಯಲ್ಲಿ ಬರುವ ಕೆಲವು ಕ್ಷೇತ್ರದ ಆಚಾರದ ಬಗ್ಗೆ ಮುಖ್ಯಸ್ಥರಿಂದ ಮಾಹಿತಿ ನೀಡಲಾಗುವುದು. ಮುಂದಿನ ಎಪ್ರಿಲ್ ಅಥವಾ ಮೇ ತಿಂಗಳ ಒಳಗೆ ಚಿತ್ರೀಕರಣ ಪೂರ್ಣಗೊಳಿಸಿ ತೆರೆಯ ಮೇಲೆ ತರಲಾಗುವುದು. ಎಂದು ಚಿತ್ರದ ಲೇಖಕ ಮತ್ತು ನಿರ್ದೇಶಕ ಪರಮಾನಂದ ವಿ. ಸಾಲ್ಯಾನ್ ತಿಳಿಸಿದರು.
ಈ ಸಂಧರ್ಭ ಚಿತ್ರದ ಶೀರ್ಷಿಕೆ ಗೀತೆಯನ್ನು ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ಉಮಾನಾಥ್ ಕೋಟ್ಯಾನ್ ಬಿಡುಗಡೆಗೊಳಿಸಿದರು.
ರಾಷ್ಟ್ರೀಯ ಬಿಲ್ಲವರ ಮಹಾ ಮಂಡಲ(ರಿ) ಮುಲ್ಕಿ ಅಧ್ಯಕ್ಷ ಜಯ ಸಿ. ಸುವರ್ಣ, ಮಂಗಳೂರು ಕಂಕನಾಡಿ ಶ್ರೀ ಬ್ರಹ್ಮ ಬೈದರ್ಕಳ ಕ್ಷೇತ್ರ ಅಧ್ಯಕ್ಷ ಚಿತ್ತರಂಜನ್, ಜಿಲ್ಲಾ ಪಂಚಾಯಿತಿ ಸದಸ್ಯ ಈಶ್ವರ್ ಕಟೀಲ್, ಸಮಾಜಸೇವಕ ದೇವದಾಸ್ ಸುವರ್ಣ, ಪಡುಬಿದ್ರಿ ಬಂಟರ ಸಂಘ ಅಧ್ಯಕ್ಷ ನವೀನ್ ಚಂದ್ರ ಶೆಟ್ಟಿ, ಬಿಲ್ಲವ ಸೇವಾ ಸಂಘ ಅಧ್ಯಕ್ಷ ಯದೀಶ್ ಅಮೀನ್ ಕೊಕ್ಕರಕಲ್, ಬಳ್ಕುಂಜೆ ಗ್ರಾಮ ಪಂಚಾಯಿತಿ ಅಧ್ಯಕ್ಷ ದಿನೇಶ್ ಪುತ್ರನ್, ಕಾಂತಾಬಾರೆ ಬೂದಾಬಾರೆ ಜನ್ಮ ಕ್ಷೇತ್ರ ಮೇಲಿನ ಗುಡ್ಡೆ ಅಂತಪ್ಪ ನಾಯ್ಗರು, ಕಾರ್ನಾಡು ಮಾಗಂದಡಿ ಗೋಪಾಲ ನಾಯ್ಗರು, ಸಸಿಹಿತ್ಲು ಶ್ರೀ ಸಾರಂತಾಯ ಗರೋಡಿ, ಉಳ್ಳಾಯ ದೈವಸ್ಥಾನ ಅನುವಂಶಿಕ ಮೊಕ್ತೇಸರ ಕಾಂತು ಲಕಣಗುರಿಕಾರ ಯಾನೆ ಯಾದವ ಜಿ. ಬಂಗೇರ, ಜನ್ಮ ಕ್ಷೇತ್ರದ ಕಾರ್ಯಧ್ಯಕ್ಷ ಬಿಪಿನ್ ಪ್ರಸಾದ್, ಕಾರ್ಯದರ್ಶಿ ಗಂಗಾಧರ ಪೂಜಾರಿ, ಮೈಕಲ್ ರೊಡ್ರಿಗಸ್, ಕಿರುಚಿತ್ರ ನಿರ್ಮಾಣ ಸಮಿತಿ ಅಧ್ಯಕ್ಷೆ ಗೀತಾಂಜಲಿ ಸುವರ್ಣ , ಕಾರ್ಯದರ್ಶಿ ದಯಾನಂದ ಹೆಜಮಾಡಿ, ಸಲಹೆಗಾರ ಹರಿಶ್ಚಂದ್ರ ಪಿ. ಸಾಲ್ಯಾನ್ ಮತ್ತಿತರರು ಉಪಸ್ಥಿತರಿದ್ದರು.
ಚಿತ್ರದ ಲೇಖಕ ಮತ್ತು ನಿರ್ದೇಶಕ ಪರಮಾನಂದ ವಿ. ಸಾಲ್ಯಾನ್ ಸ್ವಾಗತಿಸಿ, ಯಲ್ಲಪ್ಪ ಟಿ. ಸಾಲ್ಯಾನ್ ವಂದಿಸಿದರು. ವಿನಯ್ ಕಾರ್ಯಕ್ರಮ ನಿರೂಪಿಸಿದರು.

Kinnigoli 16121304 Kinnigoli 16121305 Kinnigoli 16121306 Kinnigoli 16121307 Kinnigoli 16121308 Kinnigoli 16121309 Kinnigoli 16121310 Kinnigoli 16121311

Comments

comments

Comments are closed.

Read previous post:
Kinnigoli 16121303
ಪಂಜ : ಹೈನುಗಾರಿಕೆ ಮಾಹಿತಿ ಶಿಬಿರ

ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್, ದಕ್ಷಿಣ ಕನ್ನಡ ಹಾಲು ಒಕ್ಕೂಟ ಮತ್ತು ಪಂಜ ಕೊಕುಡೆ ಹಾಲು ಉತ್ಪಾದಕರ ಸಂಘದ ಜಂಟೀ ಆಶ್ರಯದಲ್ಲಿ ಪಂಜ ಕೊಯಿಕುಡೆ...

Close